Advertisement

ಪತ್ರಕರ್ತರ ಸಮಯಪ್ರಜ್ಞೆ : ತಪ್ಪಿದ ಎಟಿಎಂ ಕಳವು

12:29 PM Jan 28, 2018 | Team Udayavani |

ಮಂಗಳೂರು: ನಗರದ ವೆಲೆನ್ಶಿಯಾದಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂ ಕಳವಿಗೆ ಶುಕ್ರವಾರ ತಡರಾತ್ರಿ ಯತ್ನ ನಡೆದಿದ್ದು, ಪತ್ರಕರ್ತರಿಬ್ಬರು ಮೆರೆದ ಸಮಯಪ್ರಜ್ಞೆಯಿಂದ ವಿಫ‌ಲವಾಗಿದೆ.

Advertisement

ಶುಕ್ರವಾರ ರಾತ್ರಿ ಸುಮಾರು 12 ಗಂಟೆಗೆ ಮುಸುಕುಧಾರಿಯೊಬ್ಬ ಎಟಿಎಂಯೊಳಗಿದ್ದು, ಮೆಶಿನ್‌ನನ್ನು ತೆರೆಯಲು ಪ್ರಯತ್ನಿಸಿದ್ದ. ಅದೇ ವೇಳೆಗೆ ಕಟ್ಟಡದ ಮೇಲಂ ತಸ್ತಿನಲ್ಲಿರುವ ಪತ್ರಿಕಾ ಕಚೇರಿಯಿಂದ ಕೆಲಸ ಮುಗಿಸಿ ಕೆಳಗಡೆ ಬರುತ್ತಿದ್ದ ಪತ್ರಕರ್ತರಿಬ್ಬರು ಇದನ್ನು ಗಮನಿಸಿದ್ದು, ಅವರು ಕೂಡಲೇ ಕಂಟ್ರೋಲ್‌ ರೂಂ 100ಗೆ ಕರೆ ಮಾಡಿದ್ದರು. ಅವರನ್ನು ಕಂಡ ಕೂಡಲೇ ಕಳ್ಳ ತಾನು ಧರಿಸಿದ್ದ ಬುರ್ಖಾ ಮತ್ತು ಮುಖವನ್ನು ಮುಚ್ಚಿಕೊಂಡಿದ್ದ ಶಾಲನ್ನು ಎಸೆದು ಪರಾರಿಯಾಗಿದ್ದಾನೆ.

ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಎಟಿಎಂ ಮೆಶಿನ್‌ ತೆರೆದಿರುವುದು ಕಂಡುಬಂದಿದೆ. ಎಸಿಪಿ ವೆಲೆಂಟೈನ್‌ ಡಿ’ ಸೋಜಾ ಸಹಿತ ಪೊಲೀಸ್‌ ಅಧಿಕಾರಿಗಳು, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಪತ್ರಕರ್ತರ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿ  ಕೃತಜ್ಞತೆ ಸಲ್ಲಿಸಿದರು.

ಶನಿವಾರ ಬೆಳಗ್ಗೆ ಸ್ಥಳಕ್ಕೆ ಡಿಸಿಪಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರು ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಲಿನೆಟ್‌ ಎಸ್‌.ಎಲ್‌. ಪಿಂಟೊ ಅವರಿಂದ ಮಾಹಿತಿ ಪಡೆದುಕೊಂಡರು. ಘಟನೆ ಬಗ್ಗೆ ಶನಿವಾರ ಬ್ಯಾಂಕಿನ ಮ್ಯಾನೇಜರ್‌ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next