Advertisement

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

11:24 AM Nov 22, 2024 | keerthan |

ವಿಜಯಪುರ: ವಕ್ಫ್ ಕಾಯ್ದೆ ವಿರೋಧಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಟಾಂಗ್ ಕೊಟ್ಟ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ್ದು ಏನು? 1974ರಿಂದ ಇಲ್ಲಿಯವರೆಗೆ ಏಕೆ ಹೋರಾಟ ಮಾಡಿಲ್ಲ ಎಂದು ಪ್ರಶ್ನಿಸಿದರು.

Advertisement

ಬಿಜೆಪಿ ಅಧಿಕಾರಾವಧಿಯಲ್ಲೂ ವಕ್ಫ್ ಪರ ನೋಟೀಸ್ ‌ನೀಡಲಾಗಿದೆ. ಪಹಣಿಯಲ್ಲಿ ವಕ್ಫ್ ಎಂದು ನಮೂದು ಮಾಡಲಾಗಿದೆ. ಅವರ ಕಾಲದಲ್ಲಿ ಗೆಜೆಟ್ ಬಗ್ಗೆ ಹೋರಾಟ ಮಾಡಿಲ್ಲ? ಬಿಜೆಪಿಯ 2014ರ ಚುನಾವಣಾ ಪ್ರಣಾಳಿಕೆಯಲ್ಲಿ ವಕ್ಫ್ ಪರ ಭರವಸೆ ನೀಡಿದ್ದರು. ಸಚಿವೆ ಶೋಭಾ ಕರಂದ್ಲಾಜೆ ಸಂಸತ್‌ನಲ್ಲಿ ವಕ್ಫ ಪರವಾಗಿ ಪ್ರಶ್ನೆ ಕೇಳಿದ್ದರು. ನಂತರ ವಕ್ಫ ವಿರುದ್ಧ ಹೋರಾಟ ಮಾಡಿದ್ದಾರೆ. ಈಗ ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ ಎಂದರು.

ಶುಕ್ರವಾರ (ನ.22) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ವಿಚಾರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಧ್ಯೆ ಪೈಪೋಟಿ ನಡೆದಿದೆ. ವಕ್ಫ್ ಹೋರಾಟದ ಕ್ರೆಡಿಟ್ ಗಾಗಿ ಹೋರಾಟ ನಡೆದಿದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು.

ಚುನಾವಣಾ ಫಲಿತಾಂಶ ಪ್ರಕಟ ವಿಚಾರವಾಗಿ ಮಾತನಾಡಿದ ಅವರು, ಉಪ ಚುನಾವಣೆ, ಮಹಾರಾಷ್ಟ್ರದ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಕಾಂಗ್ರೆಸ್ ಗೆಲುವು ಪಡೆಯಲಿದೆ ಎಂಬ ವಿಶ್ವಾಸವಿದೆ ಎಂದರು.

ಉದ್ಯಮಿ ಗೌತಮ್ ಅದಾನಿ ಮೇಲೆ ಅಮೆರಿಕಾ ಕೋರ್ಟ್ ನಿಂದ ವಾರೆಂಜ್ ಜಾರಿ ವಿಚಾರವಾಗಿ ಮಾತನಾಡಿ, ತಪ್ಪು ಮಾಡಿದವರ ಮೇಲೆ ಕ್ರಮವಾಗುತ್ತದೆ. ಯಾರಾದರೇನು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಆಗುತ್ತದೆ. ಅದೊಂದು ಕಾನೂನು ಪ್ರಕ್ರಿಯೆ ಎಂದು ಎಂ.ಬಿ. ಪಾಟೀಲ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next