Advertisement

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

12:53 AM Dec 23, 2024 | Team Udayavani |

ಜೆರುಸಲೇಂ: ಗಾಜಾದ ಮೇಲೆ ಶುಕ್ರವಾರ ಇಸ್ರೇಲ್‌ ನಡೆಸಿದ್ದ ವಾಯುದಾಳಿಯಲ್ಲಿ 7 ಮಂದಿ ಮಕ್ಕಳು ಅಸುನೀಗಿದ ಘಟನೆಗೆ ಪೋಪ್‌ ಫ್ರಾನ್ಸಿಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದು ಯುದ್ಧವಲ್ಲ, ಕ್ರೌರ್ಯ’ ಎಂದು ಹೇಳಿ­ದ್ದಾರೆ. ಇಸ್ರೇಲ್‌ ದಾಳಿ­ಯಲ್ಲಿ ಮಕ್ಕಳ ಜೀವ ಹಾನಿ ಬಗ್ಗೆ ಗಾಜಾದ ರಕ್ಷಣ ಪಡೆ­ಗಳ ಒಕ್ಕೂಟ ಹೇಳಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ ಪೋಪ್‌ “ಬಾಂಬ್‌ ಹಾಕಿ ಮಕ್ಕಳನ್ನು ಹತ್ಯೆ ಮಾಡಲಾ­ಗಿದೆ. ಇದು ಕ್ರೌರ್ಯವೇ ಹೊರತು, ಯುದ್ಧವಲ್ಲ’ ಎಂದು ಟೀಕಿಸಿದ್ದಾರೆ. ಅದಕ್ಕೆ ತಿರುಗೇಟು ನೀಡಿದ ಇಸ್ರೇಲ್‌, ಜೆಹಾದಿ ಭಯೋ­ತ್ಪಾ­ದನೆಯ ವಿರುದ್ಧ ಇಸ್ರೇಲ್‌ ನಡೆಸುತ್ತಿರುವ ಹೋರಾ­ಟವನ್ನು ಪೋಪ್‌ ವಿರೋಧಿಸುತ್ತಿದ್ದಾರೆ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next