ಲಕ್ನೋ : ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ನಿನ್ನೆ ಗುರುವಾರ ತಡರಾತ್ರಿ ಲಕ್ನೋದಲ್ಲಿನ ಸುಮಾರು ಏಳು ಪೆಟ್ರೋಲ್ ಪಂಪ್‌ಗ್ಳಿಗೆ ದಾಳಿ ನಡೆಸಿ ಅಲ್ಲಿ ಇಲೆಕ್ಟ್ರಾನಿಕ್ ಚಿಪ್ ಗಳನ್ನುಬಳಸಿಕೊಂಡು ಇಂಧನ ಕಳವು ನಡೆಸಲಾಗುತ್ತಿದ್ದುದನ್ನು ಪತ್ತೆ ಹಚ್ಚಿತು.
ಇಲೆಕ್ಟ್ರಾನಿಕ್ ಚಿಪ್‌ಗ್ಳನ್ನು ಬಳಸಿಕೊಂಡು ಗ್ರಾಹಕರನ್ನು ವಂಚಿಸಿ ಅವರಿಗೆ ಗೊತ್ತಾಗದಂತೆ ಇಂಧನ ಕಳವು ಮಾಡುವ ಅಕ್ರಮ ಧಂಧೆಯಲ್ಲಿ ತೊಡಗಿಕೊಂಡಿದ್ದ ಏಳು ಪೆಟ್ರೋಲ್ ಪಂಪ್ ಗಳಿಗೆ ಎಸ್‌ಟಿಎಫ್ ಅಧಿಕಾರಿಗಳು ಬೀಗ ಮುದ್ರೆ ಹಾಕಿದರು.
ಐದು ಲೀಟರ್ ಪೆಟ್ರೋಲನ್ನು ತಮ್ಮ ವಾಹನಗಳಿಗೆ ಹಾಕಿಸಿಕೊಳ್ಳುತ್ತಿದ್ದ ಗ್ರಾಹಕರಿಗೆ ಕೇವಲ ನಾಲ್ಕೂವರೆ ಲೀಟರ್ ಪೆಟ್ರೋಲ್ ಮಾತ್ರವೇ ಸಿಗುತ್ತಿದ್ದುದನ್ನು ಅಧಿಕಾರಿಗಳು ಪತ್ತೆ ಹಚ್ಚಿದರು.
ಪೆಟ್ರೋಲ್ ಪಂಪ್ ಗಳಿಗೆ ಇಲೆಕ್ಟ್ರಾನಿಕ್ ಚಿಪ್‌ಗ್ಳನ್ನು ಬಳಸಿಕೊಂಡು ಹೀಗೆ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದ್ದುದು ಬೆಳಕಿಗೆ ಬಂದಾಗ ಗ್ರಾಹಕರು ರೊಚ್ಚಿಗೆದ್ದರು.
ಶಿಸ್ತು ಕ್ರಮವಾಗಿ ಅಧಿಕಾರಿಗಳು ಏಳು ಪೆಟ್ರೋಲ್ ಪಂಪ್‌ಗ್ಳನ್ನುಸೀಲ್ ಮಾಡಿದಾಗ ಗ್ರಾಹಕರು ತೃಪ್ತರಾದರು ಎನ್ನಲಾಗಿದೆ.