Advertisement
2002, 2013 ಮತ್ತು 2015ರಲ್ಲಿ ಪ್ರಶಸ್ತಿ ಜಯಿಸಿದ ಸೆರೆನಾ ವಿಲಿಯಮ್ಸ್ ಮೊದಲ ಸುತ್ತಿನ ಪಂದ್ಯವನ್ನು ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪ್ಲಿಸ್ಕೋವಾ ವಿರುದ್ಧ ಆಡಲಿದ್ದಾರೆ. ಮಾಜಿ ನಂ.1 ಆಟಗಾರ್ತಿ ಸೆರೆನಾ ಈಗ 453ರಷ್ಟು ಕೆಳ ರ್‍ಯಾಂಕಿಂಗ್ ಹೊಂದಿದ್ದಾರೆ. 2017ರ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಬಳಿಕ ಸೆರೆನಾ ಆಡುತ್ತಿರುವ ಮೊದಲ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿ ಇದೆಂಬುದು ವಿಶೇಷ.
Related Articles
Advertisement
ನಡಾಲ್-ಡೊಲ್ಗೊಪೊಲೋವ್11ನೇ ರೊಲ್ಯಾಂಡ್ ಗ್ಯಾರೋಸ್ ಪ್ರಶಸ್ತಿ ಎತ್ತಲು ಕಾತರಗೊಂಸಡಿರುವ ರಫೆಲ್ ನಡಾಲ್ ಉಕ್ರೇನಿನ ಅಲೆಕ್ಸಾಂಡರ್ ಡೊಲ್ಗೊಪೊಲೋವ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಈ ವರ್ಷ ಈಗಾಗಲೇ ರೋಮ್, ಬಾರ್ಸಿಲೋನಾ ಹಾಗೂ ಮಾಂಟೆ ಕಾರ್ಲೊ ಪ್ರಶಸ್ತಿ ಎತ್ತಿರುವ ನಡಾಲ್, ಉಕ್ರೇನ್ ಆಟಗಾರನೆದುರು 7-2 ಗೆಲುವಿನ ದಾಖಲೆ ಹೊಂದಿದ್ದಾರೆ. ನಡಾಲ್ ಅಭಿಯಾನ ಮುಂದುವರಿಯುತ್ತ ಹೋದರೆ, 3ನೇ ಸುತ್ತಿನಲ್ಲಿ ರಿಚರ್ಡ್ ಗಾಸ್ಕ್ವೆಟ್, 4ನೇ ಸುತ್ತಿನಲ್ಲಿ ಡೆನ್ನಿಸ್ ಶಪೊವಲೋವ್ ವಿರುದ್ಧ ಆಡಬೇಕಾದೀತು. ಕ್ವಾರ್ಟರ್ ಫೈನಲ್‌ನಲ್ಲಿ ಕೆವಿನ್ ಆ್ಯಂಡರ್ಸನ್, ಸೆಮಿಫೈನಲ್‌ನಲ್ಲಿ ಮರಿನ್ ಸಿಲಿಕ್ ಎದುರಾಗುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಪ್ಯಾರಿಸ್‌ನಲ್ಲಿ ಈವರೆಗೆ 3ನೇ ಸುತ್ತು ದಾಟದ ಅಲೆಕ್ಸಾಂಡರ್ ಜ್ವೆರೇವ್ ಲಿಥುವಾನಿಯಾದ ರಿಕಾರ್ಡಿಸ್ ಬೆರಂಕಿಸ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. 2016ರ ಚಾಂಪಿಯನ್ ನೊವಾಕ್ ಜೊಕೋವಿಕ್ ಅವರಿಗೆ 4ನೇ ಸುತ್ತಿನಲ್ಲಿ ಗ್ರಿಗರ್ ಡಿಮಿಟ್ರೋವ್ ಎದುರಾಗಬಹುದು.