ನಡುವೆ ಗಡಿಭಾಗದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವ ವೇಳೆಯಲ್ಲಿಯೇ, ಭಾರತಕ್ಕೆ ಫ್ರಾನ್ಸ್‌ನಿಂದ ರಫೇಲ್ ಯುದ್ಧ ವಿಮಾನಗಳು ಬಂದಿಳಿಯುತ್ತಿರುವುದು ರಕ್ಷಣಾ ವ್ಯವಸ್ಥೆಯ ಮನೋಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಪಾಕಿಸ್ಥಾನದಲ್ಲಿನ ಎಫ್-16, ಚೀನದ ಜೆ-20 ವಿಮಾನಗಳ ಬೆವರಿಳಿಸಬಲ್ಲ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಯ ಶಕ್ತಿಯನ್ನು ಮತ್ತೂಂದು ಸ್ತರಕ್ಕೆ ಒಯ್ಯಲಿದೆ ಎಂದು ಮಿಲಿಟರಿ ಪರಿಣತರು ಹೇಳುತ್ತಿದ್ದಾರೆ…
Advertisement
ಒಪ್ಪಂದದ ಹಿನ್ನೆಲೆಫ್ರಾನ್ಸ್ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ಅಭಿವೃದ್ಧಿಪಡಿಸಿರುವ ರಫೇಲ್ ಪ್ರಸಕ್ತ ಜಾಗತಿಕ ರಕ್ಷಣಾ ವ್ಯವಸ್ಥೆಯಲ್ಲಿರುವ ಅತಿ ಸಕ್ಷಮ ಯುದ್ಧ ವಿಮಾನಗಳಲ್ಲಿ ಒಂದು. 13 ವರ್ಷಗಳ ಹಿಂದೆ ಭಾರತೀಯ ವಾಯುಪಡೆಯು ಮಧ್ಯಮ ಶ್ರೇಣಿಯ ಯುದ್ಧವಿಮಾನಗಳ ಖರೀದಿಗೆ ಟೆಂಡರ್ ಕರೆದಿತ್ತು. ಆಗ ಲಾಕ್‌ಹೀಡ್ ಮಾರ್ಟಿನ್, ಡಸಾಲ್ಟ್ ಸೇರಿದಂತೆ ಹಲವು ಜಾಗತಿಕ ಯುದ್ಧ ವಿಮಾನ ತಯಾರಕ ಕಂಪೆನಿಗಳು ಮುಂದೆ ಬಂದಿದ್ದವು. ಕೊನೆಗೆ 2012ರಲ್ಲಿ ಭಾರತ ರಫೇಲ್ ಖರೀದಿಗೆ ಒಪ್ಪಿತು. ಆದರೆ, ದರದ ವಿಚಾರದಲ್ಲಿ ಗೊಂದಲ ದಿಂದ ಖರೀದಿ ಪ್ರಕ್ರಿಯೆ ನಿಂತಿತ್ತು. 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಹಿಂದಿನ ಹೊಸ ಒಪ್ಪಂದವನ್ನು ಮಾಡಿಕೊಂಡಿತ್ತು. ಇದರನ್ವಯ ಫ್ರಾನ್ಸ್‌ನಿಂದ 36 ಯುದ್ಧವಿಮಾನಗಳ ಖರೀದಿಗೆ ಭಾರತ ಸಹಿ ಹಾಕಿತು. ಈ ಒಪ್ಪಂದದ ಭಾಗವಾಗಿ ಈಗ 5 ರಫೇಲ್ ಯುದ್ಧ ವಿಮಾನಗಳು ಬುಧವಾರ ಭಾರತ ಗಗನ ಪ್ರವೇಶಿಸಲಿವೆ.
ಒಂದೆಡೆ ಶತ್ರುರಾಷ್ಟ್ರಗಳ ಯುದ್ಧ ವಿಮಾನಗಳು ಅತ್ಯಾಧುನಿಕವಾದರೂ ಇತ್ತ ಭಾರತದ ವಾಯುಪಡೆಯಲ್ಲಿ ಮಿಗ್-21ಯುದ್ಧವಿಮಾನಗಳೇ ಮುಂಚೂಣಿ ಹೋರಾಟಗಾರರಾಗಿವೆ. ಅಲ್ಲದೆ ವಾಯುಪಡೆಬಳಿ ಇರುವ ಹಲವು ಯುದ್ಧ ವಿಮಾನಗಳ ಡೇಟ್ ಬಾರ್ ಕೂಡ ಆಗಿದೆ. ಈ ಹಿನ್ನೆಲೆಯಲ್ಲಿಯೇ ಎರಡು ಬಹುಆಯಾಮದ ಯುದ್ಧ ಸಾಮರ್ಥ್ಯಹೊಂದಿರುವ ರಫೇಲ್‌ನ ಅಗತ್ಯ ಹಿಂದೆಂದಿಗಿಂತಲೂ ಅಧಿಕವಾಗಿದೆ.
ಏರು ಟು ಏರ್: ಗಗನದಲ್ಲೇ ಶತ್ರು ಸೇನೆಯ ಯುದ್ಧ ವಿಮಾನವನ್ನು ಪುಡಿಗಟ್ಟುವ ಸಾಮರ್ಥ್ಯ
ಏರ್ ಟು ಅರ್ಥ್: ನೆಲದ ಮೇಲಿರುವ ಶತ್ರು ಸೈನಿಕರು, ಕ್ಯಾಂಪ್, ಬಂಕರ್, ಟ್ಯಾಂಕರ್, ಯುದ್ಧ ನೌಕೆಗಳನ್ನು ನಿಖರವಾಗಿ ಹೊಡೆದುರುಳಿಸುವ ಶಕ್ತಿ
ಸ್ಟಾಂಡ್‌ಆಫ್: ಎದುರಾಳಿ ಸೇನೆಯ ದೃಷ್ಟಿಗೆ ನಿಲುಕದಷ್ಟು ಬಾನೆತ್ತರಕ್ಕೇರಿ ಶತ್ರು ನೆಲೆಗಳ ಮೇಲೆ ದಾಳಿ ನಡೆಸಬಲ್ಲ ಸಾಮರ್ಥ್ಯ.
ಅಣ್ವಸ್ತ್ರ ಸಿಡಿತಲೆ ಇರುವ ಕ್ಷಿಪಣಿಗಳನ್ನು ಹಾರಿಸಬಲ್ಲದು
ನಿಖರ ದಾಳಿಗೆ ಹೆಸರಾದ ಹ್ಯಾಮರ್ ಕ್ಷಿಪಣಿಗಳನ್ನೂ ರಫೇಲ್ ಹೊಂದಿರಲಿವೆ. ಹ್ಯಾಮರ್ ಕ್ಷಿಪಣಿಗಳು ಶತ್ರು ಪಾಳಯದ ಬಂಕರ್ ಅಥವಾ ಕಣಿವೆ ಪ್ರದೇಶದಲ್ಲಿನ ಅಡಗುದಾಣಗಳನ್ನು ಒಮ್ಮೆಗೇ ಛಿದ್ರಗೊಳಿಸುತ್ತವೆ.
Related Articles
ನಿಸ್ಸಂಶಯವಾಗಿಯೂ ಪಾಕಿಸ್ಥಾನದಲ್ಲಿರುವ ಎಫ್-16 ಯುದ್ಧ ವಿಮಾನಕ್ಕೆ ರಫೇಲ್ ಪ್ರಬಲ ಪ್ರತಿಸ್ಪರ್ಧಿ, ಎರಡು ಇಂಜಿನ್ ಇರುವ ರಫೇಲ್ ಹಲವು ಅಂಶಗಳಲ್ಲಿ ಎಫ್-16ಗಿಂತಲೂ ಮುಂದಿದೆ. ಆದರೆ, ಯಶಸ್ಸಿನಲ್ಲಿ ಯುದ್ಧ ಪೈಲಟ್‌ಗಳ ನೈಪುಣ್ಯ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ರಫೇಲ್‌ನ ವಿಶೇಷತೆಗಳೇನೆಂದರೆ, ಏಕಕಾಲದಲ್ಲಿ ಹಲವು ಗುರಿಗಳನ್ನು ನಾಶಪಡಿಸುವ ಸಾಮರ್ಥ್ಯ ಇದಕ್ಕಿದೆ. ಅಲ್ಲದೇ ಒಂದು ರಫೇಲ್ ಯುದ್ಧವಿಮಾನವನ್ನು ಎದುರಿಸಲು ಎದುರಾಳಿ ದೇಶವು ಎರಡು ಯುದ್ಧ ವಿಮಾನಗಳನ್ನು ನಿಯೋಜಿಸಬೇಕಾಗುತ್ತದೆ. ನಿಸ್ಸಂಶಯವಾಗಿಯೂ ಪಾಕಿಸ್ಥಾನದ ಬಳಿ ಇರುವ ಎಫ್-16 ಯುದ್ಧವಿಮಾನಕ್ಕೆ ಇನ್ಮುಂದೆ ರಫೇಲ್ ಸವಾಲೊಡ್ಡಲಿದೆ.
Advertisement
ಹೇಗಿದೆ ಎರಡರ ಶಕ್ತಿ?ರಫೇಲ್‌ನ ಪ್ರಮುಖ ಶಕ್ತಿಯೆಂದರೆ, ಅದರಲ್ಲಿನ ಅತ್ಯಾಧುನಿಕ ತಂತ್ರಜ್ಞಾನ ಸ್ಪೆಕ್ಟ್ರಾ. ಸ್ಪೆಕ್ಟ್ರಾದಿಂದಾಗಿ, ನೆಲದಿಂದ ಹಾಗೂ ವಾಯು ಮಾರ್ಗದಿಂದ ಎದುರಾಗುವ
ಅಪಾಯಗಳು ಕ್ಷಣಾರ್ಧದಲ್ಲಿ ಪತ್ತೆಯಾಗುತ್ತವೆ. ಸ್ಪೆಕ್ಟ್ರಾ ತಂತ್ರಜ್ಞಾನವು, ಶತ್ರುಸೈನಿಕರ ಸೆನ್ಸಾರ್‌ಗಳನ್ನು ಜಾಮ್ ಮಾಡುವ ವಿಷಯದಲ್ಲಾಗಲಿ ಅಥವಾ ಹಾದಿತಪ್ಪಿಸುವ ವಿಷಯದಲ್ಲಾಗಲಿ ನಿಷ್ಣಾತವಾಗಿದೆ. ಒಟ್ಟಲ್ಲಿ ಅಪಾಯವನ್ನು ಅತ್ಯುತ್ತಮವಾಗಿ ಅಂದಾಜಿಸುವ ಸಾಮರ್ಥ್ಯ ರಫೇಲ್‌ಗೆ ಇದ್ದು, ಈ ಎಲ್ಲಾ ಕಾರಣಗಳಿಂದಾಗಿ, ಅದನ್ನು ಹುಡುಕಿ, ಹೊಡೆದುರುಳಿಸುವುದು ಶತ್ರು ಪಡೆಗೆ ಕಷ್ಟದ ಕೆಲಸ. ಇನ್ನೊಂದೆಡೆ ಚೀನಾದ ಜೆ-20ಯಲ್ಲಿನ ರಕ್ಷಣಾ ವ್ಯವಸ್ಥೆಯೂ ಬಲಿಷ್ಠವಾಗಿದೆ ಎನ್ನಲಾಗುತ್ತಿದ್ದು, ಯುದ್ಧರಂಗದಲ್ಲಿ ಪೈಲಟ್‌ಗೆ 360 ಡಿಗ್ರಿ ಮಾಹಿತಿ ಸಿಗುತ್ತದೆ ಎಂದು ಪಿಎಲ್‌ಎ ಹೇಳುತ್ತದೆ. ಇದಷ್ಟೇ ಅಲ್ಲದೇ, ಮಿಲಿಟರಿಯ ಉಪಗ್ರಹಗಳಿಂದಲೂ ನೇರ ಸಮಯದಲ್ಲಿ ಮಾಹಿತಿ ಪೈಲಟ್‌ಗೆ ದೊರಕುತ್ತದಂತೆ. ಪರಿಣತರೇನಂತಾರೆ?
ಚೀನಾ ತನ್ನ ಜೆ-20 ಯುದ್ಧವಿಮಾನವನ್ನು ಸೂಪರ್ ಸ್ಟೆಲ್ತ್ ಎಂದು ಕರೆಯುತ್ತದೆ. ಅಂದರೆ, ಶತ್ರುಪಡೆಯ ರೇಡಾರ್‌ಗಳಿಗೆ ತಮ್ಮ ವಿಮಾನವನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತದೆ. ಆದರೆ, ನಿವೃತ್ತ ಏರ್‌ಮಾರ್ಶಲ್ ಧೀರಜ್ ಕುಕ್ರೇಜಾ ಅವರು ಹೇಳುವುದೇ ಬೇರೆ. “”ಮೊದಲನೆಯದಾಗಿ, ಚೀನ ಹೇಳುವಂತೆ ಜೆ-20 “ಸೂಪರ್ ಸ್ಟೆಲ್ತ್’ ಅಲ್ಲ. ಏಕೆಂದರೆ, ಈಗಾಗಲೇ ಭಾರತೀಯ ರೇಡಾರ್‌ಗಳು ಅದನ್ನು ಪತ್ತೆ ಹಚ್ಚಿದ ಉದಾಹರಣೆಯಿದೆ. ನಂತರ ಚೀನ ಎಂಜಿನ್ ಅಭಿವೃದ್ಧಿ ಮಾಡಲು ಮುಂದಾಯಿತು. ಆದರೆ, ಅದಕ್ಕೆ ಸಾಧ್ಯವಾಗಲಿಲ್ಲ. ಕೊನೆಗೆ ರಷ್ಯಾದಿಂದ ಇಂಜಿನ್ ಖರೀದಿಸಿತು. ಈಗ ಈ
ಯುದ್ಧ ವಿಮಾನದಲ್ಲಿನ ಥರ್ಸ್ಟ್ ಟು ವೇಟ್ ರೇಷಿಯೋ ಪ್ರಮಾಣ ಸಹ ಸರಿಯಾಗಿಲ್ಲ” ಎನ್ನುತ್ತಾರೆ. ಜೆ-20ಗಿಂತ ರಫೇಲ್‌ಗೆ ಅನುಭವ ಹೆಚ್ಚು
ಜೆ-20ಯ ಸಾಮರ್ಥ್ಯವನ್ನು ಇನ್ನೂ ಹಾಳೆಯ ಮೇಲೆಯೇ ನೋಡಿದ್ದೇವೆ. ಏಕೆಂದರೆ, ಇದುವರೆಗೂ ಜೆ-20 ಯಾವುದೇ ಯುದ್ಧವನ್ನೂ ಎದುರಿಸಿಲ್ಲ. ಇನ್ನೊಂದೆಡೆ ರಫೇಲ್ ಈಗಾಗಲೇ ಅಫ್ಘಾನಿಸ್ಥಾನ, ಲಿಬ್ಯಾ, ಮಾಲಿ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಇರಾಕ್ ಮತ್ತು ಸಿರಿಯಾದಲ್ಲಿ ಕಾರ್ಯಾಚರಿಸಿದ್ದು, ಅಲ್ಲಿನ ಅನುಭವಗಳು ಅದರ ಪರಿಷ್ಕರಣೆಗೆ ಕಾರಣವಾಗುತ್ತಾ ಬಂದಿವೆ ಎನ್ನುವುದನ್ನು ಗಮನಿಸಬೇಕು. ರಫೇಲ್‌ನ ಮುಖ್ಯ ನಾಲ್ಕು ತಂತ್ರಜ್ಞಾನ
ಬಹುದಿಕ್ಕಿನ ರೇಡಾರ್ ವ್ಯವಸ್ಥೆಯು 100 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಸುಮಾರು 40 ಟಾರ್ಗೆಟ್‌ಗಳನ್ನು ಏಕಕಾಲದಲ್ಲಿ ಪತ್ತೆಹಚ್ಚಬಲ್ಲದು.
ಈ ಯುದ್ಧ ವಿಮಾನ ಬೃಹತ್ ಡಿಜಿಟಲ್ ಕ್ಯಾಮೆರಾವನ್ನು ಹೊಂದಿದ್ದು, ಯಾವುದೇ ವೇಗದಲ್ಲೂ ಸಹ ಸ್ಪಷ್ಟ ಚಿತ್ರಗಳನ್ನು ತೆಗೆಯಬಲ್ಲದು. ಸ್ಪೆಕ್ಟ್ರಾ ಎನ್ನುವ ಅತ್ಯಾಧುನಿಕ ತಂತ್ರಜ್ಞಾನವು, ಶತ್ರುಪಡೆಯ ರೇಡಾರ್ ಸಿಗ್ನಲ್‌ಗಳನ್ನು ಜಾಮ್ ಮಾಡ ಬಲ್ಲದು, ದಾರಿ ತಪ್ಪಿಸಬಲ್ಲದು ಅಲ್ಲದೇ ಶತ್ರುಪಡೆಯ ಕ್ಷಿಪಣಿಯೊಂದು ತನ್ನತ್ತ ಬರುತ್ತಿದೆ ಎನ್ನುವುದನ್ನು ದೂರದಿಂದಲೇ ಪತ್ತೆ ಹಚ್ಚುವುದಷ್ಟೇ ಅಲ್ಲದೇ, ಈ ವಿಷಯವನ್ನು ಕ್ಷಣಾರ್ಧದಲ್ಲಿ ಬೇಸ್‌ಗೆ ಸಂದೇಶ ಕಳುಹಿಸಬಲ್ಲದು.
ಶತ್ರುಪಡೆಯ ಕ್ಷಿಪಣಿಯು ತನಗೆ ತೀರಾ ಹತ್ತಿರವಾದರೆ, ಎಲೆಕ್ಟ್ರೋಮ್ಯಾಗ್ನಟಿಕ್ ಪಲ್ಸ್‌ಗಳಲ್ಲಿ ಏರುಪೇರು ಮಾಡಿ, ಕ್ಷಿಪಣಿಯ ಹಾದಿ ತಪ್ಪಿಸಬಲ್ಲದು. ಚೀನಾದ ಜೆ-20 ರಫೇಲ್
ಇತ್ತ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಬಂದಿಳಿಯಲಿರುವ ಸುದ್ದಿ ಬರುತ್ತಿರುವಂತೆಯೇ, ಸುದ್ದಿ ಮಾಧ್ಯಮಗಳಲ್ಲಿ ರಫೇಲ್‌ಗೆ ಚೀನಾದ ಚೆಂಗ್ಡು-ಜೆ 20 ಯುದ್ಧ ವಿಮಾನಗಳನ್ನು ಹೋಲಿಸಿ, ಯಾವುದರ ಸಾಮರ್ಥ್ಯ ಹೆಚ್ಚು ಎಂದು ನೋಡಲಾಗುತ್ತಿದೆ. ಭಾರತದ ಅತ್ಯಾಧುನಿಕ ಯುದ್ಧ ವಿಮಾನವಾಗಿರುವ ರಫೇಲ್ ಅನ್ನು, ಚೀನಾದ ಅತ್ಯಾಧುನಿಕ ವಿಮಾನವಾದ ಚೆಂಗ್ಡು-ಜೆ 20ಗೆ ಹೋಲಿಸಲಾಗುತ್ತಿರುವುದು ನಿರೀಕ್ಷಿತವೇ…