Advertisement

ಗಂಗೇನಹಳ್ಳಿ ಕೆರೆ ಈಗ ತ್ಯಾಜ್ಯ ವಿಲೇವಾರಿ ತಾಣ: ಆಕ್ರೋಶ

01:26 PM May 13, 2023 | Team Udayavani |

ಕಿಕ್ಕೇರಿ: ಪಟ್ಟಣಕ್ಕೆ ಹೊಂದಿಕೊಂಡಿರುವ ಗಂಗೇನಹಳ್ಳಿ ಕೆರೆಯ ಆಸುಪಾಸಿನ ನಿವಾಸಿಗಳು ನೆಮ್ಮದಿಯಿಂದ ವಾಸಿಸಲು ಆಗದೇ ನಿತ್ಯ ದುರ್ವಾಸನೆಯ ಕಿರಿಕಿರಿ ಅನುಭವಿಸುತ್ತಿದ್ದಾರೆ.

Advertisement

25 ಎಕರೆ ವಿಸ್ತಾರದ ಕೆರೆ ಹೂಳು ತುಂಬಿದ್ದು, ರೈತರು ಸ್ವಲ್ಪ ಮಣ್ಣನ್ನು ಜಮೀನಿಗೆ ಬಳಸಿಕೊಂಡಿ ದ್ದಾರೆ. ನೀರಾವರಿ ಇಲಾಖೆ ಕಾಟಾಚಾರಕ್ಕೆ ಅಲ್ಲಲ್ಲಿ ಹೂಳು ತೆಗೆದು ಕೈಚೆಲ್ಲಿದೆ. ಬೇಸಿಗೆ ಕಾಲವಾಗಿದ್ದು ಕೆರೆ ಒಣಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿ ರುವ ಆಸ್ಪತ್ರೆ, ಹೋಟೆಲ್‌, ಮಾಂಸ ದಂಗಡಿ, ಬೀದಿ ಬದಿ ಚಾಟ್ಸ್‌ ಅಂಗಡಿ ಯವರು ಅಳಿದುಳಿದ ಆಹಾರ, ಪ್ಲಾಸ್ಟಿಕ್‌ ಪೇಪರ್‌ ಮುಂದಾದವುಗಳನ್ನು ಕೆರೆ ಎಸೆಯುತ್ತಿದ್ದಾರೆ. ಕೆರೆ ಆಸುಪಾಸಿನ ಜನರಿಗೆ ತ್ಯಾಜ್ಯದ ದುರ್ವಾಸೆ ಸಹಿಸಲು ಕಷ್ಟವಾಗಿದೆ. ಆಸ್ಪತ್ರೆಯ ತ್ಯಾಜ್ಯ, ಸಿರಂಜ್‌ ಸೇರಿ ಮದ್ಯದ ಬಾಟಲ್‌ ನಂತಹ ವಸ್ತುಗಳು ಕೆರೆ ಸೇರುತ್ತಿವೆ. ಜೊತೆಗೆ ಮನೆಯಲ್ಲಿ ಬಳಸಿ ಬಿಸಾಡಿದ ವಸ್ತು, ಪ್ಲಾಸ್ಟಿಕ್‌ ವಸ್ತುಗಳ ಕೆರೆ ಸೇರುತ್ತಿವೆ.

ಸೊಳ್ಳೆ ಕಾಟ: ಈ ಅನುಪಯುಕ್ತ ವಸ್ತುಗಳು ಕರಗದೇ ಕೊಳೆಯುತ್ತಿವೆ. ಗಾಳಿ ಬಂದಾಗ ಅಸಹ್ಯಕರ ವಾಸನೆ ಪರಿಸರದಲ್ಲಿ ವ್ಯಾಪಿಸು ತ್ತಿದ್ದು, ನಿವಾಸಿಗಳಿಗೆ ತೊಂದರೆಯಾಗಿದೆ. ಕೊಳೆತ ತ್ಯಾಜ್ಯ ದಿಂದ ಸೊಳ್ಳೆಗಳ ಹಾವಳಿ ವಿಪರೀತ ವಾಗಿದೆ. ಕೆರೆ ಪಕ್ಕದಲ್ಲಿಯೇ ಶಾಲೆ ಇರುವುದ ರಿಂದ ಮಕ್ಕಳಿಗೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಿದೆ. ಹಗಲು ವೇಳೆಯೇ ಮುಲಾಮು ಹಚ್ಚಿಕೊಂಡು ಆಸುಪಾಸಿನ ನಿವಾಸಿಗಳು ಓಡಾಡುವಂತಾಗಿದೆ.

ರಾತ್ರಿ ವೇಳೆ ಸೊಳ್ಳೆ ಪರದೆ ಇಲ್ಲದೆ ಮಲಗುವಂತಾಗಿಲ್ಲ. ಮನೆ ಕಟ್ಟುವವರು, ರಿಪೇರಿ ಮಾಡುವವರು ಅಳಿದುಳಿದ ಕಲ್ಲು, ಮಣ್ಣು, ಮರಮುಗ್ಗಟ್ಟು ಕೆರೆಗೆ ತಂದು ಸುರಿಯುತ್ತಿದ್ದಾರೆ. ಇದರಿಂದ ವಾಸ ಮಾಡಲು ಕಷ್ಟವಾಗಿದೆ. ಮೊದಲು ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟವರು ಮುಂದಾಗಬೇಕು ಎನ್ನುವುದು ಸ್ಥಳೀಯ ನಿವಾಸಿ ಶೇಖರ್‌ ನಿವೇದನೆಯಾಗಿದೆ. ಕೆರೆಯ ಉಳಿಸುವುದು ಎಲ್ಲರ ಕರ್ತವ್ಯ. ಕೆರೆ ಇದ್ದರೆ ನಾವು ನೀವು ಎನ್ನುವ ಪರಿಕಲ್ಪನೆ ಎಲ್ಲರಲ್ಲಿ ಮೂಡಬೇಕು. ಕೆರೆಗೆ ತ್ಯಾಜ್ಯ ವಸ್ತುಗಳನ್ನು ಹಾಕದಂತೆ ಎಚ್ಚರಿಕೆ ನೀಡಲಾಗುವುದು ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಎಇಇ ಗುರುಪ್ರಸಾದ್‌.

Advertisement

Udayavani is now on Telegram. Click here to join our channel and stay updated with the latest news.

Next