Advertisement
ವನಿತಾ ಸಿಂಗಲ್ಸ್‌ನಲ್ಲಿ 20ನೇ ಶ್ರೇಯಾಂಕದ ದರಿಯಾ ಕಸತ್ಕಿನಾ ಇಟಲಿಯ ಕ್ಯಾಮಿಲಾ ಜಾರ್ಜಿ ವಿರುದ್ಧ 6-2, 6-2 ನೇರ ಸೆಟ್‌ಗಳಿಂದ ಗೆದ್ದು ಬಂದರು. ಅನಂತರದ ಮುಖಾಮುಖಿಯಲ್ಲಿ ವೆರೋನಿಕಾ ಕುಡೆರ್ಮೆಟೋವಾ 3 ಸೆಟ್‌ಗಳ ಹೋರಾಟದ ಬಳಿಕ ಅಮೆರಿಕದ ಮ್ಯಾಡಿಸನ್ ಕೀಸ್ ಅವರನ್ನು 1-6, 6-3, 6-1 ಅಂತರದಿಂದ ಪರಾಭವಗೊಳಿಸಿದರು.
Related Articles
ಕೂಟದ ಸ್ಟಾರ್ ಆಟಗಾರರಾದ ನೊವಾಕ್ ಜೊಕೋವಿಕ್ ಮತ್ತು ರಫೆಲ್ ನಡಾಲ್ ಕ್ವಾರ್ಟರ್ ಪೈನಲ್‌ನಲ್ಲಿ ಮುಖಾಮುಖಿ ಆಗುತ್ತಿರುವುದು ಈ ಕೂಟದ ವಿಶೇಷ. 2006ರ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಇವರಿಬ್ಬರು ಮೊದಲ ಸಲ ಮುಖಾಮುಖೀ ಆಗಿದ್ದರು.
Advertisement
ಅಲ್ಲಿಂದೀಚೆ ಸಮಬಲದ ಹೋರಾಟ ನಡೆಸುತ್ತ ಬಂದಿದ್ದಾರೆ. ಇದರಲ್ಲಿ ನಡಾಲ್ 30-28 ಅಂತರದ ಅಲ್ಪ ಮುನ್ನಡೆ ಹೊಂದಿದ್ದಾರೆ. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ನಡಾಲ್ 5 ಸೆಟ್‌ಗಳ ಕಾದಾಟದ ಬಳಿಕ ಕೆನಡಾದ ಫೆಲಿಕ್ಸ್ ಔಗರ್ ಅಲಿಯಾಸಿಮ್ ವಿರುದ್ಧ 3-6, 6-3, 6-2, 3-6, 6-3 ಅಂತರದ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಜೊಕೋವಿಕ್ 6-1, 6-3, 6-3 ಸೆಟ್‌ಗಳಿಂದ ಡೀಗೊ ಶಾರ್ಟ್ಸ್ ಮನ್‌ಗೆ ಸೋಲುಣಿಸಿದ್ದರು.
ರೂಡ್ ಗೆಲುವಿನ ರೋಡ್ಪುರುಷರ ಸಿಂಗಲ್ಸ್‌ನಲ್ಲಿ ನಾರ್ವೆಯ ಕ್ಯಾಸ್ಪರ್ ರೂಡ್ ಮೊದಲ ಸಲ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿದರು. ಅವರು ಪೋಲೆಂಡ್‌ನ ಹ್ಯೂಬರ್ಟ್ ಹುರ್ಕಾಝ್ ವಿರುದ್ಧ 6-2, 6-3, 3-6, 6-3 ಅಂತರದಿಂದ ಗೆದ್ದು ಬಂದರು. ಹೋಲ್ಜರ್ ರುನೆ 7-5, 3-6, 6-3, 6-4ರಿಂದ ಸಿಸಿಪಸ್‌ಗೆ ಸೋಲಿನ ಆಘಾತವಿಕ್ಕಿದರು.