Advertisement

ಜಿ. ಸಥಿಯನ್‌-ಹರ್ಮೀತ್‌ ದೇಸಾಯಿ ಜೋಡಿಗೆ ಟಿಟಿ ಪ್ರಶಸ್ತಿ

10:27 PM Oct 30, 2021 | Team Udayavani |

ಹೊಸದಿಲ್ಲಿ: ಭಾರತದ ಜಿ. ಸಥಿಯನ್‌-ಹರ್ಮೀತ್‌ ದೇಸಾಯಿ ಟ್ಯುನೀಶಿಯಾದಲ್ಲಿ ನಡೆದ ಡಬ್ಲ್ಯುಟಿಟಿ ಕಂಟೆಂಡರ್‌ ಟೇಬಲ್‌ ಟೆನಿಸ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Advertisement

ಫೈನಲ್‌ನಲ್ಲಿ ಇವರು ಫ್ರೆಂಚ್‌ ಆಟಗಾರರಾದ ಇಮಾನ್ಯುವಲ್‌ ಲೆಬೆಸನ್‌-ಅಲೆಕ್ಸಾಂಡರ್‌ ಕ್ಯಾಸಿನ್‌ ವಿರುದ್ಧ 11-9, 4-11, 11-9, 11-6 ಅಂತರದ ಜಯ ಸಾಧಿಸಿದರು.

ಗೆಲುವಿನ ಆರಂಭ ಪಡೆದ ಭಾರತೀಯ ಜೋಡಿ, ದ್ವಿತೀಯ ಗೇಮ್‌ನಲ್ಲಷ್ಟೇ ಮುಗ್ಗರಿಸಿತು. ಅಷ್ಟೇ ಬೇಗ ಚೇತರಿಸಿಕೊಂಡು ತಿರುಗೇಟು ನೀಡಿತು.

ಸಥಿಯನ್‌-ಹರ್ಮೀತ್‌ ಜೋಡಿಯ ಗೆಲುವಿಗೆ “ವರ್ಲ್ಡ್ ಟೇಬಲ್‌ ಟೆನಿಸ್‌’ ಮತ್ತು ಇಂಟರ್‌ನ್ಯಾಶನಲ್‌ ಟೇಬಲ್‌ ಟೆನಿಸ್‌ ಅಸೋಸಿಯೇಶನ್‌ ಅಭಿನಂದನೆ ಸಲ್ಲಿಸಿದೆ.

ಇದನ್ನೂ ಓದಿ:ಆಸ್ಟ್ರೇಲಿಯ ಕ್ರಿಕೆಟ್‌ ದಿಗ್ಗಜ ಅಲನ್‌ ಡೇವಿಡ್ಸನ್‌ ನಿಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next