Advertisement
ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯ ದಲ್ಲಿ ಹದ್ದಾದ್ ಮಯ 3-6, 7-6 (7-5), 6-1 ಅಂತರದಿಂದ ಟ್ಯುನೀ ಶಿಯಾದ ಓನ್ಸ್ ಜೆಬ್ಯುರ್ ಆಟವನ್ನು ಮುಗಿಸಿದರು. ಇದರೊಂದಿಗೆ ಬ್ರಝಿಲ್ ಆಟಗಾರ್ತಿಯೊಬ್ಬರು ಮೊದಲ ಸಲ ರೊಲ್ಯಾಂಡ್ ಗ್ಯಾರೋಸ್ ಸೆಮಿಪೈನಲ್ ತಲುಪಿ ದಂತಾಯಿತು. ಹಾಗೆಯೇ 55 ವರ್ಷಗಳ ಬಳಿಕ ಬ್ರಝಿಲ್ ಆಟಗಾರ್ತಿ ಪ್ರಥಮ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್‌ಗೆ ಏರಿದ ನಿದರ್ಶನವೂ ಇದಾ ಗಿದೆ. 1968ರ ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಮರಿಯಾ ಬ್ಯುನೊ ಈ ಸಾಧನೆಗೈದಿದ್ದರು.
ಇಗಾ ಸ್ವಿಯಾಟೆಕ್ ಮತ್ತು ಅಮೆ ರಿಕದ ಕೊಕೊ ಗಾಫ್ ನಡುವಿನ ದ್ವಿತೀಯ ಕ್ವಾರ್ಟರ್ ಫೈನಲ್ ಕಳೆದ ವರ್ಷದ ಫೈನಲ್ ಪಂದ್ಯದ ಪುನರಾವರ್ತನೆ ಆಗಿತ್ತು. ಎರಡರಲ್ಲೂ ಸ್ವಿಯಾಟೆಕ್ ಅವರೇ ಗೆದ್ದು ಬಂದರು. ಸೇಡು ತೀರಿಸಿ ಮುನ್ನಡೆಯುವ ಯೋಜನೆಯಲ್ಲಿದ್ದ ಗಾಫ್ ಅವರ ಗ್ರಾಫ್ ಮತ್ತೆ ಕೆಳಗಿಳಿಯಿತು. ಸ್ವಿಯಾಟೆಕ್ 6-4, 6-2 ಅಂತರದ ಸುಲಭ ಗೆಲುವು ಒಲಿಸಿಕೊಂಡರು. ಇದರೊಂದಿಗೆ ಗಾಫ್ ವಿರುದ್ಧ ಆಡಿದ ಏಳೂ ಪಂದ್ಯಗಳಲ್ಲಿ ಸ್ವಿಯಾಟೆಕ್ ಜಯ ಸಾಧಿಸಿದಂತಾಯಿತು. ಈ 7 ಪಂದ್ಯಗಳಲ್ಲಿ ಗಾಫ್ಗೆ ಒಂದೂ ಸೆಟ್ ಗೆಲ್ಲಲಾಗಲಿಲ್ಲ ಎಂಬುದನ್ನೂ ಇಲ್ಲಿ ಉಲ್ಲೇಖೀಸಬೇಕಾಗುತ್ತದೆ.
Related Articles
Advertisement