Advertisement

ಆತ ಕೂಡಾ ಮನುಷ್ಯ, ಗೇಲ್ ವಿಕೆಟ್ ಪಡೆಯೋದು ಅಸಾಧ್ಯವಲ್ಲ: ರಶೀದ್

11:10 AM Feb 20, 2019 | |

ಲಂಡನ್: ವೆಸ್ಟ್ ಇಂಡೀಸ್ ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಕೂಡಾ ಎಲ್ಲರಂತೆ ಮನುಷ್ಯನೇ. ಆತನೂ ತಪ್ಪು ಮಾಡುತ್ತಾನೆ. ಗೇಲ್ ವಿಕೆಟ್ ಪಡೆಯುವುದು ಅಸಾಧ್ಯವೇನಲ್ಲ ಎಂದು ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಹೇಳಿದ್ದಾರೆ.

Advertisement

ವಿಂಡೀಸ್ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಮುಂಬರುವ ವಿಶ್ವಕಪ್ ನಲ್ಲಿ ಆಡುವ ಹಂಬಲ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಆದಿಲ್ ರಶೀದ್ ಈ ಹೇಳಿಕೆ ನೀಡಿದ್ದಾರೆ. ನಾವು ನಮ್ಮ ಸಾಮಾರ್ಥ್ಯದ ಮೇಲೆ ನಂಬಿಕೆ ಇಟ್ಟು ಬೌಲಿಂಗ್ ನಡೆಸಬೇಕು ಮತ್ತು ಆತನನ್ನು ಔಟ್ ಮಾಡಬಲ್ಲೆ ಆತ್ಮವಿಶ್ವಾಸ ಇದ್ದರೆ ಗೇಲ್ ರನ್ನು ಔಟ್ ಮಾಡುವುದು ದೊಡ್ಡ ವಿಷಯವೇನಲ್ಲ ಎಂದರು.

ಈ ವಿಶ್ವಕಪ್ ನಂತರ ವಿದಾಯ ಘೋಷಿಸುವುದಾಗಿ ಹೇಳಿರುವ ಗೇಲ್, ಬುಧವಾರದಿಂದ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಈ ವೇಳೆ ‘ಇಂಗ್ಲೆಂಡ್ ನ ಆರಂಭಿಕ ಬೌಲರ್ ಯಾರು ಎಂದು ನನಗೆ ಗೊತ್ತಿಲ್ಲ. ಯಾರೇ ಆದರೂ ಗೇಲ್ ಗೆ ಬೌಲಿಂಗ್ ನಡೆಸುವಾಗ ಹೆದರುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.


ಈ ಬಗ್ಗೆಮಾತನಾಡಿದ ರಶೀದ್, ಗೇಲ್ ರನ್ನು ಔಟ್ ಮಾಡಲು ಒಂದು ಉತ್ತಮ ಎಸೆತ ಸಾಕು.ಯಾಕೆಂದರೆ ಆತನೂ ಮನುಷ್ಯನೇ ಮತ್ತು ಮನುಷ್ಯರು ತಪ್ಪು ಮಾಡುತ್ತಾರೆ ಎಂದರು.

ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಬುಧವಾರ ರಾತ್ರಿ 8.30ಕ್ಕೆ (ಭಾರತೀಯ ಕಾಲಮಾನ ) ಬಾರ್ಬಡೋಸ್ ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ.   

Advertisement

Udayavani is now on Telegram. Click here to join our channel and stay updated with the latest news.

Next