Advertisement

ಮುಸ್ಲಿಂ ಮಹಿಳೆ ಕೈಯಲ್ಲಿಅರಳುವ ಗಣೇಶ

01:13 PM Sep 08, 2021 | Team Udayavani |

ವರದಿ: ಬಸವರಾಜ ಹೂಗಾರ

Advertisement

ಹುಬ್ಬಳ್ಳಿ: ಮುಸ್ಲಿಂ ಮಹಿಳೆಯೊಬ್ಬರು ಹಲವಾರು ವರ್ಷಗಳಿಂದ ಗಣೇಶ ಮೂರ್ತಿಗಳತಯಾರಿಕೆಯಲ್ಲಿ ತೊಡಗಿದ್ದು, ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿ ಗಮನ ಸೆಳೆದಿದ್ದಾರೆ.

ಮೂಲತಃ ಹಾವೇರಿ ಜಿಲ್ಲೆ ಹಾನಗಲ್ಲದವರಾದ ಇಲ್ಲಿನ ಗೋಪನಕೊಪ್ಪದ ನಿವಾಸಿ ಸುಮನ್‌ ಹಾವೇರಿ ಎಂಬ ಮುಸ್ಲಿಂ ಮಹಿಳೆ ಹಲವಾರು ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇಲ್ಲಿನ ಗೋಪನಕೊಪ್ಪದ ಮೂರ್ತಿ ಕಲಾವಿದ ಅರುಣ ಯಾದವ ಅವರ ಬಳಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಸುಮನ್‌ ಎಲ್ಲ ಅಳತೆಯ ಗಣೇಶ ಮೂರ್ತಿ ತಯಾರಿಸುತ್ತಾರೆ. ಗಣೇಶ ಮೂರ್ತಿಗೆ ಬೇಕಾಗುವ ಎಲ್ಲ ಕಚ್ಚಾ ವಸ್ತುಗಳನ್ನು ಸಹ ಸುಮನ್‌ ಅವರು ತಯಾರಿ ಮಾಡಿಕೊಳ್ಳುತ್ತಾರೆ.

ಸುಮಾರು 7-8 ತಿಂಗಳ ಕಾಲ ಕಲಾವಿದರ ಬಳಿ ಕೆಲಸ ನಿರ್ವಹಿಸುವ ಅವರು 1 ಅಡಿಯಿಂದ 10 ಅಡಿ ಗಣೇಶ ಮೂರ್ತಿ ತಯಾರಿಕೆಯಲ್ಲಿಕೈಜೋಡಿಸುತ್ತಾರೆ.ಜೊತೆಗೆ ತಾವೇ ಸ್ವತಃ ಗಣೇಶ ಮೂರ್ತಿಗಳನ್ನು ಸಿದ್ದಪಡಿಸುತ್ತಾರೆ.

Advertisement

ಗಣೇಶನ ಶೆಡ್‌ ಎಲ್ಲ: ಮನೆ ಇಲ್ಲದ ಸುಮನ್‌ ಹಾವೇರಿ ಅವರಿಗೆ ವರ್ಷದಲ್ಲಿ8 ತಿಂಗಳ ಕಾಲ ಅರುಣ ಯಾದವ ಅವರ ಗಣೇಶ ಮೂರ್ತಿ ತಯಾರು ಮಾಡುವ ಶೆಡ್‌ ಮನೆಯಾಗಿದೆ. ವರ್ಷಪೂರ್ತಿ ಅರುಣ ಯಾದವ ಅವರ ಗಣೇಶ ಮೂರ್ತಿ ತಯಾರಿಸುವ ಶೆಡ್‌ನ‌ಲ್ಲಿ ತಮ್ಮ ಜೀವನ ಕಳೆಯುವ ಸುಮನ್‌ ಅವರು,8 ತಿಂಗಳಕಾಲ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನುಳಿದ ಸಮಯದಲ್ಲಿ ಮನೆಗಳ ಕೆಲಸಕ್ಕೆ ತೆರಳುತ್ತಾರೆ. ಅವರ ಪತಿ ಮೆಹಬೂಬ್‌ ಹಾವೇರಿ ಅವರು ಕೂಲಿ ಕೆಲಸ ಮಾಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next