Advertisement
ಈ ವೇಳೆ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಅಗ್ನಿ ಕುಂಡದಲ್ಲಿ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು. ಕೆಲವರು ಕಂದಮ್ಮಗಳನ್ನು ಎತ್ತಿಕೊಂಡು ಸುಡುವ ಅಗ್ನಿಕುಂಡದಲ್ಲಿ ಸಾಗುವ ಮೂಲಕ ನೋಡುಗರು ಹುಬ್ಬೇರಿಸುವಂತೆ ಮಾಡಿದರು. ಇಷ್ಟಾರ್ಥ ನೆರವೇರಿದ ಸಂಭ್ರಮದಲ್ಲಿದ್ದ ಭಕ್ತರು ಪುರವಂತರ ನೇತೃತ್ವದಲ್ಲಿ ವಿಧಿವಿಧಾನದ ಮೂಲಕ ಹಿತ್ತಾಳೆ, ಕಬ್ಬಿಣದ ಸಲಾಕೆಗಳು, ದಾರ ಹಾಗೂ ಸೂಜಿಯಂತಹ ಶಸ್ತ್ರಗಳನ್ನು ಬಾಯಿ, ನಾಲಿಗೆಗೆ ಚುಚ್ಚಿಸಿಕೊಂಡು, ಭಕ್ತಿ ಪರವಶರಾದರು. ಇನ್ನು, ಈ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲೆಂದೇ ಅವಳಿ ನಗರದ ವಿವಿಧೆಡೆಯಿಂದ ನೂರಾರು ಜನರು ಆಗಮಿಸಿದ್ದರು. ಈ ವೇಳೆ ಸಕಲ ಮಂಗಳವಾದ್ಯಗಳು ಪುರವಂತರ ಸಮ್ಮಾಳ, ಭಕ್ತ ಸಮೂಹದ ಜಯ ಘೋಷಗಳು ಮುಗಿಲು ಮುಟ್ಟಿತ್ತು. ಜಾತ್ರಮಹೋತ್ಸವದ ಅಂಗವಾಗಿ ದೇವರ ದರ್ಶನ ಪಡೆದ ಭಕ್ತರು, ದೇವರಿಗೆ ಹಣ್ಣು ಕಾಯಿ ಹಾಗೂ ನೈವೇದ್ಯ ಸಮರ್ಪಿಸಿದರು. Advertisement
ಹರಕೆ ತೀರಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು
02:01 PM Aug 29, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.