ನವದೆಹಲಿ: ಜೂ.26 ಮತ್ತು 27ರಂದು ಜರ್ಮನಿಯಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ.
ಅಲ್ಲಿ ಅವರು ಒಟ್ಟು 12 ಜಾಗತಿಕ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಎರಡು ದಿನಗಳಲ್ಲಿ 15 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಪ್ರಧಾನಿ ಕಚೇರಿ ಶನಿವಾರ ಮಾಹಿತಿ ಕೊಟ್ಟಿದೆ.
ಮುನಿಚ್ ನಗರದಲ್ಲಿ ಭಾರತೀಯ ಸಮುದಾಯದ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿಯವರು ಅದರಲ್ಲಿ ಭಾಗವಹಿಸಲಿದ್ದಾರೆ. ಕೊರೊನಾ ನಂತರದಲ್ಲಿ ಜರ್ಮನಿಯ ಹಿಂದೂ ಸಮುದಾಯದಿಂದ ನಡೆಯುತ್ತಿರುವ ಅತಿ ದೊಡ್ಡ ಕಾರ್ಯಕ್ರಮ ಅದಾಗಿರಲಿದೆ.
ಇದನ್ನೂ ಓದಿ:ಕಿಷ್ಕಿಂದಾ ಅಂಜನಾದ್ರಿಗೆ ಹೈಕೋಟ್ ಸಿಜೆ ರಿತುರಾಜ್ ಆವಸ್ತಿ ಕುಟುಂಬ ಸಮೇತ ಭೇಟಿ
ಜರ್ಮನಿಯ ನಂತರ ಪ್ರಧಾನಿ ಜೂ.28ರಂದು ಯು.ಎ.ಇ ತೆರಳಲಿದ್ದಾರೆ. ಅಲ್ಲಿ ಅವರು ಇತ್ತೀಚೆಗೆ ನಿಧನರಾದ ಗಲ್ಫ್ ರಾಷ್ಟ್ರದ ಮಾಹಿ ಅಧ್ಯಕ್ಷ ಶೇಖ್ ಖಾಲಿಫ್ ಬಿಬ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಸಂತಾಪ ಸೂಚಿಸಲಿದ್ದಾರೆ ಎಂದು ತಿಳಿಸಲಾಗಿದೆ.