Advertisement

Newspapers ಬಳಸಿ ಆಹಾರ ಪ್ಯಾಕ್‌ ಮಾಡದಿರಿ: ಎಫ್ಎಸ್‌ಎಸ್‌ಎಐ ಮನವಿ 

11:53 PM Sep 28, 2023 | Team Udayavani |

ಹೊಸದಿಲ್ಲಿ: ಗಮನಾರ್ಹವಾದ ಆರೋಗ್ಯ ಅಪಾಯಗಳ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳ ಪ್ಯಾಕಿಂಗ್‌, ಶೇಖರಣೆ ಮತ್ತು ವಿತರಣೆಗಾಗಿ ಪತ್ರಿಕೆಗಳನ್ನು ಬಳಸುವುದನ್ನು ತತ್‌ಕ್ಷಣವೇ ನಿಲ್ಲಿಸುವಂತೆ ಆಹಾರ ಮಾರಾಟ ಗಾರರು ಮತ್ತು ಗ್ರಾಹಕರಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್ಎಸ್‌ಎಸ್‌ಎಐ) ಮನವಿ ಮಾಡಿದೆ.

Advertisement

“ಪತ್ರಿಕೆಗಳಲ್ಲಿ ಬಳಸುವ ಶಾಯಿಯು ವಿವಿಧ ಜೈವಿಕ ಕ್ರಿಯಾಶೀಲ ವಸ್ತುಗಳನ್ನು ಹೊಂದಿದ್ದು, ಇದು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ. ಇದು ಆಹಾರವನ್ನು ಕಲುಷಿತಗೊಳಿಸುತ್ತದೆ ಮತ್ತು ಆ ಆಹಾರವನ್ನು ಸೇವಿಸಿದಾಗ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು’ ಎಂದು ಎಫ್ಎಸ್‌ಎಸ್‌ಎಐ ಸಿಇಒ ಜಿ.ಕಮಲಾ ವರ್ಧನ ರಾವ್‌ ಹೇಳಿದ್ದಾರೆ.

“ಮುದ್ರಣ ಶಾಯಿಯು ಸೀಸ ಮತ್ತು ಲೋಹಗಳು ಒಳಗೊಂಡಂತೆ ರಾಸಾಯನಿ ಕಗಳಿಂದ ಕೂಡಿರುತ್ತದೆ. ಅದು ಆಹಾರ ದೊಂದಿಗೆ ಬೆರೆತು, ಅದನ್ನು ಸೇವಿಸಿದಾಗ ಕಾಲಾನಂತರದಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಈಡಾಗಬಹುದು’ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next