Advertisement

ಗಗನ್‌ ಶಕ್ತಿ : ವಾಯುಪಡೆ ಬಲಪ್ರದರ್ಶನ 

07:55 AM Apr 18, 2018 | Karthik A |

ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ ವಿವಿಧ ವಾಯು ನೆಲೆಗಳಲ್ಲಿ ಭಾರತೀಯ ವಾಯುಪಡೆ ಸದ್ದಿಲ್ಲದೆ ಸೇನಾ ಕವಾಯತನ್ನು ಆರಂಭಿಸಿದೆ. ಎ.8ರಿಂದಲೇ ಇದು ಶುರುವಾಗಿದ್ದು, 22ರವರೆಗೆ ನಡೆಯಲಿದೆ. ಈ ಕವಾಯತಿಗೆ ‘ಗಗನ್‌ ಶಕ್ತಿ’ ಎಂದು ಹೆಸರಿಡಲಾಗಿದೆ. ದೇಶದ ಭದ್ರತೆಯ ಕಾರಣದಿಂದಾಗಿ ಇದನ್ನು ಗೌಪ್ಯವಾಗಿಡಲಾಗಿದೆ. 2004ರಿಂದ ಆರಂಭವಾಗಿರುವ ವಾಯುಪಡೆ ಕವಾಯತು, ಈವರೆಗೆ ವಿವಿಧ ದೇಶಗಳಲ್ಲಿ ಆಯಾ ಸೇನೆಯ ಸಹಕಾರದೊಂದಿಗೆ ನಡೆದಿವೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಸ್ವತಂತ್ರವಾಗಿ ಕವಾಯತು ನಡೆಯುತ್ತಿರುವುದು ವಿಶೇಷ.

Advertisement

ಹೊಸ ಬೆಳವಣಿಗೆ
ಲಘು ಯುದ್ಧ ವಿಮಾನ ‘ತೇಜಸ್‌ ಮಾರ್ಕ್‌ 1’ ಇದೇ ಮೊದಲ ಬಾರಿಗೆ ‘ಗಗನ್‌ ಶಕ್ತಿ’ಯಲ್ಲಿ ಹಾರಾಟ ನಡೆಸಿದೆ. ವಿಮಾನದ ಸಾಮರ್ಥ್ಯ, ನಿಗದಿತ ಗುರಿಗೆ ದಾಳಿಯಿಡುವ ಛಾತಿಗಳನ್ನು ಪರೀಕ್ಷಿಸಿ, ಇದರ ಶಕ್ತಿ, ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಸುಧಾರಿತ ‘ತೇಜಸ್‌ ಮಾರ್ಕ್‌ 2’ ತಯಾರಿಸಲು ಯೋಜಿಸಲಾಗಿದೆ.

ಉದ್ದೇಶ
– ವಾಯುಪಡೆಗೆ ತನ್ನ ಶಕ್ತಿಯನ್ನು ಅರಿಯುವ ಅವಕಾಶ
– ಲೋಪದೋಷಗಳನ್ನು ಸರಿಪಡಿಸಲು ಪ್ರಯತ್ನ
– ಶತ್ರು ರಾಷ್ಟ್ರಗಳ ವಾಯುಪಡೆಗೆ ಸಡ್ಡು

ಭಾಗಿಯಾಗಿರುವ ಯುದ್ಧ ವಿಮಾನಗಳು
ಸುಖೋಯ್‌ ಸು-30 ಎಂಕೆಐ
ಮಿಕೋಯನ್‌ ಮಿ-29
ಸೆಪೆಕ್ಯಾಟ್‌ ಜಾಗ್ವಾರ್‌
ಎಚ್‌ಎಎಲ್‌ ತೇಜಸ್‌ (ಮಾರ್ಕ್‌ 1) 
ಮಿಕೋಯನ್‌-ಗುರೆವಿಚ್‌ ಮಿಗ್‌-21
ಮಿಕೋಯನ್‌ ಮಿಗ್‌-27
ಲಾಕಿØàಡ್‌ ಮಾರ್ಟಿನ್‌ “ಸಿ’ 130ಜೆ ಸೂಪರ್‌ಜೆಟ್‌ ಹಕ್ಯುìಲೆಸ್‌
ಇಲ್ಯುಷಿನ್‌ ಐಎಲ್‌-78 ಎಂಕೆಐ
ಎಎನ್‌-32

ಈವರೆಗಿನ ಕವಾಯತು​​​​​​​

Advertisement
Advertisement

Udayavani is now on Telegram. Click here to join our channel and stay updated with the latest news.

Next