Advertisement
ಹಾಲಿ ಚಾಂಪಿಯನ್ ಕಿಡಂಬಿ ಶ್ರೀಕಾಂತ್, ಪಿ. ವಿ. ಸಿಂಧು ಹಾಗೂ ಸೈನಾ ನೆಹ್ವಾಲ್ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಈ ಋತುವಿನ ಮೊದಲ ಪ್ರಮುಖ ಬಿಡಬ್ಲ್ಯುಎಫ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಸತತ ಟೂರ್ನಿಗಳಲ್ಲಿ ಮುಗ್ಗರಿಸುತ್ತ ಬಂದಿರುವ ಭಾರತೀಯ ಆಟಗಾರರಿಗೆ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಅನಿವಾರ್ಯತೆಯಿದೆ.
ರವಿವಾರ ಡೆನ್ಮಾರ್ಕ್ ಓಪನ್ ಫೈನಲ್‌ನಲ್ಲಿ ಸೋತ ಸೈನಾ ನೆಹ್ವಾಲ್ ಹಾಗೂ ಸೆಮಿಫೈನಲ್ ಪ್ರವೇಶಿಸಿದ್ದ ಕೆ. ಶ್ರೀಕಾಂತ್ ಅವರಿಗೆ ಈ ಟೂರ್ನಿಯ ತಯಾರಿಗೆ ಹೆಚ್ಚಿನ ಸಮಯ ದೊರೆತಿಲ್ಲ. ಹೀಗಾಗಿ ಅವರು ವಿಶ್ರಾಂತಿ ಇಲ್ಲದೆ ಒತ್ತಡದಲ್ಲಿ ಆಡಬೇಕಾದ ಪರಿಸ್ಥಿತಿ ಬಂದಿದೆ. ಇತ್ತ ಡೆನ್ಮಾರ್ಕ್ ಓಪನ್‌ನ ಮೊದಲ ಸುತ್ತಿನಲ್ಲೇ ಅಘಾತ ಅನುಭವಿಸಿದ ಪಿ. ವಿ. ಸಿಂಧು ಫ್ರಾನ್ಸ್‌ನಲ್ಲಿ ಮತ್ತೆ ಟ್ರ್ಯಾಕ್‌ಗೆ ಮರಳುಲೇಬೇಕಿದೆ. ಉಳಿದಂತೆ ಬಿ. ಸಾಯಿ ಪ್ರಣೀತ್, ಸಮೀರ್ ವರ್ಮ ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ-ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಸ್ಪರ್ಧಿಸಲಿದ್ದಾರೆ. ಪ್ರಶಸ್ತಿ ಉಳಿಸಿಕೊಳ್ಳುವರೇ ಶ್ರೀ?
ಕಳೆದ ವರ್ಷದ ಪುರುಷರ ಸಿಂಗಲ್ಸ್ ನಲ್ಲಿ ಕಿಡಂಬಿ ಶ್ರೀಕಾಂತ್ ಜಪಾನಿನ ಕೆಂಟ ನಿಶಿಮೊಟೊ ಅವರನ್ನು 21-14, 21-13 ಅಂತರದಿಂದ ಮಣಿಸಿ ಪ್ರಶಸ್ತಿ ಎತ್ತಿದ್ದರು. ಇದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವರೇ ಎಂಬುದೊಂದು ಕುತೂಹಲ. ಶ್ರೀಕಾಂತ್ ಈ ಸಲ ಆರಂಭಿಕ ಸುತ್ತಿ ನಲ್ಲಿ ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್ ವಿರುದ್ಧ ಆಡಲಿದ್ದಾರೆ. ವನಿತಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಜಪಾನಿನ ಸಯೇನಾ ಕವಾಕಮಿ ಅವರನ್ನು, ಪಿ.ವಿ. ಸಿಂಧು ಚೀನ ಮೂಲದ ಅಮೆರಿಕನ್ ಆಟಗಾರ್ತಿ ಬೀವೆನ್ ಜಂಗ್ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ.
Related Articles
Advertisement