ಮಂಡ್ಯ: ರಾಜ್ಯದಲ್ಲಿ ಕೊರೊನಾ ರಣಕೇಕೆ ತಡೆಯುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೊಳಿ ಸಿದ್ದ 36 ಗಂಟೆಗಳ ಕರ್ಫ್ಯೂಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೊಲೀಸ್ ಬಿಗಿ ಬಂದೋಬಸ್ತ್ ಇಲ್ಲದಿದ್ದರೂ ಜನರು ರಸ್ತೆ ಗಿಳಿಯದೇ ಮನೆಯಲ್ಲೇ ಉಳಿದು ಕರ್ಫ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಭಾನುವಾರ ಸರ್ಕಾರ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿತ್ತು. ಸಾರಿಗೆ, ಆಟೋ, ಟ್ಯಾಕ್ಸಿ, ರೈಲ್ವೆ ಸೇವೆ ಸೇರಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿತ್ತು.
ಷರತ್ತು ಬದ್ಧ ಅನುಮತಿ: ಭಾನುವಾರ ದಂದು ಮೊದಲೇ ನಿಗದಿಯಾಗಿದ್ದ ವಿವಾಹ ಸಮಾರಂಭಗಳಿಗೆ ಷರತ್ತಿನ ಮೇಲೆ ಅನುಮತಿ ನೀಡಲಾಗಿತ್ತು. ಮಾಂಸದ ಅಂಗಡಿಗಳ ನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದ್ದರೂ ಹೆಚ್ಚಿನ ಅಂಗಡಿಗಳು ಬಾಗಿಲು ತೆರೆದಿರಲಿಲ್ಲ. ಮಾಂಸದಂಗಡಿಗಳಲ್ಲಿಯೂ ನಿರೀಕ್ಷಿತ ಪ್ರಮಾ ಣದ ಮಾರಾಟವಾಗಲಿಲ್ಲ.
ಅಗತ್ಯ ವಸ್ತುಗಳಿಗೆ ಪರದಾಟ: ಹೊಟೇಲ್‌ಗಳು ಪಾರ್ಸೆಲ್ ಸೇವೆಗೆ ಮಾತ್ರ ಸೀಮಿತಗೊಂಡಿ ದ್ದವು. ಆಸ್ಪತ್ರೆಗಳು, ಪೆಟ್ರೋಲ್ ಬಂಕ್‌ಗಳು, ಔಷಧ ಅಂಗಡಿಗಳು, ಹೂವು, ಹಾಲು, ತರ ಕಾರಿ, ದಿನಸಿ, ಆರೋಗ್ಯ ತುರ್ತು ಸೇವೆ, ಆ್ಯಂಬುಲೆನ್ಸ್‌ಗಳನ್ನು ಜನರ ಸೇವೆಗೆ ಮುಕ್ತ ಗೊಳಿಸಲಾಗಿತ್ತು. ಆದರೂ ಪೊಲೀಸರು ನಗರ ದಲ್ಲಿ ದಿನಸಿ, ತರಕಾರಿ ಸೇರಿದಂತೆ ಕೆಲ ಅಗತ್ಯ ಸೇವೆಗಳ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದರಿಂದ ಸಾರ್ವಜನಿಕರು ಅಗತ್ಯ ವಸ್ತುಗಳಿಗೆ ಪರದಾಡುವಂತಾಯಿತು.
ರಸ್ತೆಗಳಲ್ಲಿ ವಾಹನ ಸಂಚಾರವಿಲ್ಲ: ಕರ್ಫ್ಯೂ ಹಿನ್ನೆಲೆಯಲ್ಲಿ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಬೆಂಗಳೂರು-ಮೈಸೂರು ಹೆದ್ದಾರಿ, ಜಯಚಾಮರಾಜೇಂದ್ರ ಒಡೆಯರ್ ವೃತ್ತ, ಮಹಾವೀರ ವೃತ್ತ, ಹೊಸಹಳ್ಳಿ ವೃತ್ತ, ಜಯರಾಂ ವೃತ್ತ, ಸಕ್ಕರೆ ಕಂಪನಿ ವೃತ್ತ, ಹೊಳಲು ವೃತ್ತಗಳೆಲ್ಲವೂ ಜನರು ಹಾಗೂ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ನಗರದ ಎಲ್ಲಾ ರಸ್ತೆಗಳಲ್ಲಿನ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು.
ಹೋಟೆಲ್‌ಗಳು ಖಾಲಿ: ನಗರದಲ್ಲಿ ಕೆಲವೇ ಹೊಟೇಲ್‌ಗಳು ಬಾಗಿಲು ತೆರೆದಿದ್ದವು. ಅವೂ ಜನರಿಲ್ಲದೆ ಖಾಲಿ ಹೊಡೆಯುತ್ತಿದ್ದವು. ಅಲ್ಲಿಯೂ ಪಾರ್ಸಲ್‌ಗೆ ಅವಕಾಶ ಕಲ್ಪಿಸಲಾ ಗಿತ್ತು. ವೈನ್‌ಶಾಪ್, ಬಾರ್-ಆ್ಯಂಡ್ ರೆಸ್ಟೋರೆಂಟ್‌ಗಳು ಸ್ಥಗಿತಗೊಳಿಸಿದ್ದವು.
2ನೇ ಬಾರಿ ಬಂದ್: ಕೊರೊನಾ ಭೀತಿ ಎದುರಾ ದ ನಂತರದಲ್ಲಿ ಮಾ.22ರಂದು ಮೊದಲ ಬಾರಿಗೆ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಆ ನಂತರದಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಲಾಕ್‌ಡೌನ್ ಸಡಿಲಿಕೆ ಬಳಿಕ ಮತ್ತೆ ಎರಡನೇ ಬಾರಿ ಭಾನುವಾರ ಕರ್ಫ್ಯೂ ಜಾರಿಗೊಳಿಸಿದ್ದು, ಇದಕ್ಕೂ ಜನತಾ ಕರ್ಫ್ಯೂ ಮಾದರಿಯಲ್ಲೇ ಜನಬೆಂಬಲ ದೊರೆತಿರುವುದು ವಿಶೇಷವಾಗಿದೆ.
ಹೆಚ್ಚಿನ ಭದ್ರತೆ ಇಲ್ಲ: ಗುತ್ತಲು, ವಿವೇಕಾನಂದ ರಸ್ತೆ, ನೂರಡಿ ರಸ್ತೆ, ವಿ.ವಿ.ರಸ್ತೆ, ಬನ್ನೂರು ರಸ್ತೆ, ಕೆ.ಆರ್.ರಸ್ತೆ, ಹೊಸಹಳ್ಳಿ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬೆರಳೆಣಿಕೆಯಷ್ಟು ಪೊಲೀಸ ರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಬೆಳಗ್ಗೆ 6ರಿಂದ 8 ಗಂಟೆಯವರೆಗೆ ಅಗತ್ಯ ವಸ್ತುಗಳಿ ಗಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಿದರಾದರೂ, ಆನಂತರದಲ್ಲಿ ಮನೆಯಿಂದ ಹೊರಬರಲಿಲ್ಲ. ಸಂಜೆ ನಂತರವೂ ಜನರು ರಸ್ತೆ ಗಿಳಿಯುವ ಪ್ರಯತ್ನ ಮಾಡಲೇ ಇಲ್ಲ.