Advertisement

Ganesh Chathurthi: ಗಣಪತಿ ಬಪ್ಪ ಮೋರೆಯ..

03:36 PM Sep 17, 2023 | Team Udayavani |

ಆಷಾಢ ಮುಗಿದು ಶ್ರಾವಣ ಆರಂಭವಾಯಿತು ಎಂದರೆ ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ಸೆಪ್ಟಂಬರ್‌ ತಿಂಗಳಿನಲ್ಲಿ ಬರುವ ಗಣೇಶ ಚತುರ್ಥಿ ಹಿಂದೂಗಳಿಗೆ ವಿಶೇಷವಾದ ಹಬ್ಬ. ಈ ಹಬ್ಬ ಅಂದ್ರೆ ತುಂಬಾನೇ ಖುಷಿ. ಅದ್ರಲ್ಲೂ ಗಂಡು ಮಕ್ಕಳಿಗೆ ಹೆಚ್ಚು ಸಂಭ್ರಮ. ಗಣೇಶನನ್ನು ತಂದು ಊರಿನ ಮಧ್ಯದಲ್ಲಿ ಪೆಂಡಾಲ್‌ ಹಾಕಿ ಕೂರಿಸುತ್ತಾರೆ. ಅನಂತರ ಅದಕ್ಕೆ ಅಲಂಕಾರ ಮಾಡುತ್ತಾರೆ.  ನಮ್ಮ ಊರಿನಲ್ಲಿ ಒಂದು ತಿಂಗಳಿಗಿಂತ ಜಾಸ್ತಿನೇ ಗಣಪತಿಯನ್ನು ಇಡುತ್ತಾರೆ. ಊರಿನ ಪ್ರತಿಯೊಂದು ಮನೆಗಳಲ್ಲಿಯೂ ದಿನಕ್ಕೊಬ್ಬರಂತೆ ಪ್ರಸಾದಗಳನ್ನು ಮಾಡಿ ತಂದು ಗಣೇಶನಿಗೆ ಅದರ ನೈವೇದ್ಯವನ್ನು ಮಾಡಿ ಅನಂತರ ಊರಿನ ಎಲ್ಲರಿಗೂ  ಹಂಚುವುದು. ಅದರಲ್ಲೂ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಸಂಜೆಯೇ ಒಂದು ಚಿಕ್ಕ ಪ್ಲೇಟನ್ನು ಹಿಡಿದು ಪ್ರಸಾದಕ್ಕಾಗಿ ಕಾಯ್ತಾ ಇರುತ್ತಾರೆ. ಪ್ರತಿಯೊಂದು ದಿನವೂ ಬಗೆ ಬಗೆಯ ಪ್ರಸಾದ. ಗಣೇಶನನ್ನು ಕೂರಿಸಿದ ದಿನದಿಂದ ಅದನ್ನು ಬಿಡುವವರೆಗೂ ಒಂದು ಜಾತ್ರೆಯಂತೆ ಕಂಗೊಳಿಸುತ್ತಿತ್ತು.

Advertisement

ಗಣೇಶನ ಕೂರಿಸಿದ ದಿನದಿಂದ ಅದನ್ನು ಬಿಡುವ ದಿನದವರೆಗೂ ಒಂದು ಜಾತ್ರೆಯಂತೆ ಕಂಗೊಳಿಸುತ್ತಾ ಇರುತ್ತದೆ. ಸಂಜೆಯ ಹೊತ್ತಿಗೆ ದೇವರುಗಳ ಹಾಡು ಆದರೆ ಎಲ್ಲರೂ ಮಲಗುವ ಹೊತ್ತಿಗೆ ದೇವರ ಹಾಡುಗಳ ಬದಲು ಸಿನಿಮಾಗಳ ಹಾಡು ಶುರುವಾಗುತ್ತದೆ. ಒಂದು ತಿಂಗಳು ಹೇಗೆ ಕಳೆಯುತ್ತೆ ಎನ್ನುವುದೇ ಗೊತ್ತಾಗುವುದಿಲ್ಲ. ಗಣೇಶನನ್ನು ಬಿಡುವ ಹಿಂದಿನ ದಿನ ಆರ್ಕೆಸ್ಟ್ರಾ ಇಡುತ್ತಾರೆ. ಇಡೀ ಊರಿನವರಿಗೆ ಊಟದ ವ್ಯವಸ್ಥೆ ಕೂಡ ಮಾಡುತ್ತಾರೆ. ಊಟ ಮಾಡಿ ಆರ್ಕೆಸ್ಟ್ರವನ್ನು ನೋಡುವುದಕ್ಕೆ ಕುಳಿತರೆ ಬೆಳಗಿನ ಜಾವವೇ ಏಳುವುದು. ಅನಂತರ ಸ್ವಲ್ಪ ಸಮಯ ನಿದ್ದೆ ಮಾಡಿ ಸ್ನಾನ ಮಾಡಿ ತಿಂಡಿ ತಿಂದು 11 12 ಗಂಟೆಯ ಅನಂತರ ಗಣೇಶನನ್ನು ಒಂದು ಗಾಡಿಯಲ್ಲಿ ಕೂರಿಸಿ ತಮಟೆಯವರನ್ನು ಕರೆಸಿ, ಊರಿನ ಎಲ್ಲ ಹುಡುಗ ಹುಡುಗಿಯರು ಕುಣಿಯುತ್ತ ಬಣ್ಣ ಹಚ್ಚುತ್ತ ಗಣಪತಿ ಬಪ್ಪ ಮೋರಿಯ ಎಂದು ಇಡೀ ಊರನ್ನು ಸುತ್ತಿ ಅನಂತರ ವಿಸರ್ಜನೆಯನ್ನು ಮಾಡುವ ಸ್ಥಳಕ್ಕೆ ಹೋಗುತ್ತೇವೆ, ಅಲ್ಲಿ ಪೂಜೆಯನ್ನು ಮಾಡಿ ಎಲ್ಲರಿಗೂ ಪ್ರಸಾದವನ್ನು ಹಂಚಿ ಕೊನೆಯ ಬಾರಿ ಎಲ್ಲರೂ ಕೈ ಮುಗಿದು ಕೆರೆಯ ಒಳಗೆ ವಿಸರ್ಜನೆಯನ್ನು ಮಾಡುತ್ತೇವೆ. ಆದರೆ ಈಗ ಅದನ್ನೆಲ್ಲ ನೋಡುವ ಭಾಗ್ಯ ಇಲ್ಲ. ಯಾಕೆಂದರೆ ಕಾಲೇಜಿನಲ್ಲಿ ಕೊಡುವ ಒಂದು ದಿನ ರಜೆ ಸಾಕಾಗುವುದಿಲ್ಲ. ಓದಲು ಅಂತ ಊರನ್ನು ಬಿಟ್ಟು ಎÇÉೋ ಬಂದು ಹಾಸ್ಟೆಲ್‌ನಲ್ಲಿ ಇರುವವರ ಪಾಡು ಕೇಳ್ಳೋರು ಯಾರು ಇಲ್ಲ, ಕಾಲ ಹಾಗೆ ಮುಂದೆ ಹೋಗ್ತಾ ಇದೆ ದಿನಗಳು ಕೂಡ ಬದಲಾಗುತ್ತಿದೆ….

-ಪ್ರಿಯಾ 

ಎಂಜಿಎಂ ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next