ಕುಷ್ಠಗಿ (ಕೊಪ್ಪಳ) : ಖ್ಯಾತ ಚಿತ್ರ ಸಾಹಿತಿ ಕೆ ಕಲ್ಯಾಣ ಅವರ ದಾಂಪತ್ಯದ ಬಿರುಕಿಗೆ ಕಾರಣವಾಗಿದ್ದ ಹಾಗೂ ವಂಚನೆ ಪ್ರಕರಣದಲ್ಲಿ ಸಿಲುಕಿದ್ದ ಗಂಗಾ ಕುಲಕರ್ಣಿ ಇಂದು ಕುಷ್ಟಗಿ ಕೋರ್ಟ್ ಗೆ ಆಗಮಿಸುವ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಷ್ಟಗಿಯಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ಸರ್ಕಾರಿ ನೌಕರಿ ಕೊಡಿಸುವ ಸಂಬಂಧ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚನೆ ಮಾಡಿದ್ದರು. ವಂಚನೆಗೆ ಒಳಗಾದವರು ಗಂಗಾ ಕುಲಕರ್ಣಿ ಅವರ ವಿರುದ್ದ ಕೇಸ್ ದಾಖಲು ಮಾಡಿದ್ದರು. ಕೋರ್ಟ್ ನಲ್ಲಿ
ಕೇಸ್ ದಾಖಲಾಗಿತ್ತು. ಕೋರ್ಟ್ ನಲ್ಲಿ ಈ ಪ್ರಕರಣ ವಿಚಾರಣೆಯ ಹಂತದಲ್ಲಿತ್ತು.
ಇದನ್ನೂ ಓದಿ:ಹುಣಸೂರು: ಸಾಲ ತೀರಿಸಲಾಗದೆ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ
ಇಂದು ಕೋರ್ಟ್ ಗೆ ಆಗಮಿಸುವ ಮುನ್ನ ಅವರು ವಿಷ ಸೇವನೆ ಮಾಡಿದ್ದರು ಎನ್ನಲಾಗಿದ್ದು, ಕೋರ್ಟ್ ಗೆ ಆಗಮಿಸಿದ ವೇಳೆ ತೆಲೆ ಸುತ್ತು ಬಂದು ಕುಸಿದು ಬಿದ್ದಿದ್ದಾರೆ. ಅವರನ್ನು ಕೂಡಲೇ ಕುಷ್ಟಗಿ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಂತೆ ಸಾವನ್ನಪ್ಪಿದ್ದಾರೆ. ಬಳಿಕ ವಿಷ ಸೇವನೆಯ ವಿಷಯ ತಿಳದು ಬಂದಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೆ ಕೆ. ಕಲ್ಯಾಣ ಅವರ ಕುಟುಂಬದಲ್ಲಿ ಉಂಟಾಗಿದ್ದ ಬಿರುಕಿನ ಪ್ರಮುಖ ಆರೋಪಿಯಾಗಿದ್ದರು. ಗಂಗಾ ಕುಲಕರ್ಣಿ ಅವರ ಮರಣೋತ್ತರ ಪರೀಕ್ಷೆ ನಡೆದಿದೆ.