Advertisement

Mahatma Gandhi: ರಾಜ್ ಘಾಟ್ ಗೆ ತೆರಳಿ ಪುಷ್ಪ ನಮನ ಸಲ್ಲಿಸಿದ ವಿಶ್ವ ನಾಯಕರು

06:19 PM Sep 10, 2023 | Team Udayavani |

ನವದೆಹಲಿ: ಜಿ20 ಶೃಂಗಸಭೆಯ ಎರಡನೇ ದಿನವಾದ ಇಂದು ವಿಶ್ವ ನಾಯಕರು ನವದೆಹಲಿಯ ರಾಜ್ ಘಾಟ್ ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದ್ದಾರೆ.

Advertisement

ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ, ಸಿಂಗಾಪುರದ ಪ್ರಧಾನಿ ಲೀ ಸಿಯೆನ್ ಲೂಂಗ್ ಸೇರಿದಂತೆ ಜಿ 20 ನಾಯಕರು ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿದ್ದಾರೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಜಿ20 ನಾಯಕರನ್ನು ಬರಮಾಡಿಕೊಂಡರು.

ಈ ಬಗ್ಗೆ ಪ್ರಧಾನಿ ಮೋದಿ ಅವರು ಟ್ವಿಟರ್ (ಎಕ್ಸ್‌)ನಲ್ಲಿ, ರಾಜ್‌ಘಾಟ್‌ನಲ್ಲಿ ಜಿ20 ಕುಟುಂಬವು ಶಾಂತಿ, ಸೇವೆ, ಸಹಾನುಭೂತಿ ಮತ್ತು ಅಹಿಂಸೆಯ ದಾರಿದೀಪವಾದ ಗೌರವ ಸಲ್ಲಿಸಿದೆ. ಗಾಂಧೀಜಿಯವರ ಕಾಲಾತೀತ ಆದರ್ಶಗಳು, ಸಾಮರಸ್ಯ, ಅಂತರ್ಗತ ಮತ್ತು ಸಮೃದ್ಧ ಜಾಗತಿಕ ಭವಿಷ್ಯಕ್ಕಾಗಿ ನಮ್ಮ ಸಾಮೂಹಿಕ ದೃಷ್ಟಿಗೆ ಮಾರ್ಗದರ್ಶನ ನೀಡುತ್ತವೆ ಎಂದು ಬರೆದುಕೊಂಡಿದ್ದಾರೆ.


ಮಹಾತ್ಮ ಗಾಂಧಿಯವರ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಬಳಿಕ ನಾಯಕರು ಲೀಡರ್ಸ್ ಲಾಂಜ್‌ನಲ್ಲಿ ಶಾಂತಿ ಗೋಡೆಗೆ ಸಹಿ ಮಾಡುತ್ತಿರುವ ವೀಡಿಯೊವನ್ನು ಮೋದಿ ಟ್ವಿಟರ್ (ಎಕ್ಸ್‌)ನಲ್ಲಿ ಹಂಚಿಕೊಂಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next