ಗೋರಖ್‌ಪುರ : ದೇಶದ ಹಲವು ಪ್ರದೇಶಗಳಲ್ಲಿ ಕುಂಭದ್ರೋಣ ಮಳೆಯಿಂದಾಗಿ ನೆರೆಯಿಂದ ತತ್ತರಿಸಿ ಹೋಗಿ ಜನ ಸಂಕಷ್ಟದಲ್ಲಿದ್ದಾರೆ. ಇದೆ ವೇಳೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಈ ಬಾರಿ ಮಾನ್ಸೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಎರಡು ಕಪ್ಪೆಗಳ ವಿವಾಹ ಸಮಾರಂಭ ನಡೆದಿದೆ.
ಸ್ಥಳೀಯ ಹಿಂದೂ ಮಹಾಸಂಘವು ಮಂಗಳವಾರ ಗೋರಖ್‌ಪುರದ ಕಾಲಿಬರಿ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಎಲ್ಲಾ ವಿಧಿ ವಿಧಾನಗಳನ್ನು ಅನುಸರಿಸಿತು. ಮಂಡೂಕ ಮದುವೆಯನ್ನು ವೀಕ್ಷಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಹಿಂದೂ ಮಹಾಸಂಘದ ರಮಾಕಾಂತ್ ವರ್ಮಾ, “ಇಡೀ ಪ್ರದೇಶವು ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ, ಸಾವನ್ (ಹಿಂದೂ ಕ್ಯಾಲೆಂಡರ್‌ನಲ್ಲಿ ಒಂದು ತಿಂಗಳು) ತಿಂಗಳು ಈಗಾಗಲೇ ಐದು ದಿನಗಳು ಕಳೆದಿವೆ, ಆದರೆ ಮಳೆ ಬಂದಿಲ್ಲ. ಕಳೆದ ವಾರ ನಾವು ಹವನ, ಪೂಜೆ ಮಾಡಿದ್ದೇವೆ. ಈಗ ಜೋಡಿ ಕಪ್ಪೆಗಳ ಮದುವೆಯನ್ನು ಆಯೋಜಿಸಿದ್ದೇವೆ. ಆಚರಣೆಯು ಫಲದಾಯಕವಾಗಲಿ ಪ್ರದೇಶದಲ್ಲಿ ಮಳೆಯಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.ಅಲ್ಲಿ ನೆರೆದಿದ್ದವರು ಆಚರಣೆಯು ಖಂಡಿತವಾಗಿಯೂ ಫಲಪ್ರದವಾಗುತ್ತದೆ ಎಂದರು.
ಜುಲೈ 13 ರಂದು, ರಾಜ್ಯದ ಮಹಾರಾಜಗಂಜ್ ಜಿಲ್ಲೆಯಲ್ಲಿ ಮಹಿಳೆಯರ ಗುಂಪು ಸ್ಥಳೀಯ ಶಾಸಕ ಜಯಮಂಗಲ್ ಕನೋಜಿಯಾ ಮತ್ತು ನಗರಪಾಲಿಕೆಯ ಅಧ್ಯಕ್ಷ ಕೃಷ್ಣ ಗೋಪಾಲ್ ಜೈಸ್ವಾಲ್ ಅವರನ್ನು ಮಣ್ಣಿನ ತೊಟ್ಟಿಯಲ್ಲಿ ನೆನೆಸಿ ಮಳೆ ದೇವರು ‘ಇಂದ್ರ’ನನ್ನು ಮೆಚ್ಚಿಸಲು ಆಚರಣೆ ಕೈಗೊಂಡಿದ್ದರು. ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವ ವೇಳೆ ಮಹಿಳೆಯರು ಮಳೆ ದೇವರನ್ನು ಮೆಚ್ಚಿಸಲು ಇಂತಹ ಸಂಪ್ರದಾಯಗಳನ್ನು ಅನುಸರಿಸುತ್ತಾರೆ.
ಇದನ್ನೂ ಓದಿ: ಹೌರಾದಲ್ಲಿ ಕಂಟ್ರಿ ಲಿಕ್ಕರ್ ಕುಡಿದು 6 ಮಂದಿ ಸಾವು ; ಹಲವರು ಅಸ್ವಸ್ಥ