Advertisement

ಹಲಸಿಗೆ ತೊಟ್ಟು ತಿನ್ನುವ ರೋಗ

08:23 PM Jan 16, 2021 | Team Udayavani |

ಕೊರಟಗೆರೆ: ತಾಲೂಕಿನಲ್ಲಿ ಹಲಸಿನ ಹಣ್ಣಿಗೆ ತೊಟ್ಟು ತಿನ್ನುವ ರೋಗ ಕಾಣಿಸಿಕೊಂಡಿದೆ. ಉತ್ತಮ ಫ‌ಸಲು ಬಂದಿದ್ದರೂ ಈ ರೋಗದಿಂದಾಗಿ ರೈತರು ಆತಂಕಕ್ಕೀಡಾಗಿದ್ದಾರೆ. ಹಲವೆಡೆ ಹಲಸಿನ ಹಣ್ಣಿನ ಮರಕ್ಕೆ ಈ ರೋಗ ಕಾಣಿಸಿಕೊಂಡಿದೆ. ಹಲಸು ಕಾಯಿಕಟ್ಟುವ ಸಮಯದಲ್ಲೇ ಹುಳು ಸುತ್ತಿಕೊಂಡಿರುತ್ತದೆ.

Advertisement

ಹಣ್ಣಿನ ಮೇಲೆ ಚೆನ್ನಾಗಿರುತ್ತದೆ ಅದರೆ ಒಳಗಡೆ ಸಂಪೂರ್ಣ ಹುಳುಗಳು ಸೇರಿಕೊಂಡು ಹಣ್ಣನ್ನು ಕೊಳೆಯುವಂತೆ ಮಾಡುತ್ತವೆ. ಹಲಸಿನ ಹಣ್ಣಿಗೆ ಸುತ್ತಿಕೊಂಡಿರುವ ಈ ರೋಗ ಹಲವು ವರ್ಷಗಳ ಹಿಂದೆಯೇ ಬಂದಿದೆ. ಅದರೆ ಇತ್ತೀಚಿಗೆ ರೋಗ ಸುತ್ತ ಮುತ್ತಲಿನ ಎಲ್ಲ ಹಲಸಿನ ಮರಗಳಿಗೂ ವ್ಯಾಪಿಸುತ್ತಿದೆ. ಈ ಹುಳ ಒಂದಿಂಚು ಮಾತ್ರವಿದೆ. ನಿಧಾನವಾಗಿ ಹಣ್ಣಿನ ಒಳಗೆ ಸೇರುತ್ತದೆ. ಗ್ರಾಹಕರು ಹಣ್ಣು ಚೆನ್ನಾಗಿದೆ ಎಂದು ಕೊಳ್ಳುತ್ತಾರೆ. ಮನೆಗೆ ಹೋಗಿ ಹಣ್ಣನ್ನು ಬಿಡಿಸಿದರೆ ಕೊಳೆತಿರುತ್ತದೆ. ಹೆಚ್ಚುತ್ತಿರುವ ಹುಳಗಳಿಂದ ಈ ವರ್ಷ ಹಲಸಿನ ಫ‌ಸಲು ದೊರಕುತ್ತದೊ ಇಲ್ಲವೊ ಎಂಬ ಅನುಮಾನ ಶುರುವಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ರೈತ ಮಂಜುನಾಥ್‌ ಪ್ರತಿಕ್ರಿಯಿಸಿ, ಈ ರೋಗದ ಬಗ್ಗೆ ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಜಿಕೆವಿಕೆಗೂ ಮಾಹಿತಿ ನೀಡಿದ್ದೇವೆ. ಈ ವರೆಗೂ ಪರಿಹಾರ ದೊರೆತಿಲ್ಲ. ಈ ಮೊದಲು ಹಣ್ಣೊಂದನ್ನು 150ರಿಂದ 200ರ ವರೆಗೆ ಮಾರಾಟ ಮಾಡುತ್ತಿದ್ದೆವು. ಉತ್ತಮ ಫ‌ಸಲು ಇರುತ್ತಿತ್ತು. ಈಗ ರೋಗದಿಂದಾಗಿ ಫ‌ಸಲೇ ಇಲ್ಲದಂತಾಗಿದೆ. ರೋಗ ಹತೋಟಿಗೆ ಚಿಕಿತ್ಸೆ ಕಂಡುಹಿಡಿದರೆ ಉತ್ತಮ ಎಂದರು.

ಇದನ್ನೂ ಓದಿ:ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಲನಚಿತ್ರಗಳು ನಿರ್ಮಾಣಗೊಳ್ಳಬೇಕು : ಪ್ರಕಾಶ್ ಜಾವಡೇಕರ್

ರೋಗ ನಿಯಂತ್ರಣ ಹೇಗೆ?

Advertisement

ಹಲಸಿನ ಹಣ್ಣಿನ ಕೊಳೆ ರೋಗ ನಿಯಂತ್ರಣಕ್ಕೆ ಸಿಒಸಿ( ಕಾರ್ಪ ಆಕ್ಸಿ ಕ್ಲೋರೈಡ್) ಸಿಂಪಡಿಸಬಹುದು. 100 ಮಿಲಿ ಲೀಟರ್‌ ಬೇವಿನ ರಸವನ್ನು ಚೆನ್ನಾಗಿ ಕುದಿಸಿ ಶೇ.5 ಪ್ರಮಾಣಕ್ಕೆ ತಂದು ನಂತರ ಕೀಟ ಬಾಧೆ ಇರುವ ಭಾಗಕ್ಕೆ ಸಿಂಪಡಿಸಿದರೆ ಕೀಟಗಳು ಸಾಯುತ್ತವೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಪುಷ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next