Advertisement
ನೀವು, ಈ ಹಿಂದೆ ಎಲ್ಲಿ ಕೆಲಸ ಮಾಡುತ್ತಿದ್ದಿರಿ? ನಿಮಗೆ ಎಷ್ಟು ವರ್ಷಗಳ ಕೆಲಸದ ಅನುಭವವಿದೆ?ನಿಮ್ಮ ಕೆಲಸದ ಅನುಭವದ ಬಗ್ಗೆ ಯಾರದಾದರೂ ರೆಫೆರೆನ್ಸ್ ಇದೆಯೇ?
ನೀವು ಪದವಿಯನ್ನು ಮುಗಿಸಿ ಕೆಲವೇ ತಿಂಗಳುಗಳಾಗಿವೆ. ನಮ್ಮ ಕಂಪನಿ ಕನಿಷ್ಟ 2 ವರ್ಷ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಮುಖ್ಯತೆಯನ್ನು ನೀಡುತ್ತದೆ.
Related Articles
Advertisement
“ಇಂಟರ್ನ್ಶಿಪ್’ನಲ್ಲಿ ಪಡೆದ ಅಂಕಗಳನ್ನು ಮತ್ತು ಅನುಭವವನ್ನು ವಿದ್ಯಾರ್ಥಿಗಳ ಕಡೆಯ ಅಂಕಪಟ್ಟಿಯಲ್ಲಿ ಜೋಡಿಸಲಾಗುತ್ತದೆ. ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮತ್ತು ಕಂಪನಿಗಳಲ್ಲಿ “ಇಂಟರ್ನ್ಶಿಪ್’ ಅವಧಿಯಲ್ಲಿ ವೇತನವನ್ನು ಕೂಡ ನೀಡಲಾಗುತ್ತದೆ. ಇದರ ಜೊತೆಗೆ ಕಂಪನಿಯ ಇನ್ನಿತರ ಸವಲತ್ತುಗಳಾದ ಗ್ರಂಥಾಲಯ, ಇಂಟರ್‌ನೆಟ್ ಇತ್ಯಾದಿಗಳನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬಹುದು.
“ಇಂಟರ್ನ್ಶಿಪ್’ನ ಇತರೆ ಲಾಭಗಳು:1. ಕೌಶಲಗಳನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ:
ಪುಸ್ತಕದಲ್ಲಿನ ಜಾnನಕ್ಕೂ, ಪ್ರಾಯೋಗಿಕ ಜಾnನಕ್ಕೂ ಬಹಳ ಅಂತರವಿದೆ. ವಿಷಯಗಳನ್ನು ಆಳವಾಗಿ ತಿಳಿದುಕೊಳ್ಳಲು ಪ್ರಾಯೋಗಿಕ ಜಾnನ ಬಹಳ ಅವಶ್ಯಕ. ವಿದ್ಯಾರ್ಥಿಗಳು ಪುಸ್ತಕದ ಮೂಲಕ ತಾವು ಕಲಿತ ವಿಷಯಗಳನ್ನು ಪ್ರಾಯೋಗಿಕವಾಗಿ ‘ಇಂಟರ್ನ್ಶಿಪ್’ ಸಮಯದಲ್ಲಿ ತಿಳಿಯಬಹುದು. ಇದರಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚುವುದರ ಜೊತೆಜೊತೆಗೆ ಕೌಶಲಗಳನ್ನು ಕೂಡ ಹೆಚ್ಚಿಸಿಕೊಳ್ಳಬಹುದು. 2. ಉದ್ಯೋಗ ಮಾರುಕಟ್ಟೆಯಲ್ಲಿ ಸಂಪರ್ಕವನ್ನು ಸಾಧಿಸಬಹುದು:
ಪ್ರತಿಷ್ಠಿತ ಕಂಪನಿಗಳಲ್ಲಿ ಹಾಗು ಸಂಸ್ಥೆಗಳಲ್ಲಿ “ಇಂಟರ್ನ್ಶಿಪ್’ ಮಾಡುವುದರಿಂದ ನೀವು ಆ ಕ್ಷೇತ್ರದಲ್ಲಿನ ಯಶಸ್ವಿ ವ್ಯಕ್ತಿಗಳ ಜೊತೆಗೆ ಮತ್ತು ಪರಿಣಿತರ ಜೊತೆಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದು. ಜೊತೆಗೆ, ಅಂತಹ ವ್ಯಕ್ತಿಗಳೊಂದಿಗಿನ ಒಡನಾಟದಿಂದ ನಿಮ್ಮ ಅನುಭವವನ್ನು ಇನ್ನೂ ಹೆಚ್ಚಿಸಿಕೊಳ್ಳಬಹುದು. ಕೆಲವೊಮ್ಮೆ ಕೆಲಸಕ್ಕೆ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಇಂತಹ ವ್ಯಕ್ತಿಗಳ ರೆಫೆರೆನ್ಸ್ ಬಹಳ ಅವಶ್ಯಕವಾಗಿರುತ್ತದೆ. 3. ನಿಮ್ಮ ಬಗ್ಗೆ ನೀವು ಹೆಚ್ಚು ತಿಳಿದುಕೊಳ್ಳಬಹುದು:
ಯಾವುದೇ ವ್ಯಕ್ತಿಯೂ ಪರಿಪೂರ್ಣನಾಗಿರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲ ಒಂದು ನ್ಯೂನತೆಗಳು ಇದ್ದೇ ಇರುತ್ತವೆ. ವಿದ್ಯಾರ್ಥಿಗಳು “ಇಂಟರ್ನ್ಶಿಪ್’ ಸಮಯದಲ್ಲಿ ತಮ್ಮನ್ನು ತಾವು ಹೆಚ್ಚು ತಿಳಿದುಕೊಳ್ಳುವ ಅವಕಾಶವನ್ನು ಪಡೆಯುತ್ತಾರೆ. ವ್ಯಕ್ತಿತ್ವ ವಿಕಸನಕ್ಕೆ “ಇಂಟರ್ನ್ಶಿಪ್’ ಸೂಕ್ತ ವೇದಿಕೆಯನ್ನು ಒದಗಿಸುತ್ತದೆ. 4. ನಿಮ್ಮ “ರೆಸ್ಯೂಮೆ’ಯನ್ನು (Rಛಿsuಞಛಿ) ಬಲಪಡಿಸಿಕೊಳ್ಳಿ:
“ಇಂಟರ್ನ್ಶಿಪ್’ ಸಮಯದಲ್ಲಿ ಪಡೆದ ಅನುಭವ, ಉದ್ಯೋಗವನ್ನು ಪಡೆಯುವ ಸಂದರ್ಭದಲ್ಲಿ ಸಹಾಯಕ್ಕೆ ಬರುತ್ತದೆ. ಬಹಳಷ್ಟು ಕಂಪನಿಗಳು ನಿಮ್ಮ “ರೆಸ್ಯೂಮೆ’ಯಲ್ಲಿ ಒದಗಿಸಿದ ‘ಇಂಟರ್ನ್ಶಿಪ್’ ಬಗೆಗಿನ ಮಾಹಿತಿಯ ಆಧಾರದ ಮೇಲೆಯೆ ಕೆಲಸಕ್ಕೆ ಅಥವಾ ಮುಂದಿನ ಹಂತದ ಆಯ್ಕೆಗೆ ಅಭ್ಯರ್ಥಿಗಳನ್ನು ಕರೆಯುತ್ತವೆ. ಒಂದು ವೇಳೆ ನೀವು ಉನ್ನತ ಶಿಕ್ಷಣಕ್ಕಾಗಿ ಯೋಚಿಸುತ್ತಿದ್ದರೆ ನಿಮ್ಮ “ಇಂಟರ್ನ್ಶಿಪ್’ ಅನುಭವವನ್ನು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳು ಖಂಡಿತ ಪರಿಗಣಿಸುತ್ತವೆ. ಎಷ್ಟೋ ಬಾರಿ ನೀವು “ಇಂಟರ್ನ್ಶಿಪ್’ ಮಾಡುತ್ತಿರುವ ಕಂಪನಿಗಳೇ ನಿಮ್ಮ ಕಾರ್ಯವನ್ನು ಮೆಚ್ಚಿ ಅದೇ ಕಂಪನಿಯಲ್ಲಿ ಉದ್ಯೋಗವನ್ನು ಒದಗಿಸಿದರೂ ಒದಗಿಸಬಹುದು. ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಕೆಲಸವನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ ಯುವಕರು ಹೆಚ್ಚಿನ ಪರಿಶ್ರಮವನ್ನು ಪಡಬೇಕು. “ಇಂಟರ್ನ್ಶಿಪ್’ಗಳು, ನೌಕರಿಯ ಹುಡುಕಾಟದಲ್ಲಿರುವ ಯುವಕರಿಗೆ ಒಂದು ರೀತಿಯಲ್ಲಿ ದಾರಿದೀಪವಾಗಿವೆ. – ಪ್ರಶಾಂತ್ ಎಸ್. ಚಿನ್ನಪ್ಪನವರ್, ಚಿತ್ರದುರ್ಗ