Advertisement

ಮದರಸಾಗಳನ್ನು ಮುಚ್ಚಬೇಕೆನ್ನುವ ಅಸ್ಸಾಂ ಸಿಎಂ ಹೇಳಿಕೆ ಖಂಡಿಸಿದ ಗಾಲಿ ರೆಡ್ಡಿ

06:46 PM Mar 20, 2023 | Team Udayavani |

ಗಂಗಾವತಿ: ಕರ್ನಾಟಕದಲ್ಲಿರುವ ಮದರಸಾಗಳನ್ನು ಮುಸ್ಲಿಮರು ಮುಚ್ಚುವಂತೆ ಹೇಳಿಕೆ ನೀಡಿದ ಅಸ್ಸಾಂ ಮುಖ್ಯಮಂತ್ರಿಗಳ ವರ್ತನೆ ಖಂಡನೀಯವಾಗಿದೆ. ರಾಷ್ಟ್ರಕವಿ ಕುವೆಂಪು ಅವರೇ ನಾಡಗೀತೆ ಜಯ ಭಾರತ ಜನನಿಯ ತನುಜಾತೆಯಲ್ಲಿ ಹೇಳಿರುವಂತೆ ಕರ್ನಾಟಕ ಹಿಂದೂ, ಕ್ರೈಸ್ತ,ಇಸ್ಲಾಂ ಸಕಲ ಧರ್ಮಗಳ ಶಾಂತಿಯ ತೋಟವಾಗಿದೆ. ಸಹೋದರರಂತಿರುವ ಹಿಂದೂ-ಮುಸ್ಲಿಂ ಬಾಂಧವರ ಮಧ್ಯೆ ಜಗಳ ಹಚ್ಚು ಕಾರ್ಯ ಸಲ್ಲದು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸಂಸ್ಥಾಪಕ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹೇಳಿದರು.

Advertisement

ಅವರು ನಗರ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಕೆಆರ್‌ಪಿ ಪಕ್ಷ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಅಸ್ಸಾಂ ಮುಖ್ಯಮಂತ್ರಿ ಕರ್ನಾಟಕದಲ್ಲಿರುವ ಮುಸ್ಲಿಂ ಧರ್ಮದ ಎಲ್ಲಾ ಮದರಸಾ ಗಳನ್ನು ಮುಚ್ಚಿಸಬೇಕೇಂದು ಹೇಳಿಕೆ ನೀಡಿರುವುದು ಧರ್ಮ ಧರ್ಮಗಳ ಮಧ್ಯೆ ಜಗಳ ಹಚ್ಚುವ ಕೆಲಸವಾಗಿದೆ. ನಾಡಗೀತೆಯಲ್ಲಿ ಕುವೆಂಪು ರವರು ಹೇಳಿದಂತೆ ಕನ್ನಡ ನಾಡು ಸರ್ವ ಧರ್ಮದವರನ್ನು ಹೊಂದಿರುವುದು ಹೆಮ್ಮೆಯ ಸಂಗತಿ. ಹಿಂದೂ-ಮುಸ್ಲಿಂ ಬಾಂಧವರ ನಡುವೆ ಯಾರಾದರೂ ತಾರತಮ್ಯವನ್ನು ಉಂಟುಮಾಡುವ ಪ್ರಯತ್ನ ಮಾಡಿದರೆ ಅಂತಹ ವ್ಯಕ್ತಿಗಳಿಗೆ ಜನರು ಸರಿಯಾದ ಬುದ್ಧಿ ಕಲಿಸಲಿದ್ದಾರೆ. ಹಿಂದೂ-ಮುಸ್ಲಿಂ ಸಹೋದರಾಗಿದ್ದಾರೆ. ಭಾರತ ಮಾತೆ ನನ್ನ ತಾಯಿ ಎನ್ನುವ ಭಾವನೆ ಅಧಿಕಾರ ನಡೆಸುವವರಿಗಿರಬೇಕು ಎಂದರು.

ಗಂಗಾವತಿಯಲ್ಲಿ ಹಗಲು ಸಮಯದಲ್ಲಿ ನಿದ್ದೆ ಮಾಡಿ ರಾತ್ರಿ ಸಮಯದಲ್ಲಿ ಕೆಲಸ ಮಾಡುವ ವ್ಯಕ್ತಿ ನಾನಲ್ಲ. ಮುಂಜಾನೆ 5 ರಿಂದ ರಾತ್ರಿ 10 ಗಂಟೆಯವರೆಗೆ ನಿಮ್ಮ ಸೇವೆಗೆ ಸಿಗುವ ಸಾಮಾನ್ಯ ಶಾಸಕನಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.

ನಗರದ ಪ್ರಮುಖ ಮುಖ್ಯ ರಸ್ತೆಗಳೊಂದಿಗೆ ಭಾರಿ ಗಾತ್ರದ ವಾಹನಗಳು ತಿರುಗಾಡಲು ಬೈಪಾಸ್ ರಸ್ತೆ ನಿರ್ಮಿಸುವುದಾಗಿ, ಹಾಗೂ ನಗರದಲ್ಲಿ ಉತ್ತಮ ಗುಣಮಟ್ಟದ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ, ಐತಿಹಾಸಿಕ ಆನೆಗುಂದಿಯ ಅಂಜನಾದ್ರಿಗೆ ಐದು ವರ್ಷದ ಅವಧಿಯಲ್ಲಿ ಒಟ್ಟಿಗೆ 5000 ಕೋಟಿ ರೂಗಳ ಮೀಸಲಿಟ್ಟು ಅಭಿವೃದ್ಧಿ ಮಾಡುವುದು ಹಾಗೂ ರಾಷ್ಟ್ರದಲ್ಲಿಯೇ ಅತಿ ಎತ್ತರದ ಹನುಮನ ಮೂರ್ತಿ ನಿರ್ಮಾಣ ಮಾಡುವುದಾಗಿ, ಜೊತೆಗೆ ನಗರದ ಬೀದಿ ಬದಿ ವ್ಯಾಪಾರಗಳಿಗೆ ಅನುಕೂಲ ವಾಗುವಂತೆ ಸುಂದರವಾದ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಗೆದ್ದ ನಂತರ ಬಳ್ಳಾರಿ ಗೆ ಹೋಗುತ್ತೇನೆ ಅನ್ನುವ ವ್ಯಕ್ತಿಗಳಿಗೆ ನಾನು ಕೇಳುವ ಪ್ರಶ್ನೆ ಎನೆಂದರೇ ಬಳ್ಳಾರಿ ಎನು ಇಟಲಿಯಲ್ಲಿ ಇಲ್ಲ. ಕೇವಲ 1 ಗಂಟೆ ಪ್ರಯಾಣ ದ 60 ಕಿಮಿ ದೂರದಲ್ಲಿದೆ. ನಾನು ಗಂಗಾವತಿ ಗೆ ರಾಜಕೀಯ ಮಾಡಲು ಬಂದಿಲ್ಲ ಅಭಿವೃದ್ಧಿ ಗೆ ನಾನು ರಾಜಕೀಯಕ್ಕೆ ಬಂದಿದ್ದು, ಯಾರ ಮಾತಿಗೂ ಕಿವಿಗೊಡಬೇಡಿ. ನಾನು ರಾಜಕಾರಣ ದಲ್ಲಿ ಇರುವವರೆಗೂ ಗಂಗಾವತಿಯೇ ನನ್ನ ಕರ್ಮ ಭೂಮಿ ಎಂದರು.

ಈ ಸಂದರ್ಭದಲ್ಲಿ ಕೆಆರ್‌ಪಿ ಪಕ್ಷದ ಜಿಲ್ಲಾಧ್ಯಕ್ಷ ಎ.ಮನೋಹರಗೌಡ, ಒಬಿಸಿ ಅಧ್ಯಕ್ಷ ಅಮರಜ್ಯೋತಿ ನರಸಪ್ಪ, ಈ.ರಾಮಕೃಷ್ಣ, ಆಗೋಲಿ ದುರುಗಪ್ಪ ಸೇರಿ ಹಲವು ನಾಯಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next