Advertisement

ಗಮನಿಸಿ: ಎಲ್ ಪಿಜಿ ದರ, ಇನ್ಸೂರೆನ್ಸ್ ಪಾಲಿಸಿ….ಡಿಸೆಂಬರ್ 1ರಿಂದ ನಾಲ್ಕು ಮಹತ್ವದ ಬದಲಾವಣೆ

11:54 AM Nov 30, 2020 | Nagendra Trasi |

ನವದೆಹಲಿ:ಕೋವಿಡ್ 19 ಸೋಂಕಿನ ಪರಿಣಾಮ ಹಲವಾರು ಬದಲಾವಣೆಯಾಗುತ್ತಲೇ ಇದ್ದು, ಇದೀಗ ಡಿಸೆಂಬರ್ 1ರಿಂದ ಹಲವು ಪ್ರಮುಖ ಬದಲಾಣೆಯಾಗುವ ಸಾಧ್ಯತೆ ಇದ್ದು ಇದರಿಂದಾಗಿ ಜನಸಾಮಾನ್ಯರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ವರದಿ ತಿಳಿಸಿದೆ. ಆ ಕೆಲವು ಪ್ರಮುಖ ಬದಲಾವಣೆಯ ಕಿರು ಪಟ್ಟಿ ಇಲ್ಲಿದೆ…

Advertisement

1)ಎಲ್ ಪಿಜಿ ದರದಲ್ಲಿ ಬದಲಾವಣೆ ಸಾಧ್ಯತೆ:

ಭಾರತದಲ್ಲಿ ರಾಜ್ಯ ಸ್ವಾಮಿತ್ವದ ತೈಲ ಕಂಪನಿಗಳು ಪ್ರತಿ ತಿಂಗಳು ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಅಡುಗೆ ಅನಿಲ(ಎಲ್ ಪಿಪಿ)ದ ಬೆಲೆಯಲ್ಲಿ ಬದಲಾವಣೆಯಾಗುವ ನಿರೀಕ್ಷೆ ಇದೆ.

ಮೂಲಗಳ ಪ್ರಕಾರ, ಡಿಸೆಂಬರ್ ನಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಕೋವಿಡ್ 19 ನಿಟ್ಟಿನಲ್ಲಿ ದೇಶೀಯ ಎಲ್ ಪಿಜಿ ಬೆಲೆಯಲ್ಲಿ ಏರಿಕೆಯಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.

2)ಶೇ.50ರಷ್ಟು ಇನ್ಸೂರೆನ್ಸ್ ಪ್ರೀಮಿಯಂ ಕಂತು ಪಾವತಿಸುವ ಅವಕಾಶ!

Advertisement

ಜೀವ ವಿಮೆ ಪಾಲಿಸಿದಾರರು ಶೇ.50ರಷ್ಟು ಪ್ರೀಮಿಯಂ ಹಣ ಪಾವತಿಸುವ ಅವಕಾಶ ಪಡೆಯುವ ಸಾಧ್ಯತೆ ಇದೆ. ಕೋವಿಡ್ ಹಿನ್ನೆಲೆಯಲ್ಲಿ ಇನ್ಸೂರೆನ್ಸ್ ಹೋಲ್ಡರ್ ತಮ್ಮ ಪ್ರೀಮಿಯಂ ಕಂತಿನ ಅರ್ಧದಷ್ಟು ಹಣ ಪಾವತಿಸುವ ಅವಕಾಶ ಪಡೆಯುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.

3) ಡಿಸೆಂಬರ್ ನಿಂದ ನೂತನ ರೈಲು ಸಂಚಾರ

ಡಿಸೆಂಬರ್ 1ರಿಂದ ಜೀಲಂ ಎಕ್ಸ್ ಪ್ರೆಸ್ ಮತ್ತು ಪಂಜಾಬ್ ಮೇಲ್ ರೈಲುಗಳ ಸಂಚಾರ ಆರಂಭ. ಈ ರೈಲು ನಿಗದಿತ ಸ್ಥಳಗಳಲ್ಲಿ ಓಡಾಟ ನಡೆಸಲಿದೆ. ಪುಣೆ-ಜಮ್ಮು ಟಾವಿ ಪುಣೆ ಜೀಲಂ ವಿಶೇಷ ರೈಲು ಮತ್ತು ಮುಂಬೈ ಫೀರೋಜ್ ಪುರ್ ಪಂಜಾಬ್ ಮೇಲ್ ಸ್ಪೆಷಲ್ ರೈಲುಗಳು ಪ್ರತಿದಿನ ಸಂಚರಿಸಲಿದೆ ಎಂದು ವರದಿ ತಿಳಿಸಿದೆ.

ಕೋವಿಡ್ 19 ಸೋಂಕು ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ಈ ರೈಲು ಸಂಚಾರವನ್ನು ಕೆಲವು ತಿಂಗಳುಗಳ ಕಾಲ ರದ್ದುಗೊಳಿಸಲಾಗಿದ್ದು, ಇದೀಗ ಮತ್ತೆ ಪುನರಾರಂಭಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

4)ಆರ್ ಟಿಜಿಎಸ್ ನಲ್ಲಿ ಬದಲಾವಣೆ:

ದೊಡ್ಡ ಮೊತ್ತದ ವಹಿವಾಟಿಗೆ ಬಳಸುವ ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್ ಸಿಸ್ಟಮ್(ಆರ್ ಟಿಜಿಎಸ್) ವ್ಯವಹಾರದ ಸಮಯವನ್ನು ಡಿಸೆಂಬರ್ 1ರಿಂದ ಹೆಚ್ಚಳ ಮಾಡಲಾಗುವುದು ಎಂದು 2020ರ ಅಕ್ಟೋಬರ್ ನಲ್ಲಿ ಆರ್ ಬಿಐ ಘೋಷಿಸಿತ್ತು. ಡಿ.1ರಿಂದ ವಾರದ ಎಲ್ಲಾ ದಿನಗಳಲ್ಲಿಯೂ ಆರ್ ಟಿಜಿಎಸ್ ಸೇವೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಲಭ್ಯವಿರಲಿದೆ. ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರವನ್ನು ಹೊರತುಪಡಿಸಿ ಉಳಿದ ಬ್ಯಾಂಕಿಂಗ್ ವ್ಯವಹಾರದ ದಿನಗಳಲ್ಲಿ ಆರ್ ಟಿಜಿಎಸ್ ವ್ಯವಸ್ಥೆ ಬೆಳಗ್ಗೆ7ರಿಂದ ಸಂಜೆ 6ರವರೆಗೆ ಗ್ರಾಹಕರಿಗೆ ಲಭ್ಯ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next