Advertisement

Fukushima: ತ್ಯಾಜ್ಯದ ನೀರನ್ನು ಫೆಸಿಫಿಕ್‌ ಮಹಾ ಸಾಗರಕ್ಕೆ ಬಿಡುಗಡೆ ಶುರು

11:41 PM Oct 05, 2023 | Team Udayavani |

ಟೋಕಿಯೊ: ಜಪಾನಿನ ಫ‌ುಕೋಶಿಮಾ ಪರಮಾಣು ವಿದ್ಯುತ್‌ ಸ್ಥಾವರದ ಸಂಸ್ಕರಿಸಿದ ತ್ಯಾಜ್ಯದ ನೀರನ್ನು ಫೆಸಿಫಿಕ್‌ ಮಹಾ ಸಾಗರಕ್ಕೆ ಬಿಡುಗಡೆ ಮಾಡುವ ಎರಡನೇ ಹಂತದ ಕಾರ್ಯಾಚರಣೆ ಗುರುವಾರ ಆರಂಭಿಸಲಾಗಿದೆ.

Advertisement

ಮುಂದಿನ 17 ದಿನಗಳ ಅವಧಿಯಲ್ಲಿ ಮತ್ತೆ 7,800 ಟನ್‌ ಅಣುತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುಗಡೆಗೊಳಿಸಲು ಮುಂದಾಗಿದೆ. ಇದಕ್ಕೂ ಮೊದಲು ಆ.24 ರಿಂದ ಸೆ.11ರ ವರೆಗೆ 7,800ಟನ್‌ ಸಂಸ್ಕರಿಸಿದ ಅಣುತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುಗಡೆಗೊಳಿಸಲಾಗಿತ್ತು. ಸ್ಥಾವರದಲ್ಲಿ ಸಂಗ್ರಹವಾಗಿರುವ 1.34 ದಶಲಕ್ಷ ಟನ್‌ ತ್ಯಾಜ್ಯದ ನೀರನ್ನು ಮುಂದಿನ 30 ವರ್ಷಗಳ ಅವಧಿಯಲ್ಲಿ ಸಮುದ್ರಕ್ಕೆ ಬಿಡುಗಡೆಗೊಳಿಸಲು ಜಪಾನ್‌ ಯೋಜಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next