Advertisement

ಸಂಗೀತ ಕ್ಷೇತ್ರಕ್ಕೆ ಎಸ್‌ಪಿಬಿ-ರಾಜನ್‌ ಕೊಡುಗೆ ಅಪಾರ

06:37 PM Nov 01, 2020 | Suhan S |

ರಾಯಚೂರು: ಬಹುಭಾಷಾ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಸಂಗೀತ ನಿರ್ದೇಶಕ ರಾಜನ್‌ ತಮ್ಮ ವಿಶಿಷ್ಟ ಸೇವೆ ಮೂಲಕ ಸಂಗೀತ ಲೋಕದ ಮೆರುಗು ಹೆಚ್ಚಿಸಿದ್ದಾರೆ ಎಂದು ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ ತಿಳಿಸಿದರು.

Advertisement

ನಗರದ ಪಂ.ಸಿದ್ಧರಾಮಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ಗಾನ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಲವು ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ಎಸ್‌ .ಬಿ.ಬಾಲಸುಬ್ರಹ್ಮಣ್ಯಂ ತಮ್ಮ ಶಾರೀರ್ಯದ ಮೂಲಕ ಅಜರಾಮರಾಗಿದ್ದಾರೆ. ಅವರು ಗಾಯನ ಮಾಡದ ಹಾಡುಗಳಿಲ್ಲ ಎನ್ನುವಂತೆ ಹಾಡಿ ರಂಜಿಸಿದ್ದಾರೆ. ಅದೇ ರೀತಿ ಕನ್ನಡ ನಾಡಿನ ಸಂಗೀತ ನಿರ್ದೇಶಕ ರಾಜನ್‌ ಕೂಡ ಅನೇಕ ಹಾಡುಗಳಿಗೆ ರಾಗ ಸಂಯೋಜಿಸಿ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.  ಈ ಇಬ್ಬರು ಸಾಧಕರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದೇ ಹೇಳಬಹುದು ಎಂದರು.

ಹಿರಿಯ ರಂಗಕರ್ಮಿ ವಿ.ಎನ್‌.ಅಕ್ಕಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಜಿಲ್ಲೆಯ ವಿವಿಧ ಕಲಾವಿದರಿಂದ ಎಸ್‌ ಪಿಬಿ ಮತ್ತು ರಾಜನ್‌ರ ಹಾಡುಗಳನ್ನು ಹಾಡಿ ಗಾನ ನಮನ ಸಲ್ಲಿಸಲಾಯಿತು. ಕಲಾವಿದರಾದ ಸೂಗೂರೇಶ ಅಸ್ಕಿಹಾಳ, ಶರಣಪ್ಪ ಗೋನಾಳ, ಎನ್‌. ಕೆ.ಶಂಕರ್‌, ಕುಮಾರ್‌ ಶಕ್ತಿನಗರ, ಮಹಾಲಕ್ಷ್ಮೀ, ಎಸ್‌.ಪಿ.ಸಿದ್ದಯ್ಯಸ್ವಾಮಿ ಕವಿತಾಳ, ಗುರುರಾಜ ಕುಲಕರ್ಣಿ, ವೇಣುಗೋಪಾಲ, ಜಾವೆದ್‌, ಇಬ್ರಾಹಿಂ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

 ರಾಮರಾವ್‌ ಮಹಾರಾಜರಿಗೆ ಶ್ರದ್ಧಾಂಜಲಿ :

ಲಿಂಗಸುಗೂರು: ಬಂಜಾರಾ ಸಮುದಾಯದ ಧರ್ಮಗುರು ಡಾ. ರಾಮರಾವ್‌ ಮಹಾರಾಜ ಅವರು ನಿಧನರಾಗಿದ್ದರಿಂದ ಪಟ್ಟಣದಲ್ಲಿ ಬಂಜಾರಾ ಸಮುದಾಯದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಶ್ರದ್ಧಾಂಜಲಿ ಸಭೆಯಲ್ಲಿ ಬಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ ಮಾತನಾಡಿ, ಸಮುದಾಯದ ಗುರುಗಳು ಇಂದು ಅಗಲಿರುವುದು ದುಃ ಖದ ಸಂಗತಿಯಾಗಿದೆ. ದೇಶದೆಲ್ಲೆಡೆ ಸಂಚರಿಸಿ ಬಂಜಾರಾ ಸಮುದಾಯವನ್ನು ಜಾಗೃತಿ ಗೊಳಿಸಿ ಆಧ್ಯಾತ್ಮಿಕ ಶಕ್ತಿ ಎಚ್ಚರಗೊಳಿಸಿದ ಮಹಾನ್‌ ಚೇತನರು ಅವರಾಗಿದ್ದರು.

ಅವರ ಅಗಲಿಕೆ ಸಮುದಾಯ ದೊಡ್ಡ ಶಕ್ತಿಯನ್ನೇ ಕಳೆದುಕೊಂಡಿದೆ. ಆವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next