Advertisement

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶರಣ ಬಸವ ಬಿಸರಳ್ಳಿ ನಿಧನ

10:21 PM Oct 17, 2021 | Team Udayavani |

ಹುಬ್ಬಳ್ಳಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ನಿವೃತ್ತ ಶಿಕ್ಷಕ ಶರಣ ಬಸವ ಬಿಸರಳ್ಳಿ (94) ರವಿವಾರ ಹುಬ್ಭಳ್ಳಿಯಲ್ಲಿ ಲಿಂಗೈಕ್ಯರಾದರು.

Advertisement

ಮೃತರು ಐವರು ಪುತ್ರರು,ಇಬ್ಬರು ಪುತ್ರಿಯರು ,ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ರವಿವಾರ ಸರ್ಕಾರಿ ಗೌರವ ದೊಂದಿಗೆ ಕೊಪ್ಪಳ ಜಿಲ್ಲೆ ಬಿಸರಳ್ಳಿಯಲ್ಲಿ ನಡೆಯಿತು.

ಮೂಲತಃ ಕೊಪ್ಪಳದ ವರಾಗಿದ್ದ ಅವರು ಬ್ರಿಟಿಷ್ ಸಾಮ್ರಾಜ್ಯದ ಪತನದ ಕಾಲದಲ್ಲಿ ಯುವ ಪಡೆ ಕಟ್ಟಿಕೊಂಡ ಚಳುವಳಿ ಬಲ ಪಡೆಸಿದ್ದರು.

ಸ್ವಾತಂತ್ರ್ಯದ ನಂತರ ಶಿಕ್ಷಕ ವೃತ್ತಿ ಸ್ವೀಕರಿಸಿದ ಅವರು ಜೀವನದ ಉದ್ದಕ್ಕೂ ವಿದ್ಯಾರ್ಥಿಗಳಿಗೆ ಶಿಸ್ತು, ದೇಶಭಕ್ತಿ ಮತ್ತು ಸೌಹಾರ್ದ ತೆ ಪಾಠ ಮಾಡಿದ್ದರು. ನಿವೃತ್ತಿ ನಂತರ ಕೂಡ ಸಮಾಜ ಸೇವೆ ಯಲ್ಲಿ ನಿರತರಾಗಿದ್ದರು.

ಇಳಿವಯಸ್ಸಿನಲ್ಲೂ ನಿರಂತರ ಅಧ್ಯಯನಶೀಲರಾಗಿ ಹಂಪಿ ಕನ್ನಡ ವಿವಿಯಿಂದ ಪಿಎಚ್ ಡಿ ಅಧ್ಯಯನ ದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

Advertisement

ಇದನ್ನೂ ಓದಿ:ಸಿಂಘು ಗಡಿ ಹತ್ಯೆ: ಪೊಲೀಸರೆದುರು ಶರಣಾದ ಮತ್ತಿಬ್ಬರು ನಿಹಾಂಗ್ ಸಿಖ್ಖರು

ಶರಣ ಜೀವಿಗಳಾಗಿದ್ದ ಅವರು ಟ್ರಸ್ಟ್ ರಚಿಸಿ ಅದರ ಮೂಲಕ ನಾಡಿನಲ್ಲಿ ವಿನೂತನ ಸೇವೆ ಮಾಡುತ್ತಿದ್ದ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿ ಪ್ರೋತ್ಸಾಹಿಸುತ್ತಿದ್ದರು.

ಅವರ ನಿಧನಕ್ಕೆ ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಗುರು ಸಿದ್ದರಾಜಯೋಗೇಂದ್ರ ಸ್ವಾಮೀಜಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಸದಸ್ಯರು, ಯು.ಎ.ಇ ದುಬೈ ಬಸವ ಸಮಿತಿ ಸದಸ್ಯ ರಾದ ಚಂದ್ರಶೇಖರ ಲಿಂಗದಳ್ಳಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next