Advertisement

“ಗಂಟುಮೂಟೆ’ವಿದೇಶ ಯಾತ್ರೆ

09:24 AM Jul 24, 2019 | Lakshmi GovindaRaj |

ಇತ್ತೀಚೆಗಷ್ಟೆ ನ್ಯೂಯಾರ್ಕ್‌ ಫಿಲಂ ಫೆಸ್ಟಿವಲ್‌ ನಲ್ಲಿ “ಬೆಸ್ಟ್‌ ಸ್ಕ್ರೀನ್‌ ಪ್ಲೇ’ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದು, ಬಳಿಕ ಕೆನಡಾ ಫಿಲಂ ಅವಾರ್ಡ್ಸ್‌ನಲ್ಲಿ ಪ್ರದರ್ಶನಗೊಂಡ, “ಗಂಟುಮೂಟೆ’ ಚಿತ್ರ ಇದೀಗ ಇಂಡಿಯನ್‌ ಫಿಲಂ ಫೆಸ್ಟಿವಲ್‌ ಆಫ್ ಮೆಲ್ಬೋರ್ನ್ನಲ್ಲಿ, ಆಸ್ಟ್ರೇಲಿಯನ್‌ ಪ್ರೀಮಿಯರ್‌ಗೆ ಆಯ್ಕೆಯಾಗಿದೆ. ಅಮೇಯುಕ್ತಿ ಸ್ಟುಡಿಯೊಸ್‌ ನಿರ್ಮಿಸಿರುವ “ಗಂಟುಮೂಟೆ’ ಚಿತ್ರವನ್ನು ರೂಪ ರಾವ್‌ ನಿರ್ದೇಶಿಸಿದ್ದಾರೆ. ತೇಜು ಬೆಳವಾಡಿ ಹಾಗು ನಿಶ್ಚಿತ್‌ ಕೊರೋಡಿ ಚಿತ್ರದ ಮುಖ್ಯ ತಾರಾಗಣದಲ್ಲಿ ಅಭಿನಯಿಸಿದ್ದಾರೆ.

Advertisement

90 ರ ದಶಕದಲ್ಲಿ, “ಸಿನಿಮಾ’ದ ಹಾಗೆ “ಜೀವನ’ ಇರತ್ತೆ ಅಂತ ಭ್ರಮಿಸೋ ಹದಿನಾರರ ಹರೆಯದ ಹುಡುಗಿ “ಮೀರಾ’ಳ ನಿಜ ಪ್ರಪಂಚದೆಡೆಗೆ ಪ್ರಯಾಣದ ಕಥಾನಕ ಹೊಂದಿರುವ “ಗಂಟುಮೂಟೆ’ ಚಿತ್ರದಲ್ಲಿದ್ದು, ಚಿತ್ರವನ್ನು ವೀಕ್ಷಿಸಿದ ನಟಿ ಸೀಮಾ ಬಿಸ್ವಾಸ್‌, ಆದಿಲ್‌ ಹುಸೈನ್‌ ಮೊದಲಾದವರು “ಗಂಟುಮೂಟೆ’ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮುಂದಿನ ತಿಂಗಳು “ಗಂಟುಮೂಟೆ’ ಚಿತ್ರದಲ್ಲಿ ಕರ್ನಾಟಕದಾದ್ಯಂತ ಬಿಡುಗಡೆ ಆಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next