Advertisement
ಅಧ್ಯಕ್ಷೆ ಉಮಾವತಿ ಮಣಿಯಾಣಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ಗ್ರಾಮದ ಪುದ್ದೊಟ್ಟಿನಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡಲು ಘಟಕ ಸ್ಥಾಪಿಸಲು ಕಂದಾಯ ಇಲಾಖೆ ಸ್ಥಳ ಗುರುತಿಸಿ ಪಂಚಾಯತ್‌ಗೆ ವರ್ಗಾಯಿಸಿದ ಜಾಗವನ್ನು ಸಮತಟ್ಟು ಮಾಡಲಾಗಿತ್ತು. ಆದರೆ ಈಗ ಕುಡಿಯುವ ನೀರು ಕಲುಷಿತಗೊಳ್ಳುತ್ತದೆ. ಅಲ್ಲದೆ ಸುತ್ತಮುತ್ತ ಅದರ ದುರ್ವಾಸನೆಯ ಸಮಸ್ಯೆ, ಕಲುಷಿತ ನೀರು ಕೃಷಿ ಭೂಮಿಗೆ ನುಗ್ಗಿ ಜಮೀನು ಹಾಳಾಗುವ ಭೀತಿ ವ್ಯಕ್ತಪಡಿಸಿ ನಾಗರಿಕರು ದೂರು ನೀಡಿದ್ದಾರೆ. ಘಟಕಕ್ಕೆ ಸಂಬಂಧಿಸಿದ ಕೆಲಸವನ್ನು ಮುಂದುವರಿಸಬಾರದು ಎಂದು ತಾಲೂಕು ಆರೋಗ್ಯಾಧಿಕಾರಿಯವರಿಂದ ಪತ್ರ ಪಂಚಾಯತ್‌ಗೆ ಬಂದ ಬಗ್ಗೆ ಚರ್ಚೆ ನಡೆಸಲಾಯಿತು.
ಪುದ್ದೊಟ್ಟಿನಲ್ಲಿ ಘನ ತ್ಯಾಜ್ವ ವಿಲೇವಾರಿ ಘಟಕಕ್ಕೆ ಆಕ್ಷೇಪ ಬಂದ ಕಾರಣ ಬದಲಿ ವ್ಯವಸ್ಥೆ ಆಗುವವರೆಗೆ ಅಂಗಡಿಗಳ ತ್ಯಾಜ್ಯ ನಿರ್ವಹಣೆ ಅಸಾಧ್ಯ. ಅಂಗಡಿಯವರು ಅವರ ಕಸವನ್ನು ಎಲ್ಲೊಂದರಲ್ಲಿ ಹಾಕುವಂತಿಲ್ಲ. ಘನ ತ್ಯಾಜ್ಯ ಘಟಕ ಆಗು ವವರೆಗೆ ತ್ಯಾಜ್ಯವನ್ನು ಅವರೇ ವಿಲೇವಾರಿ ಮಾಡ ಬೇಕು ಎಂದು ನಿರ್ಧರಿಸಿ ಈ ಕುರಿತುಅವರಿಗೆ ತಿಳಿಸುವ ಬಗ್ಗೆ ನಿರ್ಣಯಿಸಲಾಯಿತು.
Related Articles
ಕುಸಿದು ಬೀಳುವ ಸ್ಥಿತಿಯಲ್ಲಿರುವ ಮಿತ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ದುರಸ್ತಿಗೊಳಿಸಲು ಆಗ್ರಹಿಸಿ ಜಿ.ಪಂ.ಗೆ ಬರೆಯಲು ನಿರ್ಣಯಿಸಲಾಯಿತು.
Advertisement
ಇತ್ತೀಚೆಗೆ ನಿಧನ ಹೊಂದಿದ ಹಿರಿಯರಾದ ಆನಾಜೆ ಗಣೇಶ ರೈ ಅವರ ಬಗ್ಗೆ ಸದಸ್ಯ ವಿನೋದ್ ರೈ ಗುತ್ತು ಮಾತನಾಡಿದರು. ಅವರ ಗೌರವಾರ್ಥ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ತಾ.ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ, ಉಪಾಧ್ಯಕ್ಷೆ ಭವಾನಿ ಕೆ., ಸದಸ್ಯರಾದ ಪಾರ್ವತಿ ಲಿಂಗಪ್ಪ ಗೌಡ, ಪ್ರಕಾಶ್ ರೈ, ಐತ್ತಪ್ಪ ಜಿ., ದಿನೇಶ್ ಜಿ., ಜಗನ್ನಾಥ ರೈ, ರಕ್ಷಣ್ ರೈ, ವಿನೋದ್ ರೈ ಗುತ್ತು.ಮೊಯಿದು ಕುಂಞೆ ಕೋನಡ್ಕ, ಭವಾನಿ ಪಿ., ಶಾಲಿನಿ ಘಾಟೆ, ದಿವ್ಯಾ ಪಿ., ಬೇಬಿ ಜಯರಾಂ, ಪುಷ್ಪಲತಾ, ಪದ್ಮಾವತಿ ಡಿ., ಪ್ರೇಮಲತಾ, ರಮೇಶ್ ಶೆಟ್ಟಿ ಕೊಮ್ಮಂಡ, ಪಿಡಿಒ ಶಾಂತಾರಾಮ ಉಪಸ್ಥಿತರಿದ್ದರು. ಕಾರ್ಯದರ್ಶಿ ಬಾಬು ನಾಯ್ಕ ಸ್ವಾಗತಿಸಿದರು. ಸಿಬಂದಿ ರಾಮಣ್ಣ, ಸಂದೀಪ್, ಚಂದ್ರಾವತಿ, ಸವಿತಾ ಸಹಕರಿಸಿದರು.