Advertisement

ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸಿದರೂ ಗೇಜ್ ಹೆಚ್ಚಳವಿಲ್ಲ: ಆತಂಕದಲ್ಲಿ ರೈತರು

08:18 PM Jul 28, 2020 | sudhir |

ಗಂಗಾವತಿ: ತುಂಗಭದ್ರಾ ಎಡದಂಡೆಕಾಲುವೆಗೆ ಜು.25 ರಂದು ನೀರು ಹರಿಸಲಾಗಿದ್ದು ತಾಂತ್ರಿಕ ತೊಂದರೆ ನೆಪದಲ್ಲಿ ನೀರಿನ ಗೇಜ್ ಹೆಚ್ಚಳಕ್ಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು ಇನ್ನೂ ಸಹ ಸಾಣಾಪೂರ ಕೆರೆ ವರೆಗೆ ನೀರು ತಲುಪಿಲ್ಲ. ಮುಂಗಾರು ಹಂಗಾಮಿನ ನೀರನ್ನು ಈ ಭಾರಿ ಜುಲೈ ಅಂತ್ಯದ ವೇಳೆಗೆ ಹರಿಸುವಂತೆ ರೈತರ ಒತ್ತಡದ ಮಧ್ಯೆಯೂ ಎಡದಂಡೆ ಲೈನಿಂಗ್ ದುರಸ್ಥಿ ನೆಪದಲ್ಲಿ ಸುಮಾರು 64 ಕೋಟಿ ರೂ.ಗಳ ಟೆಂಡರ್ ಅಂತಿಮಗೊಳಿಸಿ ಸೋಮನಾಳ ಮತ್ತು ಡಂಕನಕಲ್ ಹತ್ತಿರ ಸದ್ಯ ಕಾಲುವೆ ಒಳಮೈ ಭದ್ರಪಡಿಸುವ ಲೈನಿಂಗ್ ಮಾಡಲಾಗಿದೆ.

Advertisement

ಅವಸರದಲ್ಲಿ ಜು.25 ರಂದು ಕಾಲುವೆ‌ನೀರು ಹರಿಸಲಾಗಿದೆ. ಈ‌ ಮಧ್ಯೆ ಡ್ಯಾಂ ಸಮೀಪದ ಮುನಿರಾಬಾದ್ ಗ್ರಾಮದ ಅನುಪಯುಕ್ತ ನೀರು ಹೋಗುವ ಸಣ್ಣಮೋರಿ ಎಡದಂಡೆ ಕಾಲುವೆ ಕೆಳಗೆ ಹೋಗಿದ್ದು ಅಪರಿಚಿತ ವಾಹನ ಮೋರಿಯ ಕಲ್ಲಿಗೆ ಡಿಕ್ಕಿ ಹೊಡೆದಿದ್ದರಿಂದ ಎಡದಂಡೆ ಕಾಲುವೆಯಲ್ಲಿ ಜು.26 ರಂದು ಸಂಜೆ ಸ್ವಲ್ಪ ಪ್ರಮಾಣದ ನೀರು ಸೋರಿಕೆ ಕಂಡುಬಂದಿದ್ದು ಕೂಡಲೇ ಕಾಲುವೆ ನೀರು ಕಡಿಮೆಗೊಳಿಸಿ ಮೋರಿಯನ್ನು ದುರಸ್ಥಿಮಾಡಲಾಗಿದೆ. ಜು.27 ರಂದು ಬೆಳಗಿನಿಂದ 600ಕ್ಯೂಸೆಕ್ಸ್ ನೀರು ಹರಿಸಿ ಗೇಜ್ ಹೆಚ್ಚಳ ಮಾಡಲಾಗಿದೆ.

ಮಂಗಳವಾರ ಸಂಜೆ ಶಿವಪೂರ ಕೆರೆ (ಬೋರಿಕಾ‌ಪವರ್ ಹೌಸ್)ಗೆ ನೀರು ತಲುಪಿದ್ದು ಗುರುವಾರದ ವೇಳೆಗೆ ರಾಯಚೂರು ಗಡಿ ತಲುಪಲಿವೆ ಎನ್ನಲಾಗಿದೆ.

ಆತಂಕದಲ್ಲಿ ರೈತರು: ಭತ್ತದ ಸಸಿ ಮಾಡಿ ಕೈಗೆ ಬಂದಿದ್ದು ನೀರು ಬರುವುದು ತಡವಾದರೆ ಸಸಿ ಬಲಿತು ನಾಟಿ ಮಾಡಲು ಆಗುವುದಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ.ಕೂಡಲೇ ಗೇಜ್ ಹೆಚ್ಚು ಮಾಡಿ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ.

Advertisement

ಗೇಜ್ ಹೆಚ್ಚಳ: ಜು.25 ರಂದು ಕಾಲುವೆಗೆ ನೀರು ಹರಿಸಲಾಗಿದೆ. ಅಲ್ಪ ಪ್ರಮಾಣದ ದುರಸ್ಥಿಕಾರ್ಯ ಮುನಿರಾಬಾದ್ ಹತ್ತಿರ ಮಾಡಲಾಗಿದ್ದು‌ ಮಂಗಳವಾರ ಸಂಜೆ 2500 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಪೂರ್ಣಪ್ರಮಾಣದ ನೀರು‌ಹರಿಸಲಾಗುವುದೆಂದು ತುಂಗಭದ್ರಾ ಯೋಜನೆ ಮುಖ್ಯ ಅಭಿಯಂತರ ಮಂಜಪ್ಪ ಉದಯವಾಣಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next