Advertisement

Gandhi Jayanti: ಗ್ರಾಮೋದ್ಯೋಗದ ಹರಿಕಾರ ಗಾಂಧೀಜಿ

11:33 PM Oct 01, 2023 | Team Udayavani |

ಭಾರತದ ಜನಕೋಟಿಗೆ ಬದುಕುವ ದಾರಿ ತೋರಬೇಕು, ಅದೂ ಆರೋಗ್ಯಕರವಾಗಿ ಬದುಕುವ ದಾರಿ ತೋರಬೇಕು. ಆದರೆ ಅದೇ ಎಲ್ಲರ ಮುಂದೆ ನಿಂತಿರುವ ಪೆಡಂಭೂತ ಸಮಸ್ಯೆ. ಇದಕ್ಕೆ ಒಂದೇ ದಾರಿ-ಜನ ತಮಗೆ ಎಟುಕುವಂತಹ ಸಣ್ಣ ಪುಟ್ಟ ಸೌಲಭ್ಯ -ಸಂಪನ್ಮೂಲ ಶಕ್ತಿಗಳನ್ನೆಲ್ಲ ಒಟ್ಟು ಸೇರಿಸಿ, ಉಪಯೋಗಿಸಿ, ತಾವೇ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಆಗುವಂಥ ಕಾರ್ಯ ವಿ ಧಾನ, ಸಲಕರಣೆ ಹಾಗೂ ತಂತ್ರಗಳನ್ನು ರೂಪಿಸಿಕೊಂಡು ಸಜ್ಜಾಗುವುದು. ಇದು ಗಾಂಧಿ ವಿಚಾರ, ಇಲ್ಲಿದೆ ಗಾಂಧೀಮಾರ್ಗದ ಕ್ರಾಂತಿಕಾರಿ ಮಹತ್ವ! ಇದು ವ್ಯಾಪಾರೀ ಮನೋಭಾವಕ್ಕೆ ಆಳಾದ ಸಂಘಟಿತ ಯಂತ್ರವ್ಯವಸ್ಥೆಗೆ ಅಸಾಧ್ಯ. ಕೋಟಿ ಕೋಟಿ ಜನ ಕೈಜೋಡಿಸಿ ದುಡಿದಾಗಲೇ ಇದು ಸಾಧ್ಯ.

Advertisement

ಹಳ್ಳಿಯ ಬಾಳು ಅಹಿಂಸೆಯ ಬಾಳು ಆಗಬೇಕು ಮತ್ತು ಆಗಬಲ್ಲದು ಎನ್ನುವುದು ಗಾಂಧೀಜಿ ಹಂಬಲ. ಅಹಿಂಸೆಯ ಬಾಳು ಎಂದರೆ ಆರ್ಥಿಕ ರಚನೆಯೂ ಅದಕ್ಕೆ ತಕ್ಕಂತೆ ಇರಬೇಕು. ಅಂಥ ರಚನೆ ಭಾರಿ ಕೈಗಾರಿಕೋದ್ಯಮಗಳಿಂದ ಸಾಧ್ಯವಿಲ್ಲ. ವಿಕೇಂದ್ರೀಕೃತ ಅರ್ಥವ್ಯವಸ್ಥೆ ಮಾತ್ರ ಅಹಿಂಸಾ ಆಧಾರವಾದೀತು. ಶೋಷಣೆ, ಪೈಪೋಟಿ, ಲೋಭ, ದುರಾಸೆಗಳಿಂದ ದೂರವಾದ ಹಾಗೂ ಕೃಷಿಗೆ ಪೂರಕವಾದ ಗ್ರಾಮ ಕೈಗಾರಿಕೆಗಳೇ ಬೇಕಾಗುತ್ತವೆ. ಹಳ್ಳಿಯಲ್ಲಿ ಗುಡಿಸಲಿನಲ್ಲಿ ಬಡ ಅಶಿಕ್ಷಿತ ವ್ಯಕ್ತಿಯೂ ಕೈಯಿಂದ ನಡೆಸಲು ಸಾಧ್ಯವಾಗು­ವಂತಹ ಕೈಗಾರಿಕೆ ಅಗತ್ಯ. ಆ ಕೈಗಾರಿಕೆ ಸ್ಥಳೀಯವಾಗಿ ಸಮುದಾಯದ ಅಗತ್ಯವನ್ನು ಪೂರೈಸಬೇಕು. ಬಡ ರೈತನ ಶಕ್ತಿಗೆ ಎಟುಕುವಂತಿರಬೇಕು. ಹೆಚ್ಚಿನ ಬಂಡವಾಳವನ್ನು ಹೆಚ್ಚಿನ ತಂತ್ರಜ್ಞಾನ ತರಬೇತಿಗಳನ್ನು ಅಪೇಕ್ಷಿಸುವಂತಿರಬಾರದು ಹಾಗೂ ಗ್ರಾಮದ ಪರಿಸರಕ್ಕೆ ಸಹಾಯವಾಗುವಂತಿರಬೇಕು. ಅದು ಪೇಟೆಯ ಉದ್ಯಮದ ನಕಲು ಆಗಬಾರದು. ಇಂಥ ಉದ್ಯಮಕ್ಕೆ ಉದಾಹರಣೆ ಎಂದರೆ ಖಾದಿ, (ನೂಲುವುದು, ನೇಯುವುದು) ಕುಂಬಾರಿಕೆ, ಚರ್ಮಕಾರ್ಯ, ಎಣ್ಣೆಗಾಣ, ಅಕ್ಕಿ, ಬೆಲ್ಲ, ಸಾಬೂನು, ಕರಕುಶಲ ವಸ್ತುಗಳ ಉದ್ಯಮ ಮುಂತಾದವು.

ಮಾನವನ ಮುಖ್ಯ ಅಗತ್ಯಗಳು ಅನ್ನ, ಅರಿವೆ, ಆಸರೆ(ಮನೆ), ಆರೋಗ್ಯ ಮತ್ತು ಅರಿವು. ಇವೆಲ್ಲ ಜನಸಮುದಾಯದ ಕೈಯಲ್ಲಿ ಇರಬೇಕು. ಜನ ತಾವೇ ಉತ್ಪಾದಿಸಿ ಪಡೆದುಕೊಳ್ಳುವಂತಿರಬೇಕು. ಯಾರೊಬ್ಬರ ಅಥವಾ ಯಾವುದೋ ಕಂಪೆನಿಯ ಹಿಡಿತದಲ್ಲಿ ಇರಬಾರದು. ಇವುಗಳಿಗಾಗಿ ಹಳ್ಳಿಯ ಜನ ಪೇಟೆಯವರ ಕೈಕಾಯುವಂತೆ ಆಗಬಾರದು.

ಗಾಳಿ, ಬೆಳಕು ಎಲ್ಲ ಕಡೆ ಮುಕ್ತವಾಗಿ ಸಿಗುತ್ತವೆ. ಅವು ನಿಸರ್ಗದ ಕೊಡುಗೆ. ಅನ್ನ ನೀರು ಅರಿವೆ ಇಂಥವೂ ಕೂಡ ಎಲ್ಲೆಲ್ಲೂ ಸಿಗುವಂತೆ ಇರಬೇಕು. ಸಮಾಜದ ಈ ಮೂಲಭೂತ ಅಗತ್ಯಗಳ ಉತ್ಪತ್ತಿ, ಪೂರೈಕೆ ಮತ್ತು ವಿತರಣೆ ಜನಸಾಮಾನ್ಯರ ಕೈಯಲ್ಲಿ ಇರಬೇಕೇ ವಿನಾ ಎಲ್ಲಿಯೋ ಕೂತು ಯಂತ್ರಗಳ ಮೂಲಕ ನಿಯಂತ್ರಿಸುವ ಉದ್ಯಮಿಯ ಕೈಯಲ್ಲಿ ಅಲ್ಲ.
ಬೇಸಾಯ ಕೇವಲ ಮನುಷ್ಯನಿಂದ ಮಾತ್ರ ಸಾಧ್ಯವಾಗದು. ಪ್ರಾಣಿ ಬಲದ ನೆರವೂ ಬೇಕು. ಕೃಷಿ-ಪಶುಪಾಲನೆ ಒಂದಕ್ಕೊಂದು ಪೂರಕ, ಒಂದಕ್ಕೊಂದು ಪೋಷಕ.

ನಮ್ಮದು ವಿಸ್ತಾರವಾದ ದೇಶ. ಇಲ್ಲಿನ ಭೂಹಿಡುವಳಿಗಳು ಸಣ್ಣವು. ಇದು ಹಳ್ಳಿಗಳ ದೇಶ. ಸಣ್ಣ ಸಣ್ಣ ಸಮುದಾಯಗಳು ದೇಶ. ಇಲ್ಲಿಗೆ ಸಣ್ಣ ಸಣ್ಣ ಪ್ರಮಾಣದ ಬೇಸಾಯ ಉಪಕರಣಗಳೇ ಸೂಕ್ತ. ನೇಗಿಲು ಓಬೀರಾಯನ ಕಾಲದ್ದು ನಿಜ. ಆದರೆ ಸಾವಿರಾರು ವರ್ಷಗಳಿಂದಲೂ ನಡೆದು ಬಂದಿದೆ. ನಮ್ಮ ರೈತನನ್ನೂ, ನಮ್ಮನ್ನೂ ಸಾಕುತ್ತಾ ಬಂದಿದೆ.

Advertisement

ನಮ್ಮ ಬೇಸಾಯಕ್ಕೆ ಪಶು ಅಗತ್ಯ. ಪಶುಬಲ+­ಮಾನವಬಲ+ಸಮೃದ್ಧಿ= ಜೀವನ ಎನ್ನಬೇಕು. ನಮ್ಮಲ್ಲಿ ಗೋಪಾಲನೆ ಹಾಲಿಗೆ ಮಾತ್ರಲ್ಲ. ಗೊಡ್ಡು ದನವೂ ನಿರುಪಯುಕ್ತ ಅಲ್ಲ. ಹಾಕುವ ಸೆಗಣಿ ಅತ್ಯಮೂಲ್ಯ ಗೊಬ್ಬರ. “ಹಾದಿ ಬೀದಿಯಲ್ಲಿರುವ ಕಸವ ಮೆದು ಮನೆಗೈಯುವ ಹಸು, ಎತ್ತು’ ನಮಗೆ ಎಷ್ಟು ಉಪಕಾರ ಮಾಡುತ್ತವೆ? ಟ್ರ್ಯಾಕ್ಟರ್‌ ನೆಲ ಬಗೆಯಬಹು ದು, ಆದರೆ ಸೆಗಣಿ ಹಾಕುತ್ತದೆಯೇ ಎಂದು ಪ್ರಶ್ನಿಸಿದರು ರಿಚರ್‌ಡೆY†ಗ್‌ ಎಂಬ ಸಮಾಜ ವಿಜ್ಞಾನಿ. ನಮ್ಮ ಹಸು ಎತ್ತು ಸೆಗಣಿ ಹಾಕುತ್ತವೆ. ಅದು ಭೂಮಿಗೆ ಅತ್ಯವಶ್ಯ ಗೊಬ್ಬರ. ಇವತ್ತೂ ಕೊಟ್ಟಿಗೆ ಗೊಬ್ಬರ, ಹಸುರುಗೊಬ್ಬರ ಅತ್ಯಂತ ಸಾರಯುಕ್ತ ಎಂದು ಎಲ್ಲರೂ ಹೇಳುತ್ತಾರೆ. ರಾಸಾಯನಿಕ ಗೊಬ್ಬರಗಳ ಭಯಂಕರ ದುಷ್ಟರಿಣಾಮಗಳು ಪಾಶ್ಚಾತ್ಯರನ್ನೂ ಕಂಗೆಡಿಸುತ್ತಿವೆ. ಅವುಗಳ ಉಪಯೋಗ ನಿಸರ್ಗ ಜೀವನ ಚಕ್ರ ಸಂಚಲನವನ್ನು ಘಾಸಿಗೊಳಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ರಾಸಾಯನಿಕ ಗೊಬ್ಬರದಿಂದ ಬೆಳೆದ ಆಹಾರ ಪದಾರ್ಥಗಳು ಮಾನವನ ದೇಹಾರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ. ಹಣ್ಣು ಹಂಪಲು, ಧಾನ್ಯ, ಕಾಯಿಪಲ್ಯ, ಕೊನೆಗೆ ತಾಯಿಯ ಎದೆ ಹಾಲೂ ವಿಷಮಯ ಆಗುತ್ತಿವೆ. ಈ ಗೊಬ್ಬರ ಕೀಟನಾಶಕ ಇತ್ಯಾದಿಗಳ ಬಳಕೆಯಿಂದ.

ಗ್ರಾಮ ಸ್ವರಾಜ್ಯಕ್ಕೆ ಜನಶಕ್ತಿಯೇ ಮೂಲ ಆಧಾರ. ಜನರೇ ಮುಖ್ಯ. ನಡೆಸುವುದೆಲ್ಲವೂ ಜನರಿಂದ, ಜನರಿಗಾಗಿ ಅಪಾರಶಕ್ತಿ ಅಡಗಿದೆ. ದೈಹಿಕ ಬಲ ಇರಬಹುದು. ಬುದ್ಧಿಬಲವೂ ಇರಬಹುದು. ಹಳ್ಳಿಯಲ್ಲಿ ಬುದ್ಧಿಬಲ ಒಂದೇ ಸಾಲದು. ದೇಹಬಲವೂ ಬಹುಮುಖ್ಯ. ಕೃಷಿ ಪಶುಪಾಲನೆ ಮುಂತಾದ ಗ್ರಾಮೀಣ ಉದ್ಯಮಗಳಲ್ಲಿ ದೇಹಬಲ-ಮಾನವ ಪರಿಶ್ರಮ ಅತ್ಯಗತ್ಯ. ಅದರಿಂದ ಹಳ್ಳಿಯ ಜನರಿಗೆ ಉದ್ಯೋಗ. ಅವರಲ್ಲಿ ಇರುವ ನೈಸರ್ಗಿಕ ಶಕ್ತಿಗೆ ಸದುಪಯೋಗ. ಆ ಶಕ್ತಿಯ ಸೂಕ್ತ ಬಳಕೆ ಆಗದಿದ್ದಲ್ಲಿ ಅದು ಹಾದಿತಪ್ಪಿ, ಸಮಾಜಕ್ಕೆ ಹಾನಿಕರವೂ ಆಗಬಹುದು.

ಯಂತ್ರ ನಾಗರಿಕತೆಯಲ್ಲಿ ಮಾನವ ಪರಿಶ್ರಮಕ್ಕೆ ಎರಡನೆಯ ಸ್ಥಾನ. ಯಂತ್ರ ಬಲವೇ ಮೊದಲು. ಯಾರೋ ಎಲ್ಲೋ ಬುದ್ಧಿ ಉಪಯೋಗಿಸಿ ಯಂತ್ರ ರೂಪಿಸುತ್ತಾನೆ. ಪೆಟ್ರೋಲ್‌, ವಿದ್ಯುತ್‌ ಇಂಧನ ಯಂತ್ರವನ್ನು ಓಡಿಸುತ್ತದೆ. ಯಾರೋ ಬಳಸುತ್ತಾರೆ. ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕಗಳ ಉತ್ಪಾದನೆಯೂ ಆಗುತ್ತದೆ. ಇನ್ನಾರೋ ಬಳಸುತ್ತಾರೆ; ಏಕೆ ಏನು ಕೇಳುವುದಿಲ್ಲ.
ಗ್ರಾಮದಲ್ಲಿ ಹಾಗಲ್ಲ. ರೈತನ ನೇಗಿಲು, ಕುಂಟೆಗುಳ, ಕುಡುಗೋಲು ಇತ್ಯಾದಿ ಹೆಚ್ಚು ಕಡಿಮೆ ಎಲ್ಲ ಉಪಕರಣಗಳೂ ಹಳ್ಳಿಯಲ್ಲೇ ತಯಾರಾಗುತ್ತವೆ. ಎಷ್ಟೋ ಸಲಕರಣೆಗಳನ್ನು ಅವನೇ ಮಾಡಿಕೊಳ್ಳುತ್ತಾನೆ. ಇನ್ನಿತರ ಕಸುಬುಗಳಲ್ಲೂ ಅಷ್ಟೇ. ರೈತ ಸ್ವಂತ ಅನುಭವದಿಂದ ತನಗೆ ಬೇಕಾದ ಸಲಕರಣೆಗಳನ್ನು ತಾನೇ ರೂಪಿಸಿಕೊಳ್ಳುತ್ತಾನೆ. ತಂತ್ರವನ್ನು ಹೊಂದಿಸಿಕೊಳ್ಳುತ್ತಾನೆ. ನೀರಿಗೆ ಬಿದ್ದವನು ಈಜು ಕಲಿಯಲೇಬೇಕಲ್ಲ ಹಾಗೆ. ನಮ್ಮ ರೈತನಲ್ಲಿ ಯುಗಯುಗಗಳ ಅನುಭವ ಹರಿದು ಬಂದಿದೆ. ಅದೇ ಅವನ ಆಸ್ತಿ. ಆ ಅನುಭವವನ್ನು ಅಲ್ಲಗಳೆಯಬಹುದೇ? ದೂರ ಮಾಡಬಹುದೇ ಅದರ ಸದುಪಯೋಗಬೇಡವೇ? ಅದೆಲ್ಲ ನಷ್ಟವಾಗಲು ಬಿಡೋಣವೇ?

ಗಾಂಧೀಜಿ ಈ ಮಾತನ್ನೇ ಜನಶಕ್ತಿಗೂ ಅನ್ವಯಿಸುತ್ತಾರೆ. ಜನಕೋಟಿಯಲ್ಲಿ ಹೀಗೆ ಬಳಕೆ ಆಗದ ಕಾಲ ಹಾಗೂ ಪರಿಶ್ರಮ ಹೇರಳವಾಗಿ ಅಡಗಿದೆ. ಎಲ್ಲರಿಗೂ ದೊರಕಬಹುದಾದ ಸಂಪನ್ಮೂಲ ಎಷ್ಟೋ ಗಣನೆಗೆ ಬಾರದೆ ಇವೆ. ಇವೆಲ್ಲ ಕಣಕಣವಾಗಿ ಇರಬಹುದು. ಢಾಳಾಗಿ ಕಣ್ಣಿಗೆ ಕಾಣಿಸದೆ ಇರಬಹುದು-ಸಾಗರದಲ್ಲಿನ ಚಿನ್ನದಂತೆ. ಆದರೆ ಈ ಶಕ್ತಿಯೆಲ್ಲವನ್ನು ಪೂರ್ಣವಾಗಿ ಸೂಕ್ತವಾಗಿ ಬಳಸಿಕೊಂಡೆ­ವಾದರೆ ಜನಕೋಟಿಯ ಯೋಗಕ್ಷೇಮ ಅದ್ಭುತವಾಗಿ ಸಾಧಿಸೀತು. ಅದರ ಪ್ರಮಾಣ ಸರಕಾರದ ಎಲ್ಲ ಯೋಜನೆಗಳ ಪರಿಣಾಮ ಪ್ರಮಾಣಕ್ಕಿಂತ ಬಹುಪಟ್ಟು ಹೆಚ್ಚು ಆದೀತು. ಕಣಕಣ ಕೂಡಿ ರಾಶಿ, ಹನಿಹನಿ ಸೇರಿ ಕಡಲು! cಭಾರತದ ಜನಕೋಟಿಗೆ ಬದುಕುವ ದಾರಿ ತೋರಬೇಕು, ಅದೂ ಆರೋಗ್ಯಕರವಾಗಿ ಬದುಕುವ ದಾರಿ ತೋರಬೇಕು. ಆದರೆ ಅದೇ ಎಲ್ಲರ ಮುಂದೆ ನಿಂತಿರುವ ಪೆಡಂಭೂತ ಸಮಸ್ಯೆ. ಇದಕ್ಕೆ ಒಂದೇ ದಾರಿ-ಜನ ತಮಗೆ ಎಟುಕುವಂತಹ ಸಣ್ಣ ಪುಟ್ಟ ಸೌಲಭ್ಯ -ಸಂಪನ್ಮೂಲ ಶಕ್ತಿಗಳನ್ನೆಲ್ಲ ಒಟ್ಟು ಸೇರಿಸಿ, ಉಪಯೋಗಿಸಿ, ತಾವೇ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಆಗುವಂಥ ಕಾರ್ಯವಿಧಾನ, ಸಲಕರಣೆ ಹಾಗೂ ತಂತ್ರಗಳನ್ನು ರೂಪಿಸಿಕೊಂಡು ಸಜ್ಜಾಗುವುದು. ಇದು ಗಾಂಧಿ ವಿಚಾರ, ಇಲ್ಲಿದೆ ಗಾಂಧೀಮಾರ್ಗದ ಕ್ರಾಂತಿಕಾರಿ ಮಹತ್ವ! ಇದು ವ್ಯಾಪಾರೀ ಮನೋಭಾವಕ್ಕೆ ಆಳಾದ ಸಂಘಟಿತ ಯಂತ್ರವ್ಯವಸ್ಥೆಗೆ ಅಸಾಧ್ಯ. ಕೋಟಿ ಕೋಟಿ ಜನ ಕೈಜೋಡಿಸಿ ದುಡಿದಾಗಲೇ ಇದು ಸಾಧ್ಯ.

ಹಳ್ಳಿಯ ಬಾಳು ಅಹಿಂಸೆಯ ಬಾಳು ಆಗಬೇಕು ಮತ್ತು ಆಗಬಲ್ಲದು ಎನ್ನುವುದು ಗಾಂಧೀಜಿ ಹಂಬಲ. ಅಹಿಂಸೆಯ ಬಾಳು ಎಂದರೆ ಆರ್ಥಿಕ ರಚನೆಯೂ ಅದಕ್ಕೆ ತಕ್ಕಂತೆ ಇರಬೇಕು. ಅಂಥ ರಚನೆ ಭಾರಿ ಕೈಗಾರಿಕೋದ್ಯಮಗಳಿಂದ ಸಾಧ್ಯವಿಲ್ಲ. ವಿಕೇಂದ್ರೀಕೃತ ಅರ್ಥವ್ಯವಸ್ಥೆ ಮಾತ್ರ ಅಹಿಂಸಾ ಆಧಾರವಾದೀತು. ಶೋಷಣೆ, ಪೈಪೋಟಿ, ಲೋಭ, ದುರಾಸೆಗಳಿಂದ ದೂರವಾದ ಹಾಗೂ ಕೃಷಿಗೆ ಪೂರಕವಾದ ಗ್ರಾಮ ಕೈಗಾರಿಕೆಗಳೇ ಬೇಕಾಗುತ್ತವೆ. ಹಳ್ಳಿಯಲ್ಲಿ ಗುಡಿಸಲಿನಲ್ಲಿ ಬಡ ಅಶಿಕ್ಷಿತ ವ್ಯಕ್ತಿಯೂ ಕೈಯಿಂದ ನಡೆಸಲು ಸಾಧ್ಯವಾಗು­ವಂತಹ ಕೈಗಾರಿಕೆ ಅಗತ್ಯ. ಆ ಕೈಗಾರಿಕೆ ಸ್ಥಳೀಯವಾಗಿ ಸಮುದಾಯದ ಅಗತ್ಯವನ್ನು ಪೂರೈಸಬೇಕು. ಬಡ ರೈತನ ಶಕ್ತಿಗೆ ಎಟುಕುವಂತಿರಬೇಕು. ಹೆಚ್ಚಿನ ಬಂಡವಾಳವನ್ನು ಹೆಚ್ಚಿನ ತಂತ್ರಜ್ಞಾನ ತರಬೇತಿಗಳನ್ನು ಅಪೇಕ್ಷಿಸುವಂತಿರಬಾರದು ಹಾಗೂ ಗ್ರಾಮದ ಪರಿಸರಕ್ಕೆ ಸಹಾಯವಾಗುವಂತಿರಬೇಕು. ಅದು ಪೇಟೆಯ ಉದ್ಯಮದ ನಕಲು ಆಗಬಾರದು. ಇಂಥ ಉದ್ಯಮಕ್ಕೆ ಉದಾಹರಣೆ ಎಂದರೆ ಖಾದಿ, (ನೂಲುವುದು, ನೇಯುವುದು) ಕುಂಬಾರಿಕೆ, ಚರ್ಮಕಾರ್ಯ, ಎಣ್ಣೆಗಾಣ, ಅಕ್ಕಿ, ಬೆಲ್ಲ, ಸಾಬೂನು, ಕರಕುಶಲ ವಸ್ತುಗಳ ಉದ್ಯಮ ಮುಂತಾದವು.

ಮಾನವನ ಮುಖ್ಯ ಅಗತ್ಯಗಳು ಅನ್ನ, ಅರಿವೆ, ಆಸರೆ(ಮನೆ), ಆರೋಗ್ಯ ಮತ್ತು ಅರಿವು. ಇವೆಲ್ಲ ಜನಸಮುದಾಯದ ಕೈಯಲ್ಲಿ ಇರಬೇಕು. ಜನ ತಾವೇ ಉತ್ಪಾದಿಸಿ ಪಡೆದುಕೊಳ್ಳುವಂತಿರಬೇಕು. ಯಾರೊಬ್ಬರ ಅಥವಾ ಯಾವುದೋ ಕಂಪೆನಿಯ ಹಿಡಿತದಲ್ಲಿ ಇರಬಾರದು. ಇವುಗಳಿಗಾಗಿ ಹಳ್ಳಿಯ ಜನ ಪೇಟೆಯವರ ಕೈಕಾಯುವಂತೆ ಆಗಬಾರದು.
ಗಾಳಿ, ಬೆಳಕು ಎಲ್ಲ ಕಡೆ ಮುಕ್ತವಾಗಿ ಸಿಗುತ್ತವೆ. ಅವು ನಿಸರ್ಗದ ಕೊಡುಗೆ. ಅನ್ನ ನೀರು ಅರಿವೆ ಇಂಥವೂ ಕೂಡ ಎಲ್ಲೆಲ್ಲೂ ಸಿಗುವಂತೆ ಇರಬೇಕು. ಸಮಾಜದ ಈ ಮೂಲಭೂತ ಅಗತ್ಯಗಳ ಉತ್ಪತ್ತಿ, ಪೂರೈಕೆ ಮತ್ತು ವಿತರಣೆ ಜನಸಾಮಾನ್ಯರ ಕೈಯಲ್ಲಿ ಇರಬೇಕೇ ವಿನಾ ಎಲ್ಲಿಯೋ ಕೂತು ಯಂತ್ರಗಳ ಮೂಲಕ ನಿಯಂತ್ರಿಸುವ ಉದ್ಯಮಿಯ ಕೈಯಲ್ಲಿ ಅಲ್ಲ.
ಬೇಸಾಯ ಕೇವಲ ಮನುಷ್ಯನಿಂದ ಮಾತ್ರ ಸಾಧ್ಯವಾಗದು. ಪ್ರಾಣಿ ಬಲದ ನೆರವೂ ಬೇಕು. ಕೃಷಿ-ಪಶುಪಾಲನೆ ಒಂದಕ್ಕೊಂದು ಪೂರಕ, ಒಂದಕ್ಕೊಂದು ಪೋಷಕ.

ನಮ್ಮದು ವಿಸ್ತಾರವಾದ ದೇಶ. ಇಲ್ಲಿನ ಭೂಹಿಡುವಳಿಗಳು ಸಣ್ಣವು. ಇದು ಹಳ್ಳಿಗಳ ದೇಶ. ಸಣ್ಣ ಸಣ್ಣ ಸಮುದಾಯಗಳು ದೇಶ. ಇಲ್ಲಿಗೆ ಸಣ್ಣ ಸಣ್ಣ ಪ್ರಮಾಣದ ಬೇಸಾಯ ಉಪಕರಣಗಳೇ ಸೂಕ್ತ. ನೇಗಿಲು ಓಬೀರಾಯನ ಕಾಲದ್ದು ನಿಜ. ಆದರೆ ಸಾವಿರಾರು ವರ್ಷಗಳಿಂದಲೂ ನಡೆದು ಬಂದಿದೆ. ನಮ್ಮ ರೈತನನ್ನೂ, ನಮ್ಮನ್ನೂ ಸಾಕುತ್ತಾ ಬಂದಿದೆ.

ನಮ್ಮ ಬೇಸಾಯಕ್ಕೆ ಪಶು ಅಗತ್ಯ. ಪಶುಬಲ+­ಮಾನವಬಲ+ಸಮೃದ್ಧಿ= ಜೀವನ ಎನ್ನಬೇಕು. ನಮ್ಮಲ್ಲಿ ಗೋಪಾಲನೆ ಹಾಲಿಗೆ ಮಾತ್ರಲ್ಲ. ಗೊಡ್ಡು ದನವೂ ನಿರುಪಯುಕ್ತ ಅಲ್ಲ. ಹಾಕುವ ಸೆಗಣಿ ಅತ್ಯಮೂಲ್ಯ ಗೊಬ್ಬರ. “ಹಾದಿ ಬೀದಿಯಲ್ಲಿರುವ ಕಸವ ಮೆದು ಮನೆಗೈಯುವ ಹಸು, ಎತ್ತು’ ನಮಗೆ ಎಷ್ಟು ಉಪಕಾರ ಮಾಡುತ್ತವೆ? ಟ್ರ್ಯಾಕ್ಟರ್‌ ನೆಲ ಬಗೆಯಬಹು ದು, ಆದರೆ ಸೆಗಣಿ ಹಾಕುತ್ತದೆಯೇ ಎಂದು ಪ್ರಶ್ನಿಸಿದರು ರಿಚರ್‌ಡೆY†ಗ್‌ ಎಂಬ ಸಮಾಜ ವಿಜ್ಞಾನಿ. ನಮ್ಮ ಹಸು ಎತ್ತು ಸೆಗಣಿ ಹಾಕುತ್ತವೆ. ಅದು ಭೂಮಿಗೆ ಅತ್ಯವಶ್ಯ ಗೊಬ್ಬರ. ಇವತ್ತೂ ಕೊಟ್ಟಿಗೆ ಗೊಬ್ಬರ, ಹಸುರುಗೊಬ್ಬರ ಅತ್ಯಂತ ಸಾರಯುಕ್ತ ಎಂದು ಎಲ್ಲರೂ ಹೇಳುತ್ತಾರೆ. ರಾಸಾಯನಿಕ ಗೊಬ್ಬರಗಳ ಭಯಂಕರ ದುಷ್ಟರಿಣಾಮಗಳು ಪಾಶ್ಚಾತ್ಯರನ್ನೂ ಕಂಗೆಡಿಸುತ್ತಿವೆ. ಅವುಗಳ ಉಪಯೋಗ ನಿಸರ್ಗ ಜೀವನ ಚಕ್ರ ಸಂಚಲನವನ್ನು ಘಾಸಿಗೊಳಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ರಾಸಾಯನಿಕ ಗೊಬ್ಬರದಿಂದ ಬೆಳೆದ ಆಹಾರ ಪದಾರ್ಥಗಳು ಮಾನವನ ದೇಹಾರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ. ಹಣ್ಣು ಹಂಪಲು, ಧಾನ್ಯ, ಕಾಯಿಪಲ್ಯ, ಕೊನೆಗೆ ತಾಯಿಯ ಎದೆ ಹಾಲೂ ವಿಷಮಯ ಆಗುತ್ತಿವೆ. ಈ ಗೊಬ್ಬರ ಕೀಟನಾಶಕ ಇತ್ಯಾದಿಗಳ ಬಳಕೆಯಿಂದ.

ಗ್ರಾಮ ಸ್ವರಾಜ್ಯಕ್ಕೆ ಜನಶಕ್ತಿಯೇ ಮೂಲ ಆಧಾರ. ಜನರೇ ಮುಖ್ಯ. ನಡೆಸುವುದೆಲ್ಲವೂ ಜನರಿಂದ, ಜನರಿಗಾಗಿ ಅಪಾರಶಕ್ತಿ ಅಡಗಿದೆ. ದೈಹಿಕ ಬಲ ಇರಬಹುದು. ಬುದ್ಧಿಬಲವೂ ಇರಬಹುದು. ಹಳ್ಳಿಯಲ್ಲಿ ಬುದ್ಧಿಬಲ ಒಂದೇ ಸಾಲದು. ದೇಹಬಲವೂ ಬಹುಮುಖ್ಯ. ಕೃಷಿ ಪಶುಪಾಲನೆ ಮುಂತಾದ ಗ್ರಾಮೀಣ ಉದ್ಯಮಗಳಲ್ಲಿ ದೇಹಬಲ-ಮಾನವ ಪರಿಶ್ರಮ ಅತ್ಯಗತ್ಯ. ಅದರಿಂದ ಹಳ್ಳಿಯ ಜನರಿಗೆ ಉದ್ಯೋಗ. ಅವರಲ್ಲಿ ಇರುವ ನೈಸರ್ಗಿಕ ಶಕ್ತಿಗೆ ಸದುಪಯೋಗ. ಆ ಶಕ್ತಿಯ ಸೂಕ್ತ ಬಳಕೆ ಆಗದಿದ್ದಲ್ಲಿ ಅದು ಹಾದಿತಪ್ಪಿ, ಸಮಾಜಕ್ಕೆ ಹಾನಿಕರವೂ ಆಗಬಹುದು.

ಯಂತ್ರ ನಾಗರಿಕತೆಯಲ್ಲಿ ಮಾನವ ಪರಿಶ್ರಮಕ್ಕೆ ಎರಡನೆಯ ಸ್ಥಾನ. ಯಂತ್ರ ಬಲವೇ ಮೊದಲು. ಯಾರೋ ಎಲ್ಲೋ ಬುದ್ಧಿ ಉಪಯೋಗಿಸಿ ಯಂತ್ರ ರೂಪಿಸುತ್ತಾನೆ. ಪೆಟ್ರೋಲ್‌, ವಿದ್ಯುತ್‌ ಇಂಧನ ಯಂತ್ರವನ್ನು ಓಡಿಸುತ್ತದೆ. ಯಾರೋ ಬಳಸುತ್ತಾರೆ. ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕಗಳ ಉತ್ಪಾದನೆಯೂ ಆಗುತ್ತದೆ. ಇನ್ನಾರೋ ಬಳಸುತ್ತಾರೆ; ಏಕೆ ಏನು ಕೇಳುವುದಿಲ್ಲ.
ಗ್ರಾಮದಲ್ಲಿ ಹಾಗಲ್ಲ. ರೈತನ ನೇಗಿಲು, ಕುಂಟೆಗುಳ, ಕುಡುಗೋಲು ಇತ್ಯಾದಿ ಹೆಚ್ಚು ಕಡಿಮೆ ಎಲ್ಲ ಉಪಕರಣಗಳೂ ಹಳ್ಳಿಯಲ್ಲೇ ತಯಾರಾಗುತ್ತವೆ. ಎಷ್ಟೋ ಸಲಕರಣೆಗಳನ್ನು ಅವನೇ ಮಾಡಿಕೊಳ್ಳುತ್ತಾನೆ. ಇನ್ನಿತರ ಕಸುಬುಗಳಲ್ಲೂ ಅಷ್ಟೇ. ರೈತ ಸ್ವಂತ ಅನುಭವದಿಂದ ತನಗೆ ಬೇಕಾದ ಸಲಕರಣೆಗಳನ್ನು ತಾನೇ ರೂಪಿಸಿಕೊಳ್ಳುತ್ತಾನೆ. ತಂತ್ರವನ್ನು ಹೊಂದಿಸಿಕೊಳ್ಳುತ್ತಾನೆ. ನೀರಿಗೆ ಬಿದ್ದವನು ಈಜು ಕಲಿಯಲೇಬೇಕಲ್ಲ ಹಾಗೆ. ನಮ್ಮ ರೈತನಲ್ಲಿ ಯುಗಯುಗಗಳ ಅನುಭವ ಹರಿದು ಬಂದಿದೆ. ಅದೇ ಅವನ ಆಸ್ತಿ. ಆ ಅನುಭವವನ್ನು ಅಲ್ಲಗಳೆಯಬಹುದೇ? ದೂರ ಮಾಡಬಹುದೇ ಅದರ ಸದುಪಯೋಗಬೇಡವೇ? ಅದೆಲ್ಲ ನಷ್ಟವಾಗಲು ಬಿಡೋಣವೇ?

ಗಾಂಧೀಜಿ ಈ ಮಾತನ್ನೇ ಜನಶಕ್ತಿಗೂ ಅನ್ವಯಿಸುತ್ತಾರೆ. ಜನಕೋಟಿಯಲ್ಲಿ ಹೀಗೆ ಬಳಕೆ ಆಗದ ಕಾಲ ಹಾಗೂ ಪರಿಶ್ರಮ ಹೇರಳವಾಗಿ ಅಡಗಿದೆ. ಎಲ್ಲರಿಗೂ ದೊರಕಬಹುದಾದ ಸಂಪನ್ಮೂಲ ಎಷ್ಟೋ ಗಣನೆಗೆ ಬಾರದೆ ಇವೆ. ಇವೆಲ್ಲ ಕಣಕಣವಾಗಿ ಇರಬಹುದು. ಢಾಳಾಗಿ ಕಣ್ಣಿಗೆ ಕಾಣಿಸದೆ ಇರಬಹುದು-ಸಾಗರದಲ್ಲಿನ ಚಿನ್ನದಂತೆ. ಆದರೆ ಈ ಶಕ್ತಿಯೆಲ್ಲವನ್ನು ಪೂರ್ಣವಾಗಿ ಸೂಕ್ತವಾಗಿ ಬಳಸಿಕೊಂಡೆ­ವಾದರೆ ಜನಕೋಟಿಯ ಯೋಗಕ್ಷೇಮ ಅದ್ಭುತವಾಗಿ ಸಾಧಿಸೀತು. ಅದರ ಪ್ರಮಾಣ ಸರಕಾರದ ಎಲ್ಲ ಯೋಜನೆಗಳ ಪರಿಣಾಮ ಪ್ರಮಾಣಕ್ಕಿಂತ ಬಹುಪಟ್ಟು ಹೆಚ್ಚು ಆದೀತು. ಕಣಕಣ ಕೂಡಿ ರಾಶಿ, ಹನಿಹನಿ ಸೇರಿ ಕಡಲು!

~ ಸುಮ ಚಂದ್ರಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next