Advertisement

YOUTHS: ಕಾಪಾಡಬೇಕಿದೆ ಯುವಭಾರತದ ಭವಿಷ್ಯ

03:27 PM Dec 04, 2023 | Team Udayavani |

ಯುವ ಸಮುದಾಯವನ್ನು ದೇಶದ ಭವಿಷ್ಯ ಎನ್ನಲಾಗುತ್ತದೆ. ಅಂಥ ಯುವಕರೇ ಧೂಮಪಾನ, ಮಧ್ಯಪಾನ, ಮಾದಕ ದ್ರವ್ಯ ಸೇವನೆ ಸೇರಿದಂತೆ ನಾನಾ ರೀತಿಯಲ್ಲಿ ಹಾದಿ ತಪ್ಪುತ್ತಿರುವುದು ತೀರಾ ಭಯ ಪಡುವ ರೀತಿಯಲ್ಲಿ ಭಾರತವನ್ನು ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ. ಜೀವನದಲ್ಲಿ ಹಲವಾರು ಸಮಸ್ಯೆಗಳಿಂದಲೋ ಅಥವಾ ಸಹವಾಸದಿಂದಲೋ ಈ ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಸಮುದಾಯವನ್ನು ಪರಿವರ್ತಿಸುವ ಕಾರ್ಯ ತೀರಾ ಅಗತ್ಯವಾಗಿದೆ.

Advertisement

ಆಘಾತಕಾರಿ ಸಂಗತಿಯೆಂದರೆ ಈ ವರ್ಷದ ಮೊದಲ 74 ದಿನಗಳಲ್ಲಿ ಕರ್ನಾಟಕವು ದಿನಕ್ಕೆ ಸರಾಸರಿ 16 ಮಾದಕ ದ್ರವ್ಯ ಪ್ರಕರಣಗಳನ್ನು ಕಂಡಿದೆ. ಮಾದಕ ದ್ರವ್ಯ ಸೇವನೆ, ಸ್ವಾಧೀನ ಮತ್ತು ವ್ಯವಹಾರದಿಂದ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಸಂತೋಷ ಮಾರ್‌ ಬಿ. ವರದಿ ಮಾಡಿದ್ದಾರೆ. ರಾಜ್ಯ ಗೃಹ ಇಲಾಖೆಯ ಅಂಕಿಅಂಶಗಳಿಂದ 2017ರ ಜನವರಿ 1ರಿಂದ 2022ರ ಮಾರ್ಚ್‌ 15ರ ನಡುವೆ ರಾಜ್ಯವು 14,832 ಪ್ರಕರಣಗಳನ್ನು ಕಂಡಿದೆ ಎಂದು ತಿಳಿದು ಬರುತ್ತದೆ.

ಯಾಕೆ ಯುವ ಸಮುದಾಯ ಡ್ರಗ್ಸ್‌ಗಳ ಮೊರೆ ಹೋಗುತ್ತಿದೆ ಎಂಬುದನ್ನು ನೋಡುವುದಾದರೆ, ಈಗ ಹೆಚ್ಚಾಗಿ ತಂದೆತಾಯಿಗಳಿಬ್ಬರೂ ಕೆಲಸಕ್ಕೆ ಹೋಗುವುದರಿಂದ ಚಿಕ್ಕ ವಯಸ್ಸಿನಲ್ಲಿ ಒಂದು ಮಗುವಿಗೆ ಅವಶ್ಯವಾಗಿ ಸಿಗಬೇಕಾದ ಗಮನ ಸಿಗುತ್ತಿಲ್ಲ. ಆದ್ದರಿಂದ ಸಹಜವಾಗಿಯೇ ಅವರು ಅನೇಕ ಅಡ್ಡದಾರಿಗಳನ್ನು ಹಿಡಿಯುತ್ತಿದ್ದಾರೆ. ದೈಹಿಕ ಚಟುವಟಿಕೆಯೂ ಬೇಕಿರುವಷ್ಟಿಲ್ಲ; ದೇಹದ ಫಿಟ್ನೆಸ್‌ ಅನ್ನು ಆನಂದಿಸದಿದ್ದಾಗ, ಆತ ಆನಂದಿಸುವುದು ನಶೆ ಏರಿಸಿಕೊಳ್ಳುವುದನ್ನು ಮಾತ್ರ. ನಿಮ್ಮ ಜೀವದ ಉತ್ಸಾಹ, ಲವಲವಿಕೆಯನ್ನು ನೀವು ಆನಂದಿಸದಿದ್ದರೆ ಮತ್ತು ನಶೆ ಏರಿಸಿ ಕೊಳ್ಳುವುದೊಂದೇ ದಾರಿಯಾ ಗುತ್ತದೆ. ಮತ್ತೀಗ ಡ್ರಗ್ಸ್‌ ಗಳು ಕೇವಲ ನಶೆಯನ್ನು ಏರಿಸು ವುದಿಲ್ಲ, ಅವು ಕೆಲ ಗಂಟೆಗಳ ಕಾಲ ಹುರುಪನ್ನೂ ಕೊಡುತ್ತದೆ. ಹಾಗಾಗಿ ದೊಡ್ಡ ಮಟ್ಟಿನಲ್ಲಿ ಈ ಪೀಳಿಗೆಯು ಆ ದಿಕ್ಕಿನಲ್ಲಿ ಹೋಗುತ್ತಿದೆ.

ಹೇಗೆ ಇದನ್ನು ನಿಯಂತ್ರಿಸಬಹುದು ಅನ್ನೋದಾದರೆ. ತಂದೆತಾಯಿಗಳು ಶ್ರೀಮಂತರಾಗಿದ್ದರೂ ಮಕ್ಕಳೊಂದು ವಯಸ್ಸಿಗೆ ಬರುವ ತನಕ ಅವರಿಗೆ ಸಂಪತ್ತಿನ ಅರಿವಿರಬಾರದು. ಈ ಸಂಸ್ಕೃತಿಯಲ್ಲಿ, ರಾಜರು ಕೂಡ ತಮ್ಮ ಮಕ್ಕಳನ್ನು ಗುರುಕುಲಕ್ಕೆ ಕಳಿಸುತ್ತಿದ್ದರು – ಅಲ್ಲಿ ಅವರು ಬೇರೆ ಮಕ್ಕಳ ಜತೆ ಓದುತ್ತಿದ್ದರು. ಎಲ್ಲರೂ ಕನಿಷ್ಠ ಅಗತ್ಯಗಳೊಂದಿಗೆ ಬದುಕುತ್ತಿದ್ದರು. ಸಂಪತ್ತು ಜೀವನದೊಳಗೆ ಬರುವುದಕ್ಕಿಂತ ಮೊದಲೇ, ಶಿಸ್ತು, ತೊಡಗಿಸಿಕೊಳ್ಳುವಿಕೆ ಮತ್ತು ಜೀವನದಲ್ಲಿ ಪಾಲ್ಗೊಳ್ಳುವಿಕೆಯ ಪ್ರಜ್ಞೆ ಬರಬೇಕು. ಇಲ್ಲದಿದ್ದರೆ ಸಂಪತ್ತು ನೀವು ತಲೆಯ ಮೇಲೆ ಹೊತ್ತುಕೊಳ್ಳುವ ಹೊರೆಯಾಗುತ್ತದೆ. ಈ ಪೀಳಿಗೆಗೆ ಆಗುತ್ತಿರುವುದು ಇದೇ.

ತಂದೆ ತಾಯಿಯ ಪಾಲನೆ, ಕಠಿನ ಕಾನೂನುಗಳ ಅನುಷ್ಟಾನದಿಂದ ಈ ಜಾಲ ಭೇದಿಸುವಲ್ಲಿ ಮತ್ತು ನಿರ್ಮೂಲನೆ ಮಾಡುವಲ್ಲಿ ಪೊಲೀಸ್‌ ಇಲಾಖೆ ಇನ್ನಷ್ಟು ಹೆಚ್ಚಿನ ಗಮನಗಳ ಹರಿಸುವ ಮೂಲಕ ಸುಸ್ಥಿರ ಸಮಾಜ ಮತ್ತು ಯುವಕರ ಭವಿಷ್ಯಕ್ಕೆ ಮಾರಕವಾಗಿರುವ ಈ ಹುಳುಕನ್ನು ನಾಶಮಾಡಬಹುದು.

Advertisement

-ಹಣಮಂತ ಎಂ.ಕೆ.

ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next