Advertisement

ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

02:55 PM Nov 28, 2021 | Team Udayavani |

ಗಜೇಂದ್ರಗಡ: ಸಾಧಿಸುವ ಛಲ, ಗುರುಭಕ್ತಿ, ಆತ್ಮ ವಿಶ್ವಾಸ, ಸತತ ಪರಿಶ್ರಮ ಇದ್ದಲ್ಲಿ ಅಸಾಧ್ಯವಾದದ್ದು ಸಹ ಸಾಧಿಸಬಹುದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನವನ್ನು ತಿದ್ದುವ ಗುರುವೃಂದಕ್ಕೆ ನೆನೆಯುವುದು ಎಲ್ಲರ ಕರ್ತವ್ಯ ಎಂದು ವಿಶ್ವೇಶ್ವರ ವಿದ್ಯಾವರ್ಧಕ ಸಂಘ ಉಪಾಧ್ಯಕ್ಷ ಬಸವರಾಜ ಮತ್ತಿಕಟ್ಟಿ ಹೇಳಿದರು.

Advertisement

ಪಟ್ಟಣದ ವಿಶ್ವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಡೆದ 2005-06ನೇ ಸಾಲಿನ ಡಿಇಡಿ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‌.ಸಿ. ಪಾಟೀಲ ಮಾತನಾಡಿ, ಹಿಂದಿನ ಶಿಕ್ಷಣ ಪದ್ಧತಿಗೂ ಇಂದಿನ ಶಿಕ್ಷಣಕ್ಕೂ ಬಹಳಷ್ಟು ವತ್ಯಾಸಗಳಿವೆ. ಆದರೆ ದೇಶ ಕಟ್ಟುವ ನಿಟ್ಟಿನಲ್ಲಿ ಶಿಕ್ಷಕರು ನಿರ್ವಹಿಸುತ್ತಿರುವ ಕಾರ್ಯ ನಿತ್ಯ ನಿರಂತರವಾಗಿದೆ ಎಂದರು.

ಈ ಸಂದರ್ಭದಲ್ಲಿ ಗುರು ವೃಂದಕ್ಕೆ ಸನ್ಮಾನಿಸಲಾಯಿತು. ಹಲವು ವರ್ಷಗಳ ನಂತರ ಸೇರಿದ್ದ ವಿದ್ಯಾರ್ಥಿಗಳು ಶೈಕ್ಷಣಿಕ ದಿನದ ಸಂಭ್ರಮ, ಅಭ್ಯಾಸ, ಅಂದಿನ ಸಿಹಿ ಕಹಿ ಕ್ಷಣಗಳನ್ನು ನೆನಪಿಸಿಕೊಂಡರು. ಹಳೆಯ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ, ವೃತ್ತಿ ಜೀವನ ಕುರಿತು ಪರಸ್ಪರ ಅನಿಸಿಕೆಗಳನ್ನು ಹಂಚಿಕೊಳ್ಳುವುದರ ಜೊತೆಗೆ ತಮಗೆ ಕಲಿಸಿದ್ದ ಶಿಕ್ಷಕರನ್ನು ನೆನೆದರು.

Advertisement

Udayavani is now on Telegram. Click here to join our channel and stay updated with the latest news.

Next