ಕುಂದಾಪುರದಲ್ಲಿ ಪ್ರವಾಸ ನಡೆಸಿದರು.
Advertisement
ಉದ್ಯಾವರದ ಹೊಳೆಯನ್ನು ದೋಣಿ ಮೂಲಕ ದಾಟಿ ಉಡುಪಿಗೆ ಬಂದ ಗಾಂಧೀಜಿಯವರು ಅಜ್ಜರಕಾಡಿನ ಮೈದಾನದಲ್ಲಿ ದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದವರು ಕಾರ್ಪೊರೇಶನ್ ಬ್ಯಾಂಕ್ ಸ್ಥಾಪಕ ಅಧ್ಯಕ್ಷರಾಗಿದ್ದ ಹಾಜಿ ಅಬ್ದುಲ್ಲಾ ಸಾಹೇಬ್. ಅಸ್ಪೃಶ್ಯತಾ ನಿವಾರಣೆಗಾಗಿಯೇ ಈ ಪ್ರವಾಸವನ್ನು ಗಾಂಧೀಜಿ ಕೈಗೊಂಡಿದ್ದರಿಂದ ವಿವಿಧೆಡೆಗಳಲ್ಲಿ ದಲಿತೋದ್ಧಾರಕ್ಕಾಗಿ ಹಣ ಸಂಗ್ರಹಿಸಿದ್ದರು. ಇದರಲ್ಲಿ ಚಿನ್ನ ಸಂಗ್ರಹವೂ ಇತ್ತು. ಉಡುಪಿಯಲ್ಲಿ ನಡೆದ ಸಭೆಯಲ್ಲಿ ಪಾಂಗಾಳ ನಾಯಕ್ ಕುಟುಂಬದ ನಿರುಪಮಾ ನಾಯಕ್ ಅವರೂ ಚಿನ್ನದ ಆಭರಣವನ್ನು ಸಮರ್ಪಿಸಿದ್ದರು.
ಎಂದು ಹಾಸ್ಯ ಚಟಾಕಿ ಹಾರಿಸಿದರು. ಆ ಸನ್ನಿವೇಶ ಹೀಗಿತ್ತು: ಗಾಂಧೀಜಿಯವರು ಬಂದ ಚಿನ್ನಾಭರಣ ಉಡುಗೊರೆ ಗಳನ್ನು ಏಲಂ ಹಾಕಿದರು. ಗಾಂಧೀಜಿಯವರೇ ಸ್ವತಃ ಕರೆದರೂ ಏಲಂಗೆ ನಿರೀಕ್ಷಿತ ಲಾಭ ಆಗಲಿಲ್ಲ.
Related Articles
Advertisement
“ಇದು ಗಾಂಧೀಜಿ ಕೊಟ್ಟ ದೊಡ್ಡ ಬಿರುದು ಎಂದು ನನ್ನ ತಂದೆ ಹೇಳುತ್ತಿದ್ದರು’ ಎಂದು ಡಾ|ಎಂ.ವಿ.ಕಾಮತ್ ನೆನಪಿಸಿಕೊಳ್ಳುತ್ತಿದ್ದರು. ಈ ಮಾತನ್ನು ಉಡುಪಿ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಶೋಧಕ ಯು. ವಿನೀತ್ ರಾವ್ ಅವರಲ್ಲಿ ಡಾ|ಎಂ.ವಿ.ಕಾಮತ್ ನೆನಪಿಸಿಕೊಂಡಿದ್ದರು. ಉಡುಪಿಯಲ್ಲಿ ಸಂಗ್ರಹವಾದ ಮೊತ್ತ 1,240 ರೂ. ಇದರಲ್ಲಿ ಪಡುಬಿದ್ರಿ, ಕಾಪು, ಕಟಪಾಡಿ, ಉದ್ಯಾವರದಿಂದ ಸಂಗ್ರಹವಾದ ಮೊತ್ತವೂ ಸೇರಿದೆ.
ಉಡುಪಿಯ ಬಳಿಕ ಕಲ್ಯಾಣಪುರ, ಬ್ರಹ್ಮಾವರಕ್ಕೆ ಸಂಜೆ 5 ಗಂಟೆಗೆ ಗಾಂಧೀಜಿಯವರು ತೆರಳಿ ಭಾಷಣ ಮಾಡಿದರು. ಇಲ್ಲಿ 239 ರೂ. ಸಂಗ್ರಹವಾಯಿತು. ರಾತ್ರಿ 8 ಗಂಟೆಗೆ ಕುಂದಾಪುರಕ್ಕೆ ತೆರಳಿ ಅಲ್ಲಿ ಭಾಷಣ ಮಾಡಿದರು. ಕುಂದಾಪುರದಲ್ಲಿ 1,143 ರೂ.ಸಂಗ್ರಹವಾಯಿತು. ರಾತ್ರಿ ಅಲ್ಲಿ ವಾಸ್ತವ್ಯವಿದ್ದು ಫೆ. 26ರಂದು ಸೋಮವಾರ ಮೌನವ್ರತ ಆಚರಿಸಿ ಫೆ. 27ರಂದು ದಯಾವತಿ ಹಡಗಿನ ಮೂಲಕ ಕಾರವಾರಕ್ಕೆ ತೆರಳಿ ತಮ್ಮ ಪ್ರವಾಸವನ್ನು ಮುಂದುವರಿಸಿದರು. ಗಾಂಧೀಜಿ ಪ್ರತಿಮೆ ಅನಾವರಣ
2000ನೇ ಅ. 2 ಗಾಂಧೀ ಜಯಂತಿಯಂದು ಅಜ್ಜರಕಾಡಿನಲ್ಲಿ ಗಾಂಧೀಜಿಯವರ ಶಿಲಾ ಪ್ರತಿಮೆಯನ್ನು ಸಮಾಜ ಕಲ್ಯಾಣ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ಆನಾವರಣಗೊಳಿಸಿದ್ದರು. ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಡಿ.ಟಿ.ಪೈ, ಸಂಸದರಾಗಿದ್ದ ವಿನಯಕುಮಾರ ಸೊರಕೆ, ಶಾಸಕರಾಗಿದ್ದ ಯು.ಆರ್. ಸಭಾಪತಿ, ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ|ವಿ.
ಎಸ್.ಆಚಾರ್ಯ, ಜಿಲ್ಲಾಧಿಕಾರಿ ಗೌರವ ಗುಪ್ತ, ಉದ್ಯಮಿ ಕೆ.ಸತೀಶ್ಚಂದ್ರ ಹೆಗ್ಡೆ, ಡಾ|ಮುರಾರಿ ಬಲ್ಲಾಳ್, ನಗರಸಭಾಧ್ಯಕ್ಷೆಯಾಗಿದ್ದ ಆನಂದಿ, ಉಪಾಧ್ಯಕ್ಷರಾಗಿದ್ದ ರೆನೋಲ್ಡ್ ಪ್ರವೀಣ್‌ಕುಮಾರ್, ಪೌರಾಯುಕ್ತ ಡಿ.ಬಸಪ್ಪ
ಮೊದಲಾದವರು ಪಾಲ್ಗೊಂಡಿದ್ದರು.