Advertisement
ಬಿಜೆಪಿ ಸೇರಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಕಿಷ್ಕಿಂದಾ ಅಂಜನಾದ್ರಿಯನ್ನು ತಮ್ಮ ಭಾಷಣ ಮತ್ತು ಪ್ರಚಾರದಲ್ಲಿ ವ್ಯಾಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗಂಗಾವತಿ ಕ್ಷೇತ್ರಕ್ಕೆ ಪ್ರಚಾರಕ್ಕೆ ಆಗಮಿಸುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಮುಖಂಡರನ್ನು ಸ್ಥಳೀಯ ಮುಖಂಡರು ಅಂಜನಾದ್ರಿಗೆ ಪ್ರಥಮದಲ್ಲಿ ಕರೆದುಕೊಂಡು ಬಂದು ದೇವರ ದರ್ಶನ ಮಾಡಿಸುತ್ತಿದ್ದಾರೆ.
Related Articles
Advertisement
5 ಸಾವಿರ ಕೋಟಿ ರೆಡ್ಡಿ ಘೋಷಣೆಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸ್ಥಾಪನೆ ಮಾಡಿ ಗಂಗಾವತಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಳ್ಳಾರಿಯ ಗಣಿ ಧಣಿ ಗಾಲಿ ಜನಾರ್ದನರೆಡ್ಡಿ ಅವರು ಅಂಜನಾದ್ರಿಯಲ್ಲಿ ಮೂಲಸೌಕರ್ಯ ಕಲ್ಪಿಸುವ ಸಲುವಾಗಿ ಮುಂಬರುವ ನೂತನ ಸರ್ಕಾರದಲ್ಲಿ 5000 ಕೋಟಿ ರೂ.ಗಳನ್ನು ನೆರವು ಪಡೆಯಲಾಗುತ್ತದೆ.ಆದ್ದರಿಂದ ತಮ್ಮನ್ನು ಗಂಗಾವತಿ ಕ್ಷೇತ್ರದಿಂದ ಚುನಾಯಿಸುವಂತೆ ಪ್ರಚಾರದ ಪ್ರತಿ ಸಭೆಯಲ್ಲೂ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. 2 ಕೋಟಿಯಲ್ಲಿ ಮೆಟ್ಟಿಲು ನಿರ್ಮಾಣ: ಗಂಗಾವತಿ ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದ ಇಕ್ಬಾಲ್ ಅನ್ಸಾರಿ ತಾವು ಅಧಿಕಾರದಲ್ಲಿದ್ದಾಗ ಅಂಜನಾದ್ರಿ ಬೆಟ್ಟ ಮತ್ತು ಆದಿಶಕ್ತಿ ದೇಗುಲಕ್ಕೆ ತಲಾ ಎರಡು ಕೋಟಿ ರೂ.ಅನುದಾನ ಬಿಡುಗಡೆ ಮಾಡಿ ಅಂಜನಾದ್ರಿ ಬೆಟ್ಟಕ್ಕೆ ಮೆಟ್ಟಿಲು ಮತ್ತು ಬಿಸಿಲು ಬೀಳದಂತೆ ತಗಡಿನ ಹೊದಿಕೆಯನ್ನು ನಿರ್ಮಿಸಲಾಗಿದೆ.ಬಿಜೆಪಿ ಸರ್ಕಾರದವರು ಯಾವುದೇ ಅಭಿವೃದ್ಧಿಯನ್ನು ಮಾಡದೇ ಸುಳ್ಳು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ.ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂಜನಾದ್ರಿ ಗೆ ಹೆಚ್ಚಿನ ಅನುದಾನ ಮಂಜೂರಾಗಿದೆ ಎಂದು ಹೇಳುತ್ತಿದ್ದಾರೆ. ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಅಂಜನಾದ್ರಿ ಬೆಟ್ಟ ಪ್ರಚಾರದ ಸರಕಾಗಿದ್ದು ಪ್ರತಿಯೊಬ್ಬ ರಾಜಕಾರಣಿಗಳನ್ನು ಮತ್ತು ಮುಖಂಡರನ್ನು ಅಂಜನಾದ್ರಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದಲೇ ಪ್ರಚಾರ ಆರಂಭಿಸಿದ್ದಾರೆ. ಆನೆಗೊಂದಿ ಮತ್ತು ಅಂಜನಾದ್ರಿ ಭಾಗ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವುದರಿಂದ ಇಲ್ಲಿ ಪ್ರಾಧಿಕಾರದ ನಿಯಮಗಳನ್ನು ಪಾಲನೆ ಕಡ್ಡಾಯವಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಮಾಡಲು ಬರುವುದಿಲ್ಲ.ಸುತ್ತಲಿನ 15 ಹಳ್ಳಿಗಳಲ್ಲಿ ಹಂಪಿ ಪ್ರಾಧಿಕಾರದ ನಿಯಮಗಳು ಪಾಲನೆ ಮಾಡಬೇಕಾಗಿರುವುದರಿಂದ ಪ್ರಾಧಿಕಾರದ ನಿರಾಪೇಕ್ಷಣ ಪತ್ರ ತರುವುದು ಕಡ್ಡಾಯವಾಗಿದೆ . ಈ ನಿರಪೇಕ್ಷಣ ಪತ್ರಕ್ಕಾಗಿ ಆನೆಗೊಂದಿ ಭಾಗದ 15 ಗ್ರಾಮಸ್ಥರು ಹೊಸಪೇಟೆ ಮತ್ತು ಕಮಲಾಪುರಕ್ಕೆ ಅಲೆಯಬೇಕಾಗಿದೆ. ಇದನ್ನು ತಪ್ಪಿಸುವ ಕಾರ್ಯವನ್ನು ಕಾಂಗ್ರೆಸ್ ,ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ಮಾಡದೆ ಇರುವುದು ಈ ಭಾಗದ ಜನರಲ್ಲಿ ಆಕ್ರೋಕ್ಷಕ್ಕೆ ಕಾರಣವಾಗಿದೆ. ಕೆ.ನಿಂಗಜ್ಜ