Advertisement
ಕಿದಿಯೂರು ಪಡುಕರೆ ಶ್ರೀದೇವಿ ಭಜನ ಮಂದಿರ ಬಳಿ ಬೆಳಗ್ಗೆ 7.51ಕ್ಕೆ ಸಮುದ್ರಕ್ಕೆ ಧುಮುಕಿದ ಗಂಗಾಧರ್ ದಡ ತಲುಪುವಾಗ ಮಧ್ಯಾಹ್ನ 1.25 ಆಗಿತ್ತು. ಈಜು ಆರಂಭ ಸ್ಥಳದಿಂದ ಕೊನೆಯ ತನಕವೂ ತೇಲುವ ಮಾರ್ಕಿಂಗ್ ಮಾಡಲಾಗಿತ್ತು. ಸಾಧನೆ ವೇಳೆ ಸುತ್ತಲೂ ರಕ್ಷಣಾ ಬೋಟ್‌ಗಳಿದ್ದವು. ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಗಂಗಾಧರ್ ಅವರ ಸಾಧನೆ ವೀಕ್ಷಣೆಗೆ ಸಾರ್ವಜನಿ ಕರನ್ನು ಬೋಟ್ ಮೂಲಕ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿತ್ತು.
ಬೆಳಗ್ಗೆ ಎಡಿಸಿ ಬಿ. ಸದಾಶಿವ ಪ್ರಭು ಅವರು ಈಜು ಸಾಧನೆಗೆ ಚಾಲನೆ ನೀಡಿದರು. ದ.ಕ. ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ, ಸರಸ್ವತಿ, ದಿವಾಕರ ಕುಂದರ್, ಆನಂದ ಪಿ. ಸುವರ್ಣ, ವಿಜಯ ಕುಂದರ್, ಸಾಧು ಸಾಲ್ಯಾನ್, ಮಲ್ಲೇಶ್ ಕುಮಾರ್, ನಾಗರಾಜ ಸುವರ್ಣ, ವಾಸುದೇವ ಖಾರ್ವಿ, ಕಡೆಕಾರು ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್ ಉಪಾಧ್ಯಕ್ಷ ಚಂದ್ರ ಎ. ಕುಂದರ್, ಹರ್ಷ ಮೈಂದನ್, ಪಾಂಡುರಂಗ ಮಲ್ಪೆ, ಲಕ್ಷ್ಮಣ ಮೈಂದನ್, ವಿಜಯ ಕುಂದರ್ ಉಪಸ್ಥಿತರಿದ್ದರು.
Related Articles
Advertisement
ಕಡಲು ಒಂದೇ ರೀತಿ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಸೋಮವಾರ ಬೆಳಗ್ಗಿನಿಂದಲೇ ಗಾಳಿ, ಅಲೆಗಳ ಅಬ್ಬರ ಹೆಚ್ಚಿತ್ತು. 60 ವರ್ಷದ ದಾಟಿದ ಮೇಲೆ ಸಮುದ್ರದಲ್ಲಿ ಈಜನ್ನು ಇನ್ನಷ್ಟು ಕರಗತ ಮಾಡಿಕೊಂಡಿದ್ದೇನೆ. ಕೆಲಸದಿಂದ ನಿವೃತ್ತನಾದ ಮೇಲೆ ಮಕ್ಕಳಿಗೆ ಉಚಿತವಾಗಿ ಈಜು ಕಲಿಸುತ್ತಿದ್ದೇನೆ. ಇಂದಿನ ಸಾಧನೆ ತುಂಬ ಖುಷಿ ಕೊಟ್ಟಿದೆ.– ಗಂಗಾಧರ ಜಿ. ಕಡೆಕಾರ್ ಗಂಗಾಧರ್ ಮಹತ್ವ ಪೂರ್ಣ ದಾಖಲೆ ಬರೆದಿದ್ದಾರೆ. ನನ್ನ ಜೀವನದಲ್ಲೂ ಈ ದಾಖಲೆ ಸದಾ ನೆನಪಿರಲಿದೆ. ಸರಪಳಿಗಳಿಂದ ಕಾಲು, ಕೈಗಳನ್ನು ಬಿಗಿದುಕೊಂಡು ಈಜುವುದು ಸುಲಭವಲ್ಲ. 66ನೇ ವಯಸ್ಸಿನಲ್ಲಿ ಮಾಡಿರುವ ಈ ಸಾಧನೆ ಯುಕರಿಗೆ ಪ್ರೇರಣದಾಯಿ.
-ಮನೀಷ್ ವೈಷ್ಣೋಯ್,
ತೀರ್ಪುಗಾರರು / ಗೋಲ್ಡನ್ ಬುಕ್ ಅಫ್ ವರ್ಲ್ಡ್ ರೆಕಾರ್ಡ್ಸ್‌ನ ಮುಖ್ಯಸ್ಥ