ಮುಂಬಯಿ: ಮಾನವ ಸಂಪನ್ಮೂಲದ ಶ್ರೇಷ್ಟ ಪ್ರಕ್ರಿಯೆ ಮತ್ತು ಉತ್ತಮ ಶೋಧನಾ ಕಾರ್ಯ ಸಾಧನೆಗೆ ರಾಷ್ಟ್ರ ಮಟ್ಟದಲ್ಲಿ ನ್ಯಾಷನಲ್ ಕೋ. ಆಪರೇಟಿವ್ ಬ್ಯಾಂಕಿಂಗ್ ಸಮ್ಮಿತ್ ಕೊಡಮಾಡುವ ಬ್ಯಾಂಕಿಂಗ್ ಫ್ರಾಂಟಿಯರ್ ಮತ್ತು ಎನ್‌ಎಎಫ್‌ಸಿಯುಬಿ ಪ್ರಾಯೋಜಕತ್ವದ ಫ್ರಾಂಟಿಯರ್ ಇನ್ ಕೋ. ಆಪರೇಟಿವ್ ಬ್ಯಾಂಕಿಂಗ್ ಅವಾರ್ಡ್ -2018 ಭಾರತ್ ಬ್ಯಾಂಕಿಗೆ ಲಭಿಸಿದೆ.
ಸೆ. 8ರಂದು ನವ ದೆಹಲಿಯ ಆರ್ಕೋ ಸಿಟಿ, ಪ್ರೈಡ್ ಪ್ಲಾಜಾ ಹೊಟೇಲ್‌ನ ಸಭಾಗೃಹದಲ್ಲಿ ಜರಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಿಸರ್ವ್ ಬ್ಯಾಂಕಿನ ಮಾಜಿ ಮುಖ್ಯ ಮಹಾಪ್ರಂಬಧಕ ಪಿ. ಕೆ. ಅರೋರ, ಬ್ಯಾಂಕಿಂಗ್ ಫ್ರಾಂಟಿಯರ್ನ ಬಾಲು ನಾಯರ್, ಬ್ಯಾಂಕಿಂಗ್ ಫ್ರಾಂಟಿ ಯರ್ ಸಂಪಾದಕ ಮನೋಜ್ ತಿವಾರಿ ಅವರು ಭಾರತ್ ಬ್ಯಾಂಕಿನ ನಿರ್ವಾಹಕ ನಿರ್ದೇಶಕ ಮುಖ್ಯ ಕಾರ್ಯ ಞನಿರ್ವಾಹಣಾಧಿಕಾರಿ ಸಿ. ಆರ್. ಮೂಲ್ಕಿ ಮತ್ತು ಮಾನವ ಸಂಪನ್ಮೂಲ ವಿಭಾಗದ ಮಹಾಪ್ರಬಂಧಕ ದಿನೇಶ್ ಬಿ. ಸಾಲ್ಯಾನ್ ಅವರಿಗೆ ಪ್ರಶಸ್ತಿ ಪ್ರದಾನಿಸಿ ಶುಭಹಾರೈಸಿದರು.
40 ವರ್ಷಗಳಲ್ಲಿ ತ್ವರಿತ ಹಾಗೂ ವಿನೂತನ ಆವಿಷ್ಕಾರ ಸೇವೆಗಳಿಗೆ ಭಾರತ್ ಬ್ಯಾಂಕ್ ಸುಮಾರು 52 ಪ್ರಶಸ್ತಿಗಳನ್ನು ಪಡೆಯುವುದರ ಮೂಲಕ ದಾಖಲೆ ನಿರ್ಮಿಸಿದೆ. ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ರಾಜ್ಯಗಳು ಸೇರಿದಂತೆ ಒಟ್ಟು 102 ಶಾಖೆ ಮತ್ತು ಒಂದು ವಿಸ್ತರಣಾ ಶಾಖೆಯನ್ನು ಭಾರತ್ ಬ್ಯಾಂಕ್ ಹೊಂದಿದ್ದು, ಬ್ಯಾಂಕಿನ ಒಟ್ಟು ವ್ಯವಹಾರ ಸುಮಾರು 19 ಸಾವಿರ ಕೋ. ರೂ. ಗಳದ್ದಾಗಿದೆ.
ಆತ್ಮಸ್ಥೈರ್ಯ, ಮನೋಬಲ, ಇಚ್ಚಾಶಕ್ತಿ, ಆರ್ಥಿಕ ಕ್ಷೇತ್ರದ ಬದಲಾವಣೆಗೆ ಮತ್ತು ಸ್ಪರ್ಧೆಗಳ ಪೂರ್ವ ತಯಾರಿಗೆ ಸಿಬ್ಬಂದಿಗಳಿಗೆ ಅಗಾಗ್ಗೆ ತರಬೇತಿ, ಕೌನ್ಸಿಲಿಂಗ್‌ಗಳನ್ನು ಆಯೋಜಿಸಲಾಗುತ್ತಿದೆ. ಮಾನವ ಸಂಪನ್ಮೂಲದ ಸಿಬ್ಬಂದಿಗಳನ್ನು ಎಂಡಿ ಮತ್ತು ಸಿಇಒ ಸಿ. ಆರ್. ಮೂಲ್ಕಿ ಅವರು ಅಭಿನಂದಿಸಿದರು.
ಚಿತ್ರ-ವರದಿ : ರಮೇಶ್ ಅಮೀನ್