Advertisement
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ಭಾರತದ ಶಾಶ್ವತ ರಾಯಭಾರಿಯ ಪ್ರತಿನಿಧಿ ರುಚಿರಾ ಕಾಂಭೋಜ್ “ಪಾಕಿಸ್ತಾನದ ಉಗ್ರನನ್ನು ನಿಷೇಧಿತ ಪಟ್ಟಿಗೆ ಸೇರಿಸಲು ಚೀನ ತಡೆಯೊಡ್ಡಿದೆ. ಇದರಿಂದಾಗಿ ವಿಶ್ವಸಂಸ್ಥೆಯ 1267- ಅಲ್ ಖೈದಾ ನಿಷೇಧ ಸಮಿತಿಯ ಮೇಲಿನ ವಿಶ್ವಾಸಾರ್ಹತೆಯೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಟೀಕಿಸಿದ್ದಾರೆ.
ಪ್ರಬಲ ಸಾಕ್ಷ್ಯಗಳನ್ನು ನೀಡಿದ್ದರೂ ಪಾಕಿಸ್ತಾನದ ಉಗ್ರನ ಸೇರ್ಪಡೆಗೆ ತಡೆಯೊಡ್ಡಿದ್ದ ಕ್ರಮ ಸಮರ್ಥನೀಯ ಅಲ್ಲ ಎಂದು ಅವರು ವಾದಿಸಿದ್ದಾರೆ. ಇದರಿಂದಾಗಿಯೇ ಅಂತಾರಾಷ್ಟ್ರೀಯ ಭದ್ರತೆ ಮತ್ತು ಶಾಂತಿಗೆ ಧಕ್ಕೆಯಾಗಿ ಪರಿಣಮಿಸಲಿದೆ ಎಂದು ಅವರು ಹೇಳಿದ್ದಾರೆ.