ಮುಂಬೈ: ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರ, ಆಲಿಯಾ ಭಟ್ ಪ್ರಧಾನ ಪಾತ್ರದಲ್ಲಿ ನಟಿಸಿರುವ “ಗಂಗೂಬಾಯಿ ಕಥಿಯಾವಾಡಿ”,ಮೊದಲ ದಿನವೇ 10.5 ಕೋಟಿ ರೂಪಾಯಿ ಗಳಿಸಿ ಭರ್ಜರಿ ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ಮಾತ್ರವಲ್ಲದೆ ನೈಜ ಘಟನೆ ಆಧಾರಿತ ಚಿತ್ರದ ಕುರಿತಾಗಿ ಉತ್ತಮ ಪ್ರಶಂಸೆಯೂ ವ್ಯಕ್ತವಾಗಿದೆ.
ಚಿತ್ರದ ಆರಂಭಿಕ ದಿನದ ಕಲೆಕ್ಷನ್ ಅನ್ನು ಬನ್ಸಾಲಿ ಪ್ರೊಡಕ್ಷನ್ಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಬಾಕ್ಸಾಫೀಸ್‌ನಲ್ಲಿ ಗಂಗೂಬಾಯಿ ಜಿಂದಾಬಾದ್” ಎಂದು ಪೋಸ್ಟ್ ಬರೆಯಲಾಗಿದೆ.
2 ನೇ ದಿನ ಚಿತ್ರ ಬಾಕ್ಸ್ ಆಫೀಸ್ 23.5 ಕೋಟಿ ಗಳಿಸಿದ್ದು, ವಾರಾಂತ್ಯದಲ್ಲಿ 40 ಕೋಟಿ ಸಂಗ್ರಹಿಸಲಿದೆ ಎಂದು ಸಿನಿ ಮಾಡಿ ಲೆಕ್ಕಾಚಾರ ಹಾಕಿದ್ದಾರೆ.
ಬರಹಗಾರ ಎಸ್ ಹುಸೇನ್ ಜೈದಿ ಅವರ ಪುಸ್ತಕ ಮಾಫಿಯಾ ಕ್ವೀನ್ಸ್ ಆಫ್ ಮುಂಬೈನ ಅಧ್ಯಾಯವನ್ನು ಆಧರಿಸಿದ ಈ ಚಲನಚಿತ್ರವು 1960 ರ ದಶಕದಲ್ಲಿ ಕಾಮಾಟಿಪುರದ ಅತ್ಯಂತ ಶಕ್ತಿಶಾಲಿ, ಪ್ರೀತಿಪಾತ್ರ ಮತ್ತು ಗೌರವಾನ್ವಿತ ಮಹಿಳೆ ಗಂಗೂಬಾಯಿಯಾಗಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ.
ಅಜಯ್ ದೇವಗನ್, ವಿಜಯ್ ರಾಜ್, ಸೀಮಾ ಪಹ್ವಾ ಮತ್ತು ಶಂತನು ಮಹೇಶ್ವರಿ ನಟಿಸಿರುವ ಚಿತ್ರವು ಬನ್ಸಾಲಿ ಪ್ರೊಡಕ್ಷನ್ಸ್ ಮತ್ತು ಜಯಂತಿಲಾಲ್ ಗಡಾದ ಪೆನ್ ಇಂಡಿಯಾ ಲಿಮಿಟೆಡ್‌ನ ಸಹ-ನಿರ್ಮಾಣವಾಗಿದೆ.
ಚಿತ್ರಕ್ಕಾಗಿ ಆಲಿಯಾ ಭಾರಿ ಪ್ರಚಾರವನ್ನೇನೂ ನಡೆಸಿರಲಿಲ್ಲ. ಶುಕ್ರವಾರ ಮುಂಬೈನ ಗ್ಯಾಲಕ್ಸಿ ಥಿಯೇಟರ್‌ಗೆ ಭೇಟಿ ನೀಡಿ ಚಿತ್ರಪ್ರೇಮಿಗಳ ಪ್ರತಿಕ್ರಿಯೆಯನ್ನು ವೀಕ್ಷಿಸಿದರು. ಚಿತ್ರದ ಸುತ್ತಲಿನ ಯಾವುದೇ ವಿವಾದಗಳಿಗೆ ಸಿಲುಕಿಕೊಳ್ಳುವುದನ್ನು ನಿರಾಕರಿಸಿದ್ದರು.