Advertisement

ಫ್ರೆಂಡ್‌ಶಿಪ್‌ನ ತಪ್ಪಾಗಿ ತಿಳಿದುಬಿಟ್ಟೆ. soryy!

06:00 AM Nov 27, 2018 | |

ನೀನೂ ಬಂದು ರಾಖಿ ಕಟ್ಟಿಬಿಟ್ಟರೆ ಎಂದು ದಿಗಿಲಾಗಿ, ಎರಡು ದಿನ ನಾನು ಕ್ಲಾಸ್‌ನತ್ತ ಸುಳಿಯಲೇ ಇಲ್ಲ. ಆಮೇಲೆ ಕ್ಲಾಸ್‌ಗೆ ಬಂದಾಗ ನೀನು ಫೋನ್‌ನಲ್ಲಿ ಯಾರ ಜೊತೆಗೋ ನಗುನಗುತ್ತಾ ಮಾತಾಡುತ್ತಾ ಇದ್ದೆ. ಅವತ್ತು ಸಂಜೆ ಯಾರಧ್ದೋ ಬೈಕ್‌ನಲ್ಲಿ ಕುಳಿತು ಹೋಗುವುದನ್ನು ನೋಡಿ ಹೃದಯ ಚೂರಾಗಿತ್ತು. 

Advertisement

ನಾನು “ಐ ಲವ್‌ ಯೂ’ ಅಂದಿದ್ದಕ್ಕೆ ನಿಂಗಿಷ್ಟು ಸಿಟ್ಟು ಬರುತ್ತೆ ಅಂದುಕೊಂಡಿರಲಿಲ್ಲ. ನೀನು ಒಪ್ಪಬಹುದೇನೋ ಎಂಬ ಹುಂಬ ಧೈರ್ಯದಲ್ಲಿ ಆ ಮೆಸೇಜ್‌ ಕಳಿಸಿಬಿಟ್ಟೆ. ಆದರೆ, ಒಂದು ಮೆಸೇಜ್‌ಗೆ ಇಷ್ಟು ದೊಡ್ಡ ಬೆಲೆ ತೆರಬೇಕಾಗುತ್ತದೆ ಅಂತ ಗೊತ್ತಿರಲಿಲ್ಲ. 

 ನಾನು ಇಂಗ್ಲಿಷ್‌ನಲ್ಲಿ “ಐ ಲವ್‌ ಯೂ’ ಅಂತ ಮೆಸೇಜ್‌ ಮಾಡೋಕೂ ನೀನೇ ಕಾರಣ! ಹೇಗೆ ಅಂತೀಯಾ? ನಂಗೆ ಒಂದಕ್ಷರವೂ ಇಂಗ್ಲಿಷ್‌ ಬರ್ತಾ ಇರಲಿಲ್ಲ. ಹೇಗಾದ್ರೂ ಮಾಡಿ ಇಂಗ್ಲಿಷ್‌ ಕಲಿಯಬೇಕು ಅಂತಾನೇ ಇಂಗ್ಲಿಷ್‌ ಕೋರ್ಸ್‌ಗೆ ಸೇರಿಕೊಂಡಿದ್ದು. 3 ತಿಂಗಳ ಕೋರ್ಸ್‌ ಪೂರೈಸಿದರೂ, ಒಂದಕ್ಷರವೂ ತಲೆಗೆ ಹೋಗಿರಲಿಲ್ಲ. ಇಂಗ್ಲಿಷ್‌ ಬರದಿದ್ದರೆ ಸಾಯಲಿ ಅಂತ ಕೋರ್ಸ್‌ಗೆ ಬೈ ಬೈ ಹೇಳ್ಳೋಣ ಅಂದುಕೊಂಡಿದ್ದೆ. ಅಷ್ಟರಲ್ಲಿ ನೀನು ಕೂಡ ಅದೇ ಕೋರ್ಸ್‌ಗೆ ಸೇರಿಕೊಂಡೆ! 

 ಅವತ್ತು ನಿನಗೆ ಕ್ಲಾಸ್‌ನಲ್ಲಿ ಮೊದಲ ದಿನ. ನಾನೂ ಅದೇ ಕ್ಲಾಸ್‌ಗೆ ಬಂದಿದ್ದೆ. ಎಲ್ಲರೂ ತಂತಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದರು. ನೀನೂ ತರಗತಿಯ ಮುಂದೆ ಬಂದು, ನಿನ್ನ ಕನಸುಗಳ ಬಗ್ಗೆ, ಆ ಕನಸನ್ನು ನನಸಾಗಿಸಲು ಇಂಗ್ಲಿಷ್‌ ಕಲಿಯಬೇಕೆಂದಿರುವ ಬಗ್ಗೆ, ಪರಿಶ್ರಮಪಟ್ಟರೆ ಯಾವುದೂ ಕಷ್ಟವಲ್ಲ ಎಂಬ ನಿನ್ನ ನಂಬಿಕೆಯ ಬಗ್ಗೆ ಹೇಳಿಕೊಂಡೆ. ನಿನ್ನ ಮಾತುಗಳು ಬಹಳ ಇಷ್ಟವಾದವು. 

ಇಬ್ಬರೂ ಒಂದೇ ಬ್ಯಾಚ್‌ನಲ್ಲಿ ಇದ್ದಿದ್ದರಿಂದ ನಿನ್ನ ಪರಿಚಯವಾಯಿತು. ಎಲ್ಲ ಚಟುವಟಿಕೆಗಳಲ್ಲಿ, ಎಲ್ಲರ ಮುಂದೆ ನಿಂತು ಮಾತಾಡುವ ಸ್ಪರ್ಧೆಯಲ್ಲಿ ನೀನು ಚುರುಕಾಗಿ ಭಾಗವಹಿಸುತ್ತಿದ್ದೆ. ನಿನ್ನನ್ನು ಇಂಪ್ರಸ್‌ ಮಾಡಲು, ನಾನು ಕೂಡ ಅವುಗಳ ಬಗ್ಗೆ ಆಸಕ್ತಿ ತೋರಿದೆ. ನಮ್ಮಿಬ್ಬರ ನಡುವೆ ಸ್ನೇಹ ಚಿಗುರಿದ ಹಾಗೆಯೇ, ನನ್ನ ನಾಲಿಗೆಯಲ್ಲಿ ಇಂಗ್ಲಿಷ್‌ ಕೂಡ ಚಿಗುರೊಡೆಯಿತು. ಇನ್ನೇನು ನಿನ್ನ ಫೋನ್‌ ನಂಬರ್‌ ಕೇಳಬೇಕು ಅಂತ ಅಂದುಕೊಂಡಾಗಲೇ, ರಾಖಿ ಹಬ್ಬ ಬಂತು. ಅದೂ ನಿನ್ನ ಗೆಳತಿ ಬಂದು, “ಅಣ್ಣ, ನೀನು ನಾಳೆ ಖಂಡಿತ ಕ್ಲಾಸಿಗೆ ಬರಬೇಕು. ನಾನು ನಿಂಗೆ ರಾಖಿ ಕಟ್ತಿನಿ’ ಅಂದಾಗಲೇ ಗೊತ್ತಾಗಿದ್ದು ರಕ್ಷಾ ಬಂಧನ ಇದೆ ಎಂದು. ಅವಳ ಜೊತೆಗೆ ನೀನೂ ಬಂದು ರಾಖಿ ಕಟ್ಟಿಬಿಟ್ಟರೆ ಎಂದು ದಿಗಿಲಾಗಿ, ಎರಡು ದಿನ ನಾನು ಕ್ಲಾಸ್‌ನತ್ತ ಸುಳಿಯಲೇ ಇಲ್ಲ. ಆಮೇಲೆ ಕ್ಲಾಸ್‌ಗೆ ಬಂದಾಗ ನೀನು ಫೋನ್‌ನಲ್ಲಿ ಯಾರ ಜೊತೆಗೋ ನಗುನಗುತ್ತಾ ಮಾತಾಡುತ್ತಾ ಇದ್ದೆ. ಅವತ್ತು ಸಂಜೆ ಯಾರಧ್ದೋ ಬೈಕ್‌ನಲ್ಲಿ ಕುಳಿತು ಹೋಗುವುದನ್ನು ನೋಡಿ ಹೃದಯ ಚೂರಾಗಿತ್ತು. 

Advertisement

ಆ ಕೆಟ್ಟ ಘಟನೆಯಿಂದಾಗಿ ಕ್ಲಾಸ್‌ಗೆ ಗೈರಾಗತೊಡಗಿದೆ. ಕಳೆದ ವಾರ, ಯಾವುದೋ ಕಾರ್ಯಕ್ರಮ ಇದೆ. ನೀನು ಬರಲೇಬೇಕು ಅಂತ ಸರ್‌ ಹೇಳಿದ್ದಕ್ಕೆ ಬಂದಿದ್ದೆ. ಅಲ್ಲಿ ಮತ್ತೆ ನೀನು ಸಿಕ್ಕೆ. ಮೊದಲಿನಂತೆಯೇ ಮುದ್ದಾಗಿ ಮಾತಾಡಿದೆ, ನನ್ನ ಜೊತೆಗೆ ಫೋಟೊ ತೆಗೆಸಿಕೊಂಡೆ. ನಾನೂ ಧೈರ್ಯ ಮಾಡಿ ನಿನ್ನ ನಂಬರ್‌ ಕೇಳಿ, ತೆಗೆದುಕೊಂಡೆ. ಇಬ್ಬರೂ ಚಾಟಿಂಗ್‌ ಶುರು ಮಾಡಿದೆವು. ನೀನು ನನ್ನ ಜೊತೆ ಆತ್ಮೀಯಳಾಗಿಯೇ ಮಾತಾಡಿದ್ದೆ. ನನ್ನ ಒಂದು ಮೆಸೇಜ್‌ಗೆ ಐದು ಮೆಸೇಜ್‌ ಕಳಿಸುತ್ತಿದ್ದೆ. ಅದನ್ನೇ ತಪ್ಪಾಗಿ ತಿಳಿದು, ಮೂರನೇ ದಿನ ಸಂಜೆ, “ಐ ಲವ್‌ ಯೂ’ ಅಂದುಬಿಟ್ಟೆ! ಅದಕ್ಕೆ ನೀನು, “ವಾಟ್‌?!’ ಎಂದಷ್ಟೇ ಉತ್ತರಿಸಿದೆ. ಸ್ವಲ್ಪ ಜೋಕ್‌ ಮಾಡೋಣ ಅಂದುಕೊಂಡು, “ಈಗೇನು, ಇನ್ನೊಂದ್ಸಲ ಐ ಲವ್‌ ಯು ಅಂತ ಕಳಿಸಬೇಕಾ? ಕೇಳಿಲ್ಲಿ, ಐ ಲವ್‌ ಯೂ’ ಅಂತ ಕಳಿಸಿಬಿಟ್ಟೆ. ನೀನು ಸಿಟ್ಟಿನಲ್ಲಿ “ವಾಟ್‌’ ಅಂದಿದ್ದು ಅಂತ ನನಗರ್ಥ ಆಗುವಷ್ಟರಲ್ಲಿ, ನೀನು ನನ್ನನ್ನು ಬ್ಲಾಕ್‌ ಮಾಡಿಬಿಟ್ಟೆ! ಮಾರನೆದಿನ ನಿನ್ನನ್ನು ಮಾತಾಡಿಸಲೆಂದೇ ಕ್ಲಾಸ್‌ಗೆ ಬಂದಿದ್ದೆ, ಆಗಲೂ ಮುಖ ತಿರುಗಿಸಿ ಹೋಗಿಬಿಟ್ಟೆ. 

ಕ್ಷಮಿಸು ಗೆಳತಿ, ಸ್ನೇಹವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಕ್ಕೆ. ನಿನಗೆ ನಾನಿಷ್ಟವಿಲ್ಲದಿದ್ದರೆ ಬೇಡ ಬಿಡು. ಕನಿಷ್ಠ ಪಕ್ಷ ಅದನ್ನು ಹೇಳಲಾದರೂ ಒಂದು ಮೆಸೇಜ್‌ ಮಾಡು. 

ದಸ್ತಗೀರ ನದಾಫ್ ಯಳಸಂಗಿ

Advertisement

Udayavani is now on Telegram. Click here to join our channel and stay updated with the latest news.

Next