Advertisement

ಮಲ್ಯ ಮನೇಲಿ ಚಿನ್ನದ ಟಾಯ್ಲೆಟ್‌

06:00 AM Aug 12, 2018 | |

ಲಂಡನ್‌: ಭಾರತೀಯ ಬ್ಯಾಂಕುಗಳಿಂದ ತಾವು ಪಡೆದಿದ್ದ 9 ಸಾವಿರ ಕೋಟಿ ರೂ. ಹಿಂದಿರು ಗಿಸದೇ ಲಂಡನ್‌ಗೆ ಪರಾರಿಯಾಗಿರುವ ಮದ್ಯೋದ್ಯಮಿ ವಿಜಯ್‌ ಮಲ್ಯ, ಮೇಲ್ನೋಟಕ್ಕೆ ದಿವಾಳಿಯ ಹಣೆಪಟ್ಟಿ ಅಂಟಿಸಿಕೊಂಡಿದ್ದರೂ, ತಮ್ಮ ಐಶಾರಾಮಿ ಜೀವನವನ್ನು ಹಾಗೇ ಕಾಪಾಡಿಕೊಂಡಿದ್ದು, ಅವರ ಮನೆಯ ಟಾಯ್ಲೆಟ್‌ ಕೂಡ ಬಂಗಾರದಿಂದ ಮಾಡಿಸಲ್ಪಟ್ಟಿದೆ ಎಂದು ವರದಿಯೊಂದು ಹೇಳಿದೆ. 

Advertisement

ಸಿಂಗಾಪುರದ ಲೀ ಕುವಾನ್‌ ಯೀವ್‌ ಸ್ಕೂಲ್‌ನಲ್ಲಿ ಅಸೋಸಿಯೇಟ್‌ ಪ್ರೊಫೆಸರ್‌ ಆಗಿರುವ ಜೇಮ್ಸ್‌ ಕ್ರಾಬ್‌ಟ್ರೀ ಎಂಬುವರು ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಲ್ಯ ಬಂಗಲೆಯ ಟಾಯ್ಲೆಟ್‌ ವಿಚಾರ ತಿಳಿಸಿದ್ದನ್ನು ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ. ವರದಿಯ ಪ್ರಕಾರ, ಇತ್ತೀಚೆಗೆ, ಜೇಮ್ಸ್‌ ಅವರು ಲಂಡನ್‌ನ ರೀಜೆಂಟ್‌ ಪಾರ್ಕ್‌ ನಲ್ಲಿರುವ ವಿಜಯ್‌ ಮಲ್ಯ ಬಂಗಲೆಗೆ ಭೇಟಿ ನೀಡಿದ್ದರು. ಆ ವೇಳೆ ಅವರ ಬಂಗಲೆ ಟಾಯ್ಲೆಟ್‌ ನೋಡುವ “ಸುವರ್ಣಾವಕಾಶ’ (!) ಲಭ್ಯವಾಗಿತ್ತು. ಒಳ ಹೋದ ಕೂಡಲೇ ಚಿನ್ನದ ಟಾಯ್ಲೆಟ್‌ ನೋಡಿದ ಜೇಮ್ಸ್‌ ಹುಬ್ಬೇರಿಸಿದ್ದರಂತೆ. 

ಇದನ್ನು ತಮ್ಮ ಮಾತುಗಳಲ್ಲಿ ವರ್ಣಿಸಿರುವ ಜೇಮ್ಸ್‌, “”ಅಲ್ಲಿನ ಗೋಲ್ಡನ್‌ ಟಾಯ್ಲೆಟ್‌ಗೆ ಗೋಲ್ಡನ್‌ ರಿಂಗ್‌ ಇತ್ತು. ನೀರಿನ ಪುಟ್ಟ ಟ್ಯಾಂಕು, ಅದರ ಮುಚ್ಚಳ ಎಲ್ಲವೂ ಬಂಗಾರದ್ದೇ ಆಗಿತ್ತು. ಆದರೆ, ವಿಪರ್ಯಾಸ ಎಂದರೆ ಟಾಯ್ಲೆಟ್‌ನಲ್ಲಿ ಇಡಲಾಗಿದ್ದ ಟಿಶ್ಯೂ ಪೇಪರ್‌ ಮಾತ್ರ ಕೇವಲ ಪೇಪರ್‌ನದ್ದಾಗಿತ್ತೇ ಹೊರತು ಬಂಗಾರದ್ದಾಗಿರ ಲಿಲ್ಲ” ಎಂದು ಹಾಸ್ಯಭರಿತವಾಗಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next