Advertisement

ಹಿಂದುತ್ವ ಸಿದ್ಧಾಂತದಿಂದ ಗಾಂಧಿ ಹತ್ಯೆ

06:54 AM Jan 31, 2019 | Team Udayavani |

ಬೆಂಗಳೂರು: ಗಾಂಧೀಜಿಯವರು ತಮ್ಮ ತತ್ವ ಸಿದ್ದಾಂತಗಳನ್ನು ಯಾವುದೇ ರಾಜಕೀ ಯ ಉದ್ದೇಶಕ್ಕೆ ಬಳಸಿಕೊಂಡಿರಲಿಲ್ಲ. ಹಿಂದುತ್ವದ ಸಿದ್ಧಾಂತದಿಂದ ಅವರನ್ನು ಹತ್ಯೆ ಮಾಡಲಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹುತಾತ್ಮರ ದಿನಾಚರಣೆ ಕಾರ್ಯಕ್ರ ಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಾಂಧೀಜಿಯವರನ್ನು ಕೊಂದಿರುವ ಬಗ್ಗೆ ಇನ್ನೂ ಪ್ರಶ್ನೆ ಉಳಿದು ಕೊಂಡಿದೆ. ಇತ್ತೀಚೆಗೆ ಧರ್ಮದ ಹೆಸರಿನಲ್ಲಿ ಮಾಡುವ ಕುತಂತ್ರ ಹೆಚ್ಚಾಗು ತ್ತಿದೆ. ಸಮಾಜದಲ್ಲಿ ಭಯ ಸೃಷ್ಟಿಸುವುದೇ ಅವರ ಕೆಲಸ. ಅಂತಹ ಶಕ್ತಿಗಳೇ ಹಿಂದೆ ಗಾಂಧೀಜಿಯವರನ್ನು ಕೊಂದಿದ್ದು, ಆರ್‌ಎಸ್‌ಎಸ್‌ ಹಿಂಸಾವಾದಿ ಸಂಘಟನೆ. ಬಿಜೆಪಿ ಅದನ್ನು ಮುಂದುವರೆಸಿದೆ ಎಂದು ದೂರಿದರು. ಬಿಜೆಪಿಯವರು ಹೆಸರಿಗೆ ಮಾತ್ರ ಗಾಂಧೀಜಿಯನ್ನು ನೆನೆಸಿಕೊಳ್ಳುತ್ತಾರೆ. ಗಾಂಧೀ ಜಿಯ ಜನ್ಮ ದಿನಾಚರಣೆಯನ್ನು ಬಿಜೆಪಿಯವರು ಸ್ವಚ್ಛತೆಗೆ ಸೀಮಿತಗೊಳಿಸಿದ್ದಾರೆ ಎಂದರು.

ಮೌನಾಚರಣೆ ಮರೆತು ಭಾಷಣ: ಹುತಾತ್ಮರ ದಿನದ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧೀಜಿಯವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ಮಾಡದೆ ಭಾಷಣ ಆರಂಭಿಸಲಾಯಿತು. ಮಾಜಿ ಸಚಿವೆ ರಾಣಿ ಸತೀಶ್‌ ಅವರ ಸಲಹೆಯಂತೆ ಕಾರ್ಯಕ್ರಮದ ಮಧ್ಯ 1 ನಿಮಿಷ ಮೌನಾಚರಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next