Advertisement
ರಾಜ್ಯದಲ್ಲಿ ಖಾದಿ ಉದ್ಯಮಕ್ಕೆ ಹೆಚ್ಚು ಉತ್ತೇಜನ ನೀಡಲು ಪ್ರತಿ ಜಿಲ್ಲಾ ಕೇಂದ್ರ ಒಂದು ಗಾಂಧಿ ಭವನ ಸ್ಥಾಪಿಸಬೇಕು ಎಂದು ಕಳೆದ ವರ್ಷದ ಬಜೆಟ್‌ನಲ್ಲಿ ತಲಾ 3 ಕೋಟಿ ರೂ. ಹಣ ಮೀಸಲಿಡಲಾಗಿತ್ತು. ಆದರೆ, ಇದುವರೆಗೆ ಕೆಲಸ ಆಗಿಲ್ಲ. ಆದ್ದರಿಂದ ಎಲ್ಲ ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆದು ಶೀಘ್ರವೇ ಕೆಲಸ ಆರಂಭಿಸುವಂತೆ ಸೂಚನೆ ನೀಡುತ್ತೇನೆ.
ಖಾದಿ ಉತ್ಸವ ಉದ್ಘಾಟಿಸಿದ ಬಳಿಕ ಮಾರಾಟ ಮಳಿಗೆಗಳನ್ನು ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೇ ವೇಳೆ ಮಳಿಗೆಯೊಂದಕ್ಕೆ ತೆರಳಿ 4,250 ರೂ. ಮೌಲ್ಯದ 6 ಪಂಚೆಗಳನ್ನು ಖರೀದಿಸಿದರು. ಮುಖ್ಯಮಂತ್ರಿ ಯವರೇನೂ ಪಂಚೆ ಖರೀದಿಸಿದರು. ಆದರೆ, ಬಿಲ್ ಯಾರು ಕೊಟ್ಟರು ಎಂದು ಗೊತ್ತಾಗಿಲ್ಲ. ವಿವಿಧ ಐದು ಬಗೆಯ ಪಂಚೆಗಳನ್ನು ನೋಡಿದ ಸಿಎಂ ಅಲ್ಲೇ ಪಂಚೆ ತೊಟ್ಟು ಪರೀಕ್ಷಿಸಿದರು.