Advertisement

“ಗಡ್ಡಪ್ಪ ಸರ್ಕಲ್‌’ನಲ್ಲಿ ಪ್ರಶಸ್ತಿ ವಿಜೇತರಿಗೆ ಸನ್ಮಾನ

09:58 AM Jan 17, 2020 | Lakshmi GovindaRaj |

“ನಂಗೆ ಕೇಶವ ಅವ್ರು ಬಟ್ಟೆ, ಬರೆ,ಊಟ ಎಲ್ಲವ್ನು ಕೊಟ್ಟು ಸಂತೋಷದಿಂದ ನೋಡ್ಕೊಂಡಿದ್ದಾರೆ. ಎಲ್ರೂವ ಸಿನ್ಮಾ ನೋಡ್ಬೇಕು…’ ಹೀಗೆ ತಮ್ಮದೇ ಶೈಲಿಯಲ್ಲಿ ಹೇಳಿದ್ದು “ತಿಥಿ’ ಖ್ಯಾತಿಯ ಗಡ್ಡಪ್ಪ. ಅವರು ಹೀಗೆ ಹೇಳಿಕೊಂಡಿದ್ದು, ತಮ್ಮ “ಗಡ್ಡಪ್ಪ ಸರ್ಕಲ್‌’ ಚಿತ್ರದ ಬಗ್ಗೆ. ಬಿ.ಆರ್‌.ಕೇಶವ ನಿರ್ದೇಶನದ ಈ ಚಿತ್ರ ಪೂರ್ಣಗೊಂಡಿದ್ದು, ಫೆ.7 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಂದು ಚಿತ್ರದ ಕುರಿತು ಮಾಹಿತಿ ಹಂಚಿಕೊಳ್ಳಲೆಂದೇ ಚಿತ್ರತಂಡ ಪತ್ರಕರ್ತರ ಮುಂದೆ ಬಂದಿತ್ತು.

Advertisement

ಗಡ್ಡಪ್ಪ ಅವರನ್ನು ವೇದಿಕೆಗೆ ಕರೆದ ನಿರ್ದೇಶಕರು, ಅವರ ಕೈಗೆ ಮೈಕ್‌ ಕೊಟ್ಟಾಗ, ತಮ್ಮದೇ ಧಾಟಿಯಲ್ಲಿ ಮಾತಿಗೆ ನಿಂತ ಗಡ್ಡಪ್ಪ, “ಇದಕ್ಕೆ “ಗಡ್ಡಪ್ಪ ಸರ್ಕಲ್‌’ ಅಂತ ಹೆಸರಿಟ್ಟಿದ್ದಾರೆ. ಕೇಶವ ಅವ್ರು ನಂಗೆ ಬಟ್ಟೆ, ಬರೆ, ಊಟ ಕೊಟ್ಟು ಸಿನ್ಮಾ ಮಾಡಿಸಿದ್ದಾರೆ. ಎಲ್ರೂ ಚಿತ್ರ ನೋಡಿ. ಚೆನ್ನಾಗಿದೆ’ ಅಂದರು. ನಿರ್ದೇಶಕ ಬಿ.ಆರ್‌.ಕೇಶವ ಅವರು ಗಡ್ಡಪ್ಪ ಅವರಿಗೆ ಇಲ್ಲಿ ವಿಶೇಷ ಪಾತ್ರ ಕೊಟ್ಟು ಹೈಲೈಟ್‌ ಮಾಡಿದ್ದಾರೆ.

ಆ ಕುರಿತು ಹೇಳುವ ಅವರು, “ಇದೊಂದು ಪ್ರಯೋಗ ಎನ್ನಬಹುದು. ಈವರೆಗೆ “ತಿಥಿ’ ಖ್ಯಾತಿಯ ಗಡ್ಡಪ್ಪ ಹಾಗು ಸೆಂಚುರಿ ಗೌಡ ಇಬ್ಬರಿಗೂ ಹಳ್ಳಿ ಪಾತ್ರಗಳನ್ನೇ ಕೊಡಲಾಗಿತ್ತು. ಈ ಚಿತ್ರದಲ್ಲಿ ಅವರು ಹೊಸದಾಗಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ, ಇದೊಂದು ಹಾಸ್ಯಮಯ ಸಿನಿಮಾ. ಸಿನಿಮಾದುದ್ದಕ್ಕೂ ತಮಾಷೆ ಜಾಸ್ತಿ. ಗಡ್ಡಪ್ಪ, ಸೆಂಚುರಿ ಗೌಡ ಅವರಿಗೆ ಸೂಟ್‌ ಹಾಕಿಸಲಾಗಿದೆ. ಇಬ್ಬರಿಗೂ ಅಂಡರ್‌ವರ್ಲ್ಡ್ ಡಾನ್‌ ಪಾತ್ರ ಕೊಡಲಾಗಿದೆ.

ಒಟ್ಟಾರೆ, ಮನರಂಜನೆ ಇಲ್ಲಿದೆ. ಚಿತ್ರ ನೋಡಿದವರು ಖುಷಿಯಿಂದ ಹೊರಬರುತ್ತಾರೆ. ಸುಮಾರು 100 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ’ ಅಂದರು ಕೇಶವ. ಅಂದು ಮತ್ತೂಂದು ವಿಶೇಷ ಕಾರ್ಯಕ್ರಮವೂ ಇತ್ತು. 2018 ರ ಸಾಲಿನ ರಾಜ್ಯ ಪ್ರಶಸ್ತಿ ಪಡೆದ ವಿಜೇತರನ್ನು ಆಹ್ವಾನಿಸಿ, ಚಿತ್ರತಂಡ ಸನ್ಮಾನಿಸಿತು. ಅತ್ಯುತ್ತಮ ನಟ, ನಟಿ ಪ್ರಶಸ್ತಿ ಪಡೆದ ರಾಘವೇಂದ್ರ ರಾಜಕುಮಾರ್‌, ಮೇಘನಾರಾಜ್‌, ಶ್ರೀನಿವಾಸಮೂರ್ತಿ,

ಬಸವರಾಜ್‌, ಪಿ.ಶೇಷಾದ್ರಿ, ದಯಾಳ್‌ ಪದ್ಮನಾಭ್‌, ಶಿವರುದ್ರಯ್ಯ, ವೀಣಾಸುಂದರ್‌, ಅವಿನಾಶ್‌,ರವಿಬಸ್ರೂರು, ಶರಣು ಹುಲ್ಲೂರು, ನಾಗೇಶ್‌ ಅವರನ್ನು ಅಭಿನಂದಿಸಲಾಯಿತು. ಈ ವೇಳೆ ಹಿರಿಯ ನಿರ್ದೇಶಕ ಸಾಯಿಪ್ರಕಾಶ್‌, ಭಾ.ಮ.ಹರೀಶ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ಕುಮಾರ್‌, ನಿರ್ಮಾಪಕ ತುಳಸೀರಾಮ್‌, ನಟ ಅಭಿ, ರಾಮ್‌, ಯೋಗಿ, ನಯನ್‌, ವಿಶ್ವಾಸ್‌, ರಾಜು ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next