ವಾರಾಣಸಿ: ನದಿ ತಂತ್ರಜ್ಞಾನದ ವಿವೇಚನೆಯುತ ಬಳಕೆಯಿಂದ ಗಂಗೆಯ ನೀರಿನಿಂದ ಕೋವಿಡ್ ವೈರಾಣುಗಳನ್ನು ಸಂಹರಿಸಬಹುದು ಎಂದು ಐಐಟಿ ಬನಾರಸ್ ಹಿಂದೂ ವಿವಿಯ ಸಂಶೋಧನಾ ಕೇಂದ್ರದ ಸಂಸ್ಥಾಪಕ ಪ್ರೊ.ಯು.ಕೆ. ಜೌಧರಿ ಸಲಹೆ ನೀಡಿದ್ದಾರೆ.
‘ವೇದ, ಪುರಾಣ, ಉಪನಿಷತ್ತುಗಳಲ್ಲಿಯೂ ಗಂಗಾ ನದಿಯ ಔಷಧದ ಗುಣಗಳ ಬಗ್ಗೆ ಉಲ್ಲೇಖಗಳಿವೆ. ಅಲ್ಲದೆ, ವಿಜ್ಞಾನಿಗಳು ಕೂಡ ಗಂಗೆಯ ನೀರಿನಲ್ಲಿ ಅಪಾರ ಪ್ರಮಾಣದ ಬ್ಯಾಕ್ಟೀರಿಯ ಭಕ್ಷಕಗಳನ್ನು ಪತ್ತೆಹಚ್ಚಿದ್ದಾರೆ. ಇವು ವೈರಾಣುಗಳನ್ನು ಕೊಲ್ಲಲು ನೆರವಾಗಬಹುದು’ ಎಂದಿದ್ದಾರೆ.
ಹೇಗೆ ಸಾಧ್ಯ?: ಚೌಧರಿ ಪ್ರಕಾರ, ‘ಗಂಗೆಯು ಹಿಮಾಲಯದಲ್ಲಿ ಯಮುನಾ, ಸೋನ್ ನದಿಗಿಂತ ಅತಿ ಎತ್ತರದ ಪ್ರದೇಶದಲ್ಲಿ ಉದ್ಭವಿಸುತ್ತದೆ.
ಯಮುನಾ ಹಸಿರು, ಸೋನ್ ಕಂದು ಬಣ್ಣದಿಂದ ಕೂಡಿದ್ದರೆ, ಗಂಗಾ ನದಿಯ ಬಣ್ಣ ಶುಭ್ರ ಬಿಳಿ. ಇದು ನೀರಿನ ಉತ್ತಮ ಗುಣಮಟ್ಟವನ್ನು ಸೂಚಿಸುತ್ತದೆ. ಅಲ್ಲದೆ, ಗಂಗೆಯ ನದಿಪಾತ್ರದ ಉದ್ದಕ್ಕೂ ಔಷಧ ಗಿಡಮೂಲಿಕೆಗಳಿವೆ’ ಎನ್ನುತ್ತಾರೆ.
ಏನಿದು ಬ್ಯಾಕ್ಟೀರಿಯಾ ಭಕ್ಷಕ?: ಇವು ತನ್ನದೇ ಜಾತಿಯ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸೂಕ್ಷ್ಮಾಣುಜೀವಿ. ನ್ಯೂಕ್ಲಿಯಿಕ್ ಆಮ್ಲದ ಅಣುವಿನಿಂದ ಕೂಡಿದ್ದು, ಸುತ್ತಲೂ ಪ್ರೊಟೀನ್ ರಚನೆಯನ್ನು ಹೊಂದಿರುತ್ತದೆ.