Advertisement

ಅ. 21ರಿಂದ ಪೂರ್ಣ ಶಾಲಾರಂಭ; ದಸರಾ ರಜೆ ಬಳಿಕ 1-10ನೇ ತರಗತಿ, ಬಿಸಿಯೂಟ

12:34 AM Oct 12, 2021 | Team Udayavani |

ಬೆಂಗಳೂರು: ದಸರಾ ರಜೆ ಮುಗಿದ ತತ್‌ಕ್ಷಣ 1ರಿಂದ 10ನೇ ತರಗತಿಯ ವಿದ್ಯಾರ್ಥಿ ಗಳು ಪೂರ್ಣಪ್ರಮಾಣದ ತರಗತಿಗಳಿಗೆ ಹಾಜ ರಾಗಲು ಸಿದ್ಧರಾಗಬೇಕು.

Advertisement

ಅ. 21ರಿಂದಲೇ ರಾಜ್ಯದಲ್ಲಿ 1-10 ತರಗತಿಗಳಿಗೆ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ಆರಂಭಿಸಲಿ ದ್ದೇವೆ ಮತ್ತು ಬಿಸಿಯೂಟ ನೀಡಲಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ.

ಶುಲ್ಕ ಸಮಸ್ಯೆಗೆ ಪರಿಹಾರ
ಖಾಸಗಿ ಶಾಲೆಯ ಶುಲ್ಕ ಸಮಸ್ಯೆಗೆ ನ್ಯಾಯಾಲಯದ ಆದೇಶದ ಪ್ರತಿ ಲಭಿಸಿದ ಬಳಿಕ ಪರಿಶೀಲಿಸಿ, ಸರಕಾರದಿಂದ ಸೂಕ್ತ ನಿರ್ದೇಶನ ನೀಡಲಾಗುತ್ತದೆ. ಜತೆಗೆ ಹೆತ್ತವರು ಮತ್ತು ಖಾಸಗಿ ಶಾಲಾಡಳಿತ ಮಂಡಳಿಗಳ ಸಭೆ ನಡೆಸಲಿದ್ದೇವೆ. ಆಂಧ್ರ ಪ್ರದೇಶ, ತೆಲಂಗಾಣ ಮಾದರಿಯಲ್ಲಿ ಶುಲ್ಕ ನಿಯಂತ್ರಣ ಸಮಿತಿ ರಚನೆ ಮಾಡಬಹುದೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದರು.

ಬ್ರಿಡ್ಜ್ ಕೋರ್ಸ್‌
ಈಗ ಪ್ರಥಮ ಪಿಯುಸಿಯಲ್ಲಿರುವ ವಿದ್ಯಾರ್ಥಿಗಳಿಗೆ ಕಳೆದ ಬಾರಿ ಎಸೆಸೆಲ್ಸಿಯಲ್ಲಿ ಶೇ. 30ರಷ್ಟು ಪಠ್ಯಕಡಿತ ಮಾಡಲಾಗಿತ್ತು. ಈ ಕೊರತೆಯನ್ನು ಸರಿಪಡಿಸಲು ಪೂರ್ಣ ಪ್ರಮಾಣದ ಪಠ್ಯ ಬೋಧನೆ ಮತ್ತು ಕಲಿಕೆಗೆ ತಕ್ಕಂತೆ ಬ್ರಿಡ್ಜ್
ಕೋರ್ಸ್‌ ರೂಪಿಸಲಿದ್ದೇವೆ.

ಈ ವರ್ಷ ಪಠ್ಯ ಕಡಿತ ಮಾಡದೆ ನಿರ್ದಿಷ್ಟ ಅವಧಿಯಲ್ಲಿ ಬೋಧನೆ ಮುಗಿಸಲಿದ್ದೇವೆ. ಶನಿವಾರ ಮತ್ತು ರವಿವಾರ ವಿಶೇಷ ತರಗತಿ ನಡೆಸುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.

Advertisement

ಇದನ್ನೂ ಓದಿ:ಆರ್‌ಸಿಬಿ ಮೇಲೆ ರೈಡ್‌ ಮಾಡಿದ ಕೆಕೆಆರ್‌

ಪಠ್ಯಪುಸ್ತಕ ಪರಿಷ್ಕರಣೆ
ಶಾಲಾ ಪಠ್ಯದಲ್ಲಿರುವ ಅನೇಕ ಅಂಶಗಳಿಗೆ ಸಂಬಂಧಿಸಿ ದೂರು ಬಂದಿರುವ ಹಿನ್ನೆಲೆಯಲ್ಲಿ ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಹೊಸ ಸಮಿತಿ ನಿರ್ದಿಷ್ಟ ಕಾಲಮಿತಿಯಲ್ಲಿ ವರದಿ ಸಲ್ಲಿಸಲಿದೆ. ಪಠ್ಯ ಪರಿಷ್ಕರಣೆಗೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಿದ್ದೇವೆ ಮತ್ತು ಅಗತ್ಯವಿರುವ ಅಂಶಗಳನ್ನು ಸೇರಿಸಲಿದ್ದೇವೆ ಎಂದು ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next