Advertisement

ಗೈರಾಣಿ ಜಮೀನು ಪಾಲಿಕೆಗೆ ಹಸ್ತಾಂತರಿಸಿ

06:40 AM Jan 25, 2019 | Team Udayavani |

ಕಲಬುರಗಿ: ತಾಲೂಕಿನ ಕುಸನೂರ ಗ್ರಾಮದ ಹೊರವಲಯದ ಸರ್ಕಾರಿ ಗೈರಾಣಿ ಜಮೀನಿನಲ್ಲಿ ಪೌರಕಾರ್ಮಿಕರ ಗೃಹ ಭಾಗ್ಯ ಮತ್ತು ಆಶ್ರಯ ನಿವೇಶನ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಜನಜಾಗೃತಿ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

Advertisement

ಕಳೆದ ಒಂಭತ್ತು ವರ್ಷಗಳಿಂದ ಕಲಬುರಗಿ ದಕ್ಷಿಣ, ಉತ್ತರ ಮತ ಕ್ಷೇತ್ರ ಸೇರಿದಂತೆ ಜಿಲ್ಲಾದ್ಯಂತ ಆರ್ಥಿಕ ಕಡು ಬಡವರು, ನಿವೇಶನ ರಹಿತರು ಮತ್ತು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿರುವರರನ್ನು ಗುರುತಿಸಿ 2,500 ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು. ಮನೆಗಳ ನಿರ್ಮಾಣಕ್ಕೆ ಕುಸನೂರ ಗ್ರಾಮದ ಸರ್ವೇ ನಂ.151ರ 95 ಎಕರೆ 36 ಗುಂಟೆ ಜಾಗ ಗುರುತಿಸಿಲಾಗಿದೆ. ಇದುವರೆಗೂ ಪಾಲಿಕೆಗೆ ಜಾಗವನ್ನು ಹಸ್ತಾಂತರಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗುರುತಿಸಿದ ಜಾಗವನ್ನು ಪೌರ ಕಾರ್ಮಿಕರ ಗೃಹ ಭಾಗ್ಯ ಮತ್ತು ಆಶ್ರಯ ನಿವೇಶನ ಫಲಾನುಭವಿಗಳಿಗೆ ಹಂಚಿಕೆ ಮಡುವಂತೆ ಈ ಹಿಂದೆ ಪೌರಾಡಳಿತ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಹಿಂದೆಯೇ ಪಾಲಿಕೆಗೆ ಹಸ್ತಾಂತರಿಸಲು ಸೂಚಿಸಿದ್ದರು. ಆದರೂ, ಎರಡ್ಮೂರು ವರ್ಷಗಳಿಂದ ಈ ಕುರಿತು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸುತ್ತಿದೆ. ಕೂಡಲೇ ಸಂಬಂಧಿಸಿದ ಜಾಗವನ್ನು ಪಾಲಿಕೆಗೆ ಹಸ್ತಾಂತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಮಿತಿ ರಾಜ್ಯ ಸಂಚಾಲಕ ರುಕ್ಕಪ್ಪ ಟಿ.ಕಾಂಬಳೆ, ಕಾರ್ಯದರ್ಶಿ ಸಿದ್ಧಾರೂಢ ದುಮ್ಮನಸೂರ, ಜಿಲ್ಲಾಧ್ಯಕ್ಷ ಅಮೀರ ಸಾಬ್‌ ನದಾಫ, ಜೈರಾಜ ಕಿರಣಗೀಕರ, ವಿಜಯಕುಮಾರ ಸಾವಳಗಿ, ಧರ್ಮಣ್ಣ ಪೂಜಾರಿ, ಶಿವಾಜಿ ಪಟ್ಟಣ, ಮಹಾನಂದ ಕುಮಸಿ, ನೂರ ಅಹ್ಮದ ಹಾಗೂ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next