Advertisement

ಗಫೂರ್‌ ಹಾಜಿ ಸಾವಿಗೆ ವಿಷ ಸೇವನೆ ಕಾರಣ

12:03 AM Apr 29, 2023 | Team Udayavani |

ಕಾಸರಗೋಡು: ಪಳ್ಳಿಕೆರೆ ಪೂಚಕ್ಕಾಡು ನಿವಾಸಿ, ಕೊಲ್ಲಿ ಉದ್ಯೋಗಿ ಎಂ.ಸಿ. ಗಫೂರ್‌ ಹಾಜಿ (54) ಅವರ ಸಾವಿಗೆ ವಿಷ ಸೇವನೆ ಕಾರಣವಾಗಿದೆ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಸೂಚಿಸಲಾಗಿದೆ ಎಂದು ಬೇಕಲ ಪೊಲೀಸರು ತಿಳಿಸಿದ್ದಾರೆ.

Advertisement

ಆದರೆ ಗಫೂರ್‌ ಹಾಜಿ ಸ್ವಯಂ ವಿಷ ಸೇವಿಸಿದರೇ ಅಥವಾ ಬೇರೆ ಯಾರಾದರೂ ಅವರಿಗೆ ನೀಡಿದ್ದರೇ ಎಂಬ ನಿಗೂಢತೆ ಇನ್ನೂ ಉಳಿದುಕೊಂಡಿದೆ. ಮೃತದೇಹದ ವಿಸರಾ (ಆಂತರಿಕ ಅವಯವಗಳ ಭಾಗ)ವನ್ನು ಉನ್ನತ ಮಟ್ಟದ ರಾಸಾಯನಿಕ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅದರ ವರದಿ ಕೈಸೇರಿದ ಬಳಿಕವಷ್ಟೇ ಗಫೂರ್‌ ಹಾಜಿ ಸ್ವತಃ ವಿಷ ಸೇವಿಸಿದರೆ ಅಥವಾ ಬೇರೆ ಯಾರಾದರೂ ನೀಡಿದ್ದರೆ ಎಂದು ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಫೂರ್‌ ಹಾಜಿ ಹಲವರಿಂದ ಚಿನ್ನ ಪಡೆದಿದ್ದರು. ಅದನ್ನು ಯಾವ ಉದ್ದೇಶಕ್ಕಾಗಿ ಅವರು ಪಡೆದಿದ್ದರು ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಅದಕ್ಕಾಗಿ ಅವರಿಗೆ ಚಿನ್ನ ನೀಡಿರುವ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಲಾಗುವುದೆಂದು ಪೊಲೀ ಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next